ಇಂಡಿ ಒಕ್ಕೂಟದಿಂದ ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಪಟ್ಟದ ಆಫರ್ – ಕೆಸಿ ತ್ಯಾಗಿ ಕಟು ಟೀಕೆ

ಜೆಡಿಯು ಸಲಹೆಗಾರ ಮತ್ತು ರಾಷ್ಟ್ರೀಯ ವಕ್ತಾರ ಕೆಸಿ ತ್ಯಾಗಿ ಅವರು ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಹುದ್ದೆಯನ್ನು ನೀಡುವ ಮೂಲಕ ಆಶ್ವಾಸನೆ ನೀಡಿ ಸೆಳೆಯಲು ಪ್ರಯತ್ನಿಸುತ್ತಿರುವ ಇಂಡಿ ಮೈತ್ರಿಕೂಟದ ನಾಯಕರನ್ನು ಟೀಕೆ ಮಾಡಿದರು. ಮೊದಲಿಗೆ ಇಂಡಿ ಮೈತ್ರಿಕೂಟವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ವಿರೋಧ ಪಕ್ಷವು ಕೆಟ್ಟದಾಗಿ ನಡೆಸಿಕೊಂಡಿತ್ತು ಎಂದು ಕೆಸಿ ತ್ಯಾಗಿ ಹೇಳಿದ್ದಾರೆ. ಜೆಡಿಯು ನಾಯಕ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ರಾಷ್ಟ್ರೀಯ ಸಂಚಾಲಕರನ್ನಾಗಿ ಮಾಡಲು ನಿರಾಕರಿಸಿದ ಅದೇ ಇಂಡಿ ಮೈತ್ರಿಕೂಟ ಈಗ ಅವರಿಗೆ ಪ್ರಧಾನಿ ಸ್ಥಾನವನ್ನು ನೀಡಲು ಮುಂದೆ ಬಂದಿದೆ ಎಂದು ಲೇವಡಿ ಮಾಡಿದರು. ನಿತೀಶ್ ಅವರು ಈ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಮತ್ತು ಪಿಎಂ ಮೋದಿ ನಾಯಕತ್ವದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಯು ಬೆಂಬಲವನ್ನು ಪುನರುಚ್ಚರಿಸಿದ್ದಾರೆ ಎಂದು ತ್ಯಾಗಿ ಹೇಳಿದ್ದಾರೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ದೊಂದಿಗೆ ತಮ್ಮ ಪಕ್ಷದ ಗೌರವವನ್ನು ಪುನಃಸ್ಥಾಪಿಸಿರುವುದರಿಂದ ಹಿಂತಿರುಗಿ ನೋಡುವ ಅಥವಾ ಇಂಡಿ ಮೈತ್ರಿಕೂಟಕ್ಕೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಕೆಸಿ ತ್ಯಾಗಿ ಪ್ರತಿಪಾದಿಸಿದರು.

ಶುಕ್ರವಾರ ದಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ತ್ಯಾಗಿ, “ನಿತೀಶ್ ಕುಮಾರ್ ಅವರನ್ನು ಇಂಡಿ ಅಲಯನ್ಸ್ ಬ್ಲಾಕ್‌ನ ರಾಷ್ಟ್ರೀಯ ಸಂಚಾಲಕರನ್ನಾಗಿ ಮಾಡಲು ನಿರಾಕರಿಸಿದವರು ಈಗ ನಿತೀಶ್ ಅವರನ್ನು ಪ್ರಧಾನಿ ಮಾಡಲು ಆಫರ್‌ಗಳನ್ನು ನೀಡುತ್ತಿರುವುದು ರಾಜಕೀಯದ ಆಟವಾಗಿದೆ” ಎಂದು ಹೇಳಿದರು .

ಕಾಂಗ್ರೆಸ್ ಮತ್ತು ಇತರ ಪಕ್ಷಗಳು ನಿತೀಶ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರಿಂದ ಈ ವರ್ಷದ ಜನವರಿಯಲ್ಲಿ ಅವರು ಎನ್‌ಡಿಎಗೆ ಮರಳಲು ಪ್ರೇರೇಪಿಸಿತು ಎಂದು ಕೆಸಿ ತ್ಯಾಗಿ ಹೇಳಿದರು. ಚುನಾವಣಾ ಪ್ರಚಾರದ ವೇಳೆ ನಿತೀಶ್ ಕುಮಾರ್ ಅವರು ಹಲವಾರು ಬಾರಿ ಹೇಳಿದಂತೆ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಣೆ ಮಾಡಿದ್ದಾರೆ. ನಾವು ಈಗ NDA ಯ ವ್ಯಾಲಿಡ್ ಪಾಲುದಾರರಾಗಿದ್ದೇವೆ ಮತ್ತು ಮೂರನೇ ಬಾರಿಗೆ ಪ್ರಧಾನಿಯಾಗಲು ಸಿದ್ಧರಾಗಿರುವ ಶ್ರೀ ನರೇಂದ್ರ ಮೋದಿಯವರ ಕೈಗಳನ್ನು ನಾವು ಬಲಪಡಿಸುತ್ತೇವೆ ಎಂದು ವಿಶ್ವಾಸಭರಿತ ನುಡಿಯನ್ನಾಡಿದ್ದಾರೆ.

ಶ್ರೀ ನರೇಂದ್ರ ಮೋದಿಯವರ ಕೈಗಳನ್ನು ನಾವು ಬಲಪಡಿಸುತ್ತೇವೆ ಎಂದು ವಿಶ್ವಾಸಭರಿತ ನುಡಿಯನ್ನಾಡಿದ್ದಾರೆ. -ನಿತೀಶ್ ಕುಮಾರ್
ಎನ್‌ಡಿಎಯೊಂದಿಗೆ ನಮ್ಮ ಗೌರವವನ್ನು ಪುನಃಸ್ಥಾಪಿಸಲಾಗಿದ್ದು ನಿತೀಶ್ ಕುಮಾರ್ ರಾಷ್ಟ್ರೀಯ ರಾಜಕೀಯದಲ್ಲಿ ಪಾಲುದಾರರಾಗಿದ್ದಾರೆ. ಮಿತ್ರ ಪಕ್ಷ ಬಿಜೆಪಿಯಿಂದ ನಮಗೆ ಹೆಚ್ಚಿನ ಗೌರವ ಸಿಗುತ್ತಿದ ಎಂದು ಸ್ಮರಿಸಿದರು.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 12 ಸ್ಥಾನಗಳನ್ನು ಪಡೆದಿದ್ದರೆ, ಚಂದ್ರಬಾಬು ನಾಯ್ಡು ಅವರ ಟಿಡಿಪಿ 16 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ 240 ಸ್ಥಾನಗಳನ್ನು ಗೆದ್ದು ತನ್ನಷ್ಟಕ್ಕೆ ಅರ್ಧಕ್ಕೆ ಕುಸಿದಿದೆ, ಆದರೆ ಮೈತ್ರಿಕೂಟದ ಪಾಲುದಾರರ ಬೆಂಬಲದೊಂದಿಗೆ ಸರ್ಕಾರ ರಚನೆ ಮತ್ತು ಅದರ ಮುಂದುವರಿಕೆಗೆ NDA ಸಂಪೂರ್ಣ ಬಹುಮತವನ್ನು ಪಡೆದಿದೆ. ಎನ್‌ಡಿಎ ಪಾಲುದಾರರ ಸಭೆಯಲ್ಲಿ, ಎರಡೂ ಮೈತ್ರಿ ಪಾಲುದಾರರು ಪಿಎಂ ಮೋದಿ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ಎನ್‌ಡಿಎಗೆ ಬೇಷರತ್ ಬೆಂಬಲವನ್ನು ನೀಡಿದರು ನಂತರ ಅಧ್ಯಕ್ಷ ದ್ರೌಪದಿ ಮುರ್ಮು ಅವರು ಐತಿಹಾಸಿಕ ಮೂರನೇ ಅವಧಿಗೆ ಸರ್ಕಾರ ರಚಿಸಲು ಬಿಜೆಪಿ ನಾಯಕ ನರೇಂದ್ರ ಮೋದಿ ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು .

You might also like
Leave A Reply

Your email address will not be published.