ಬೆಂಗಳೂರಿಗರೇ, ಈ ದಿನಗಳಲ್ಲಿ ಕರೆಂಟಿಲ್ಲ – ನಿಮ್ಮ ಏರಿಯಾ ಈ ಲಿಸ್ಟ್ ‘ನಲ್ಲಿದೆಯೇ ನೋಡಿ

ಬೆಂಗಳೂರು ನಗರದಲ್ಲಿ ತಮ್ಮ ವಿದ್ಯುತ್ ಮಾರ್ಗಗಳ ನಿರ್ವಹಣೆಯನ್ನು ಕೈಗೊಂಡಿರುವುದರಿಂದ ಕೆ.ಪಿ.ಟಿ.ಸಿ.ಎಲ್‌ ಮತ್ತು ಬೆಸ್ಕಾಂ ಸಂಸ್ಥೆಗಳು ತಮ್ಮ ವಿದ್ಯುತ್ ಮಾರ್ಗಗಳನ್ನು ದಿನವಾರು ಸ್ಥಗಿತಗೊಳಿಸಲಿವೆ.

ಬಾಕಿಯಿರುವ ಹಾಗೂ ಇನ್ನೇನು ಪೂರ್ಣಗೊಳ್ಳುವ ಹಂತದಲ್ಲಿರುವ ಕಾಮಗಾರಿಗಳನ್ನು ಮುಗಿಸುವ ಕಾರಣಕ್ಕೆ, ಜೂನ್ 12 ರವರೆಗೆ ಬೆಂಗಳೂರಿನ ವಿದ್ಯುತ್ ಮಾರ್ಗಗಳಲ್ಲಿ ವ್ಯತ್ಯಯವಾಗಲಿದ್ದು, ಉದ್ದೇಶಿತ ವಿದ್ಯುತ್ ನಿಲುಗಡೆಯ ದಿನವಾರು ವಿವರ ಈ ಕೆಳಗಿನಂತಿದೆ:

ಜೂನ್ 8 (ಬೆಳಿಗ್ಗೆ 10 ರಿಂದ ಸಂಜೆ 4): ಕ್ವೀನ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಮಿಲ್ಲರ್ಸ್ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ, ಅಲಿ ಅಸ್ಕರ್ ರಸ್ತೆ, ಚಾಂದಿನಿ ಚೌಕ್, ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ಬಂಬೂ ಬಜಾರ್ ರಸ್ತೆ, ಬ್ರಾಡ್‌ವೇ ರಸ್ತೆ, ಕಾಕ್‌ಬರ್ನ್ ರಸ್ತೆ, ಸೆಪಿಂಗ್ಸ್ ರಸ್ತೆ, ಬೌರಿಂಗ್ ಆಸ್ಪತ್ರೆ, ಇನ್‌ಫೆಂಟ್ರಿ ರಸ್ತೆ, ವಿವಿ ಟವರ್ಸ್, ಎಂಎಸ್ ಬಿಲ್ಡಿಂಗ್, ಸಿಐಡಿ, ಎಂಇಜಿ ಸೆಂಟರ್, ರಾಜಭವನ, ವಸಂತನಗರ, ವಿಧಾನಸೌಧ ಮತ್ತು ವಿಕಾಸ ಸೌಧ.

Bengaluru residents, no electricity these days - check if your area is on this list

ಜೂನ್ 09 (ಬೆಳಿಗ್ಗೆ 10.00 ರಿಂದ ಸಂಜೆ 4.00): ಯಡಿಯೂರು, ದೊಡ್ಡಮಧುರೆ, ಮನವಳ್ಳಿ, ಕಾಚೇನಹಳ್ಳಿ, ನಾಗಸಂದ್ರ, ಸಿಟಿ ಪಾಳ್ಯ, ತಿಪ್ಪೂರು, ಹೇಮಾವತಿ ಮತ್ತು ಚಿಕ್ಕಮಧುರೆ.

ಜೂನ್ 10 (ಬೆಳಿಗ್ಗೆ 10.00 ರಿಂದ ಸಂಜೆ 4.00): ಸಿ. ಕುಪ್ಪೆ, ತಾವರೆಕೆರೆ, ಹಕ್ಕಿ ಮಾರಿಪಾಳ್ಯ, ಹಂಗರಹಳ್ಳಿ, ಎಂ.ಹೆಚ್.ಪಾಳ್ಯ, ಟಿ.ಬೊಮ್ಮೇನಹಳ್ಳಿ, ನೀಲಸಂದ್ರ ಮತ್ತು ಆರ್.ಬ್ಯಾಡರಹಳ್ಳಿ.

ಜೂನ್ 11 (ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00): ಆಡುಗೋಡಿ, ಸಾಲಪುರಿಯ ಟವರ್, ಚಿಕ್ಕ ಆಡುಗೋಡಿ, ನಂಜಪ್ಪ ಲೇಔಟ್, ಚಿಕ್ಕ ಲಕ್ಷ್ಮಯ್ಯ ಲೇಔಟ್, ವಿಲ್ಸನ್ ಗಾರ್ಡನ್, ಲಕ್ಕಸಂದ್ರ ಮತ್ತು ಲಾಲ್’ಜೀ ನಗರ

ಜೂನ್ 12 (ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00): ಶ್ರೀನಗರ, ಹೊಸಕೆರೆಹಳ್ಳಿ, ವೀರಭದ್ರನಗರ, ನ್ಯೂ ಟಿಂಬರ್ಯಾರ್ಡ್ (ಎನ್‌ಟಿವೈ) ಲೇಔಟ್, ತ್ಯಾಗರಾಜನಗರ, ಬಿಎಸ್‌ಕೆ III ಹಂತ, ಕತ್ರಿಗುಪ್ಪೆ, ಗಿರಿನಗರ 4ನೇ ಹಂತ, ವಿಲ್ಸನ್ ಗಾರ್ಡನ್, ಜೆ.ಸಿ. ರಸ್ತೆ, ಶಾಂತಿನಗರ, ರಿಚ್‌ಮಂಡ್ ಸರ್ಕಲ್, ಎಲ್.ರೆಸಿಡೆನ್ಸಿ ರಸ್ತೆ ರಸ್ತೆ, ಸಂಪಂಗಿರಾಮನಗರ, ಕೆ.ಎಚ್.ರಸ್ತೆ, ಸುಬ್ಬಯ್ಯ ವೃತ್ತ ಮತ್ತು ಸುಧಾಮನಗರ.

ಮಹಾನಗರದ ನಾಗರಿಕರು ಈ ಉದ್ದೇಶಿತ ವಿದ್ಯುತ್ ಕಡಿತದವನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ರೀತಿಯ ಒತ್ತಡಗಳಿಲ್ಲದೆ, ಸಹಕರಸುವಂತೆ ಕೆ.ಪಿ.ಟಿ.ಸಿ.ಎಲ್ ಮತ್ತು ಬೆಸ್ಕಾಂ ವಿನಂತಿಸಿವೆ.

You might also like
Leave A Reply

Your email address will not be published.