ಸಮರ್ಪಕ ದಾಖಲೆ ಸಲ್ಲಿಸುವಲ್ಲಿ ವಿಫಲ – ನಾಲ್ಕು ಸಾವಿರ ಕೃಷಿ ವಿಜ್ಞಾನ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಕೃಷಿ ವಿಜ್ಞಾನ ಕೋರ್ಸ್‌ಗೆ (ಬಿ.ಎಸ್ಸಿ ಕೃಷಿ) ಕೃಷಿ ಕೋಟಾದಡಿಯಲ್ಲಿ ಸೀಟು ಪಡೆಯಬೇಕೆಂಬ ಹಂಬಲದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಅರ್ಹ ದಾಖಲೆಗಳನ್ನು ಸಲ್ಲಿಸದ ಕಾರಣಾಂತರದಿಂದ ಸುಮಾರು 4 ಸಾವಿರ ವಿದ್ಯಾರ್ಥಿಗಳು ಕೃಷಿ ಕೋಟಾದಿಂದ ವಂಚಿತರಾಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಹಾಗಾದ್ರೆ ಇವರ ಮುಂದಿನ ಭವಿಷ್ಯವೇನು? ಏನಿದು ಘಟನೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಕೃಷಿ ಕೋಟಾದಿಂದ ವಂಚಿತರಾಗುವ ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಳ್ಳಬೇಕಾದಲ್ಲಿ ಇಂದು (ಬುಧವಾರ – ಮೇ 8) ಸಂಜೆ 4 ಗಂಟೆಯೊಳಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕಿದೆ. ಅಂದರೆ, ಪ್ರಮಾಣಪತ್ರ ಇದ್ದರೂ ಸಲ್ಲಿಸದೇ ಇದ್ದವರು ಈಗ ನೀಡಬಹುದು. ಆದರೆ, ಪ್ರಮಾಣಪತ್ರ ಇಲ್ಲದೇ ಇದ್ದ ಪಕ್ಷದಲ್ಲಿ ಆ ವಿದ್ಯಾರ್ಥಿಗಳು ಇರುವ ಕಾಲಾವಕಾಶದಲ್ಲಿ ಒದಗಿಸುವುದು ಕಷ್ಟವಾಗಿರುವುದರಿಂದ ಅನರ್ಹರಾಗುವುದು ಬಹುತೇಕ ಖಚಿತವಾಗಿದೆ.

4,794 ವಿದ್ಯಾರ್ಥಿಗಳಿಗೆ ಅನರ್ಹತೆ ಭೀತಿ:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಸಿಇಟಿನಲ್ಲಿ ಕೃಷಿ ಕೋಟಾದಡಿ ಸೀಟು ಪಡೆಯುವ ಉದ್ದೇಶದಿಂದ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಈ ರೀತಿ ಅರ್ಜಿ ಸಲ್ಲಿಸಿದವರಲ್ಲಿ 18,241 ವಿದ್ಯಾರ್ಥಿಗಳು ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದು, 4,794 ವಿದ್ಯಾರ್ಥಿಗಳು ಪರೀಕ್ಷೆಗೂ ಮುನ್ನವೇ ಅನರ್ಹತೆ ಭೀತಿ ಎದುರಿಸುತ್ತಿದ್ದಾರೆ.

ಪ್ರಾಯೋಗಿಕ ಪರೀಕ್ಷೆಯನ್ನು ಬೆಂಗಳೂರು ಕೃಷಿ ವಿವಿ (ಗಾಂಧಿ ಕೃಷಿ ವಿಜ್ಞಾನ ಕೇಂದ್ರ) ಮೇ 14ರಂದು ನಡೆಸಲಿದ್ದು, ಇದಕ್ಕೆ ವಿದ್ಯಾರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಿ ಅರ್ಹ ಮತ್ತು ಅನರ್ಹ ಪಟ್ಟಿಯನ್ನು ಕೆಇಎಗೆ ನೀಡಿದೆ. ಈ ಬಾರಿ ನಡೆದ ಸಿಇಟಿಯಲ್ಲಿ 3.49 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಬಹುತೇಕ ವಿದ್ಯಾರ್ಥಿಗಳು ಬಿ.ಎಸ್ಸಿ (ಕೃಷಿ) ಸೀಟು ಪಡೆಯುವ ತವಕದಲ್ಲಿದ್ದರು.

ಪ್ರತಿವರ್ಷ ಅಂದಾಜು 1.60 ರಿಂದ 1.80 ಲಕ್ಷ ಅಭ್ಯರ್ಥಿಗಳು ಬಿ.ಎಸ್ಸಿ ಕೃಷಿಗೆ ಅರ್ಹತೆ ಪಡೆಯುತ್ತಾರೆ. 2023ರ ಸಿಇಟಿಯಲ್ಲಿ ನೋಂದಾಯಿಸಿದ್ದ 2.61 ಲಕ್ಷ ವಿದ್ಯಾರ್ಥಿಗಳ ಪೈಕಿ 1.64 ಲಕ್ಷ ವಿದ್ಯಾರ್ಥಿಗಳು ಬಿ.ಎಸ್ಸಿ ಕೃಷಿಗೆ ಅರ್ಹತೆ ಪಡೆದಿದ್ದರು.

Failure to submit adequate documents - fate of 4000 agricultural science students in doubt

ತಪ್ಪು ಮುಚ್ಚಳಿಕೆ ಪತ್ರ

ಕೃಷಿ ಕೋಟಾದಡಿ ಸೀಟು ಪಡೆಯಬೇಕಾದಲ್ಲಿ ಪೋಷಕರು ಕೃಷಿಕರಾಗಿರಬೇಕು. ಇದಕ್ಕೆ ದಾಖಲೆಗಳನ್ನು ಒದಗಿಸಬೇಕು. ಆದರೆ, ಅನರ್ಹತೆ ಆತಂಕದಲ್ಲಿರುವ 4,794 ವಿದ್ಯಾರ್ಥಿಗಳಲ್ಲಿ ಬಹುತೇಕರು ಕೃಷಿ ಪ್ರಮಾಣಪತ್ರ ಸಲ್ಲಿಸಿಲ್ಲ. ವಂಶವೃಕ್ಷ, ಆದಾಯ ಪ್ರಮಾಣ ಪತ್ರ ಸಲ್ಲಿಸಿಲ್ಲ. ಇನ್ನೂ ಕೆಲವರು ತಪ್ಪು ಮುಚ್ಚಳಿಕೆ ಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಈ ವಿದ್ಯಾರ್ಥಿಗಳನ್ನು ಅನರ್ಹರೆಂದು ಜಿಕೆವಿಕೆ ಪರಿಗಣಿಸಿದೆ.

ಕೃಷಿ ಸೀಟುಗಳ ಮಾಹಿತಿ (ತಾತ್ಕಾಲಿಕ)

  •  11 ಕೋರ್ಸ್‌ಗಳಲ್ಲಿ 3,545 ಸೀಟುಗಳಿದ್ದು, 2,579 ಸೀಟುಗಳು ಸಿಇಟಿ ಕೋಟಾಕ್ಕೆ ಸೇರಲಿವೆ.
  • ಪಶುಸಂಗೋಪನೆಯಲ್ಲಿ ಒಟ್ಟು 478 ಸೀಟುಗಳ
    ಪೈಕಿ 381 ಸೀಟುಗಳು ಸಿಇಟಿ ಕೋಟಾಕ್ಕೆ ಸೇರಿವೆ.
You might also like
Leave A Reply

Your email address will not be published.