I.N.D.I ಮೈತ್ರಿಕೂಟದ ನಾಯಕರು ಸನಾತನ ಧರ್ಮದ ವಿರುದ್ಧವಾಗಿ ಹೇಳಿರುವ ಮಾತುಗಳನ್ನು ಓದಿ

ಇಂಡಿ ಅಲಯನ್ಸ್ ಆರಂಭಿಸಿದ್ದು 2024 ರ ಲೋಕಸಭಾ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಎಂಬುದು ಮೇಲ್ನೋಟಕ್ಕೆ ಕಾಣಿಸಿದರೂ ಇದರ ಸತ್ಯಾಸತ್ಯತೆ ಬೇರೆಯದೆಯೇ ಇದೆಯೆಂದು ಯಾರಿಗಾದರೂ ಅನ್ನಿಸದೆ ಇರಲಾರದು. ಇಲ್ಲವಾದಲ್ಲಿ ಒಬ್ಬ ವ್ಯಕ್ತಿಯನ್ನು, ಒಬ್ಬರು ಮೋದಿಯನ್ನು ಎದುರಿಸಲು ದೇಶದ ಎಲ್ಲಾ ಎಡಪಂಥೀಯ ನಾಯಕರುಗಳು, ಹಿಂದೂ ಧರ್ಮದ ವಿರೋಧಿಗಳು ಒಟ್ಟಾಗಿದ್ದಾರೆ ಎಂದರೆ ಕೊಂಚ ಯೋಚಿಸಬೇಕಾದ ವಿಷಯವೇ ಸರಿ.‌

ಈ ಗುಂಪಿಗೆ ಇಂಡಿ ಅಲಯನ್ಸ್ ಎಂದು ಹೆಸರಿಟ್ಟದ್ದಕ್ಕಿಂತ ‘Anti Sanatana Dharma Force’ ಎಂದು ಹೆಸರಿಸಬಹುದಿತ್ತೇನೋ. ಹಾಗೆಂದು ನಾವೀಗ ಸುಮ್ಮನೇ ಹೇಳುತ್ತಿಲ್ಲ, ಇಂಡಿ ಅಲಯನ್ಸ್‌ನ ವಿವಿಧ ನಾಯಕರು ಸನಾತನ ಧರ್ಮದ ಬಗ್ಗೆ ಮಾತನಾಡಿದ ಕೆಲವು ಘಟನೆಗಳನ್ನು ನಾವಿಲ್ಲಿ ಉಲ್ಲೇಖಿಸುತ್ತೇವೆ ನೀವೇ ಓದಿ ಅದು ಇಂಡಿ ಅಲಯನ್ಸೋ ಅಥವಾ Anti Sanathana Dahrma Force ಎಂಬುದನ್ನು ನಿರ್ಧರಿಸಿ.

1) ಉದಯನಿಧಿ ಸ್ಟ್ಯಾಲಿನ್ – ಡಿಎಂಕೆ

ಉದಯನಿಧಿ ಸ್ಟ್ಯಾಲಿನ್
ಕೆಲವು ವಿಷಯಗಳನ್ನು ನಾವು ವಿರೋಧಿಸಲು ಸಾಧ್ಯವಿಲ್ಲ ಅದನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ ನಾವು ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೇಯೇ, ನಾವು ಸನಾತನ ಧರ್ಮವನ್ನು ವಿರೋಧಿಸುವುದಕ್ಕಿಂತ ಅದನ್ನು ನಿರ್ಮೂಲನೆ ಮಾಡಬೇಕಾಗಿದೆ.

2) ಎ. ರಾಜಾ – ಡಿಎಂಕೆ

Andimuthu Raja
ಸನಾತನ ಧರ್ಮ ಎನ್ನುವುದು ನಮಗೆ ಒಂದು ರೀತಿ ಕುಷ್ಠರೋಗ ಹಾಗೂ ಏಡ್ಸ್ ಇದ್ದ ಹಾಗೆ.

3) ಪ್ರಿಯಾಂಕ್ ಖರ್ಗೆ – ಕಾಂಗ್ರೆಸ್

Priyank Kharge
ಉದಯನಿಧಿ ಅವರ ಹೇಳಿಕೆಯನ್ನು ಸಮರ್ಥಿಸುತ್ತಾ ಯಾವ ಧರ್ಮವು ಸಮಾನತೆ ಮತ್ತು ಮಾನವ ಹಕ್ಕುಗಳನ್ನು ಬೆಂಬಲಿಸದ ಯಾವುದೇ ಧರ್ಮವೂ ಕೂಡಾ ರೋಗಕ್ಕೆ ಸಮವಾದದ್ದು.

4) A.N ಶಂಶೀರ್ & M V ಗೋವಿಂದನ್ – CPM

A. N. Shamseer & M. V. Govindan
ಶ್ರೀ ಗಣೇಶ ಎನ್ನುವುದು ಒಂದು ಸುಳ್ಳು ಕಥೆ. ಶಂಶೀರ್ ಅವರ ಬಳಿ ಇಸ್ಲಾಂ ಬಗ್ಗೆ ಕೇಳಿದಾಗ ಎಲ್ಲಾ ನಂಬಿಕೆಗಳು ಸುಳ್ಳಲ್ಲ ಎಂದು ಉತ್ತರಿಸಿದರು.

5) ಪಿ ಜಯರಂಜನ್ – CPM


ಕಾಸರಗೋಡಿನಲ್ಲಿ‌ ಒಂದು ಭಾಷಣದ ವೇಳೆ, ಪರಶುರಾಮನ ಕಥೆ ಒಂದು ಕಟ್ಟು ಕಥೆಯಾಗಿದೆ‌ ಎಂದಿದ್ದರು.

6) ರಿತಾ ಲಾಲ್ ಯಾದವ್ – RJD

Ritlal Yadav
ರಾಮ‌ಚರಿತೆ ಮಾನಸವನ್ನು ಮಸೀದಿಯಲ್ಲಿ ಕುಳಿತು ಬರೆದದ್ದು.

7) ಚಂದ್ರಶೇಖರ್ ಯಾದವ್ – RJD

Chandrashekhar Yadav
ರಾಮಚರಿತ ಮಾನಸವು ದ್ವೇಷವನ್ನು ಪಸರಿಸುತ್ತದೆ.

8) ಸ್ವಾಮಿ ಪ್ರಸಾದ್ ಮೌರ್ಯ – SP


ಹಿಂದೂಯಿಸಂ/ಹಿಂದೂ ಎನ್ನುವ ಧರ್ಮವೇ ಇಲ್ಲ.

9) ಉದ್ಧವ್ ಬಾಳಾಸಾಹೇಬ್ ಠಾಕ್ರೆ – Uddhav Shivasena


ಹಿಂದೂಗಳ ಸ್ವಸ್ತಿಕ ಚಿಹ್ನೆಯು ಜರ್ಮನಿಯ ನಾಝಿಗಳ ಹಕೇನ್‌ಕ್ರುಯೇಜ್ (Hooked Cross) ಗೆ ಸಮವಾಗಿದೆ.

10) ಮಹುವಾ ಮೊಯಿತ್ರಾ – TMC


ಕಾಶಿಯ ಗ್ಯಾನವಾಪಿ ತೀರ್ಪನ್ನು ಅಣಕ ಮಾಡುತ್ತಾ ಶಿವಲಿಂಗದ ರೂಪದಂತೆ ಕಾಣುವ ಬಾವಾ ಅಟೋಮಿಲ್ ರಿಸರ್ಚ್ ಸೆಂಟರ್‌ನ ಫೋಟೋವೊಂದನ್ನು ಹಾಕಿ ಮುಂದೆ ಇದನ್ನು ಕೂಡಾ ಅಗೆಯುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

11) ಸೆಂಥಿಲ್ ಕುಮಾರ್ – DMK


ರಾಜಸ್ಥಾನ, ಛತ್ತೀಸ್ಗಢ ಹಾಗೂ ಮಧ್ಯಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಗೆದ್ದದ್ದನ್ನು ಅಣಕ‌ ಮಾಡುತ್ತಾ ಗೋಮೂತ್ರದ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆಲ್ಲುತ್ತದೆ ಎನ್ನುವ ಮೂಲಕ ಹಿಂದೂಗಳ ನಂಬಿಕೆಗೆ ಘಾಸಿ ಮಾಡಿದ್ದಾರೆ.

12) ರಾಜೇಂದ್ರ ಪಾಲ್ ಗೌತಮ್ – AAP


ದಲಿತ ಮಹಿಳೆಯರನ್ನು ದೇವಸ್ಥಾನಗಳಲ್ಲಿ ರೇಪ್ ಮಾಡಿ ಸಾಯಿಸಲಾಗುತ್ತಿತ್ತು. ಹಾಗಾಗಿ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಿ.

13) ಸಿದ್ಧರಾಮಯ್ಯ, ಕರ್ನಾಟಕದ ಮುಖ್ಯಮಂತ್ರಿ – Congress


ನಾನು ಹಿಂದುತ್ವದ ವಿರೊಧಿ, ಅದು ಕೊಲೆ, ಹಿಂಸೆ ಮತ್ತು ತಾರತಮ್ಯವನ್ನು ಪ್ರೋತ್ಸಾಹಿಸುತ್ತದೆ.

ಇದೆಲ್ಲಕ್ಕೂ ಮಿಗಿಲಾಗಿ ರಾಮಮಂದಿರದ ವಿಷಯ ಸುಪ್ರಿಂ ಕೋರ್ಟ್‌ನಲ್ಲಿ ಇರುವಾಗ ಪ್ರಭು ಶ್ರೀ ರಾಮನ ವಿರುದ್ಧವಾಗಿ, ರಾಮಾಯಣ ಕಟ್ಟುಕಥೆಯೆಂದು, ರಾಮ ಸೇತು ಸುಳ್ಳೆಂದು, ರಾಮ‌ಮಂದಿರದ ವಿರುದ್ಧ ಮಾತನಾಡಲು ಕಾಂಗ್ರೆಸ್ ಬರೋಬ್ಬರಿ 24 ಜನ ವಕೀಲರನ್ನು ಕಪಿಲ್ ಸಿಬಲ್ ನೇತೃತ್ವದಲ್ಲಿ ನೇಮಿಸಿತ್ತು ಎಂಬುದನ್ನು ಹಿಂದೂಗಳು ಯಾವತ್ತಿಗೂ ಮರೆಯಬಾರದು.

ಮೇಲೆ ಕೊಟ್ಟಿರುವ ಉದಾಹರಣೆಗಳು ಕೇವಲ ಸ್ಯಾಂಪಲ್‌ಗಳು ಅಷ್ಟೇ, ದಿನ ಬೆಳಗಾದರೆ ಹಿಂದೂಗಳನ್ನು, ಸನಾತನ ಧರ್ಮವನ್ನು ಜರೆಯುವುದು, ಗೋಹತ್ಯೆಯನ್ನು ಪ್ರೋತ್ಸಾಹಿಸುವುದು, ಹಿಂದೂಗಳ ಆಚರಣೆಗಳನ್ನು ಹೀಗಳೆಯುವವರನ್ನು ಸನ್ಮಾನಿಸುವುದು, ಅಂತವರಿಗೆ ರಕ್ಷಣೆ ನೀಡಿ ಬೆಂಬಲಿಸುವುದು. ಈ ಇಂಡಿ ಅಲಯನ್ಸ್‌ನ ನಿತ್ಯ ಕಾಯಕವಾಗಿದೆ. ಇಂಡಿ ಅಲಯನ್ಸ್ ‌ಗೆ ವೋಟು ನೀಡುವ ಮುನ್ನ ಇದೆಲ್ಲಾ ಅಂಶಗಳನ್ನೂ ಕೂಡಾ ನೆನಪಿನಲ್ಲಿರಲಿ.

You might also like
Leave A Reply

Your email address will not be published.