ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ : ಬಿಜೆಪಿ ಕಾರ್ಯಕರ್ತನೇ ಆರೋಪಿ ಎಂದವರಿಗೆ ಉತ್ತರ ಕೊಟ್ಟ NIA

ಬೆಂಗಳೂರಿನ ರಾಮೇಶ್ವರ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಅವರನ್ನು ಆರೋಪಿ ಎಂದು ಪರಿಗಣಿಸಿ NIA (ರಾಷ್ಟ್ರೀಯ ತನಿಖಾ ದಳ) ಬಂಧಿಸಿದೆ ಎಂದು ಅನೇಕ‌ ಮಾಧ್ಯಮಗಳು ಹಾಗೂ ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದರ ಪರ ಮತ್ತು ವಿರೋಧವಾಗಿ ಹಲವಾರು ಕೂಗುಗಳು ಕೇಳಿ ಬರುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳವು ಸ್ಪಷ್ಟೀಕರಣ ನೀಡಿದ್ದು, ಸಾಯಿ ಪ್ರಸಾದ್ ಪ್ರಕರಣದ ಆರೋಪಿಯಲ್ಲ ಬದಲಿಗೆ ಅವರನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ ಎಂದಿದೆ. ಇನ್ನು ಪ್ರಕರಣದ ಪೂರ್ವಾಪರ ತಿಳಿಯದೆ ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್ ನಿಂದ ಟ್ವೀಟ್ ಮಾಡಿ, ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಸಂಭವಿಸಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು, ಇದೀಗ ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ ಓರ್ವನನ್ನು NIA ವಶಕ್ಕೆ ಪಡೆದಿದ್ದು, ಸ್ಫೋಟಕ್ಕೂ ಆತನಿಗೂ ನಂಟಿರುವುದು ಬೆಳಕಿಗೆ ಬಂದಿದೆ.‌ ಆದರೆ ಈ ಯಾವ ಬೆಳವಣಿಗೆಗಳನ್ನೂ ನೀವು ಟಿವಿಯಲ್ಲಿ ನೋಡಲು ಸಾಧ್ಯವಿಲ್ಲ ಯಾಕೆಂದರೆ ನಿಮಗೆ ಕಾರಣ ತಿಳಿದಿದೆ. ಆದರೆ ಬಿಜೆಪಿ ಯಾವಾಗಲೂ ಯಾಕೆ ಭಯೋತ್ಪಾದಕರ ಜೊತೆ ನಂಟು ಹೊಂದಿದೆ ಎಂಬುದೇ ಪ್ರಶ್ನೆ ಎಂದು ಟ್ವೀಟ್ ಮಾಡಿದೆ.

ಇತ್ತೀಚೆಗೆ ಕಂಗನಾ ರನಾವತ್ ಬಗ್ಗೆ ಅವಹೆಳನಕಾರಿ ಟ್ವೀಟ್ ಮಾಡಿ ಸುದ್ದಿಯಾಗಿದ್ದ ಸುಪ್ರಿಯಾ ಶ್ರೀನಾತೆ ಅವರು ಕೂಡಾ ಈ ವಿಷಯದ ಕುರಿತು ಬರೆದುಕೊಂಡಿದ್ದು, ರಾಮೇಶ್ವರ ಕೆಫೆಯ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಎನ್ಐಎ ಈಗ ಬಿಜೆಪಿ ನಾಯಕನನ್ನು ಬಂಧಿಸಿದೆ. ಮಾಧ್ಯಮಗಳಲ್ಲಿ ಈಗ ಪಿನ್ ಡ್ರಾಪ್ ಸೈಲೆನ್ಸ್ ಇದೆ. ಯಾವುದೇ ತೆರನಾದ ಬ್ರೇಕಿಂಗ್ ನ್ಯೂಸ್ ಇಲ್ಲ, ಎದೆಬಡಿದು‌ಕೊಳ್ಳುವ ನಿರೂಪಕರು ಕಾಣುತ್ತಿಲ್ಲ. ಆದರೆ ಬಿಜೆಪಿಗೆ ಯಾಕೆ ಯಾವಾಗಲೂ ಭಯೋತ್ಪಾದನೆಯ ಜೊತೆ ಸಂಬಂಧವಿದೆ ಎಂದಿದ್ದಾರೆ.

Rameswaram Cafe Blast Case: NIA Responds to BJP Workers as Accused

ತೀರ್ಥಹಳ್ಳಿಯ ಬಿಜೆಪಿ ಸದಸ್ಯ ಸಾಯಿ ಪ್ರಸಾದ್ ಅವರು ಸೆಕೆಂಡ್ ಹ್ಯಾಂಡ್ ಮೊಬೈಲ್ ‌ಫೋನ್‌ಗಳನ್ನು ಮಾರಾಟ ಮಾಡುತ್ತಾರೆ ಹಾಗೂ ಪೇಂಟರ್ ಆಗಿ ಕೆಲಸ ಮಾಡುತ್ತಾರೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಇನ್ನು ರಾಮೇಶ್ವರ ಕೆಫೆಯ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ವಿಚಾರಣೆಗೆ ಹಾಜರಾಗಲು ತಿಳಿಸಿರುವುದು ನಿಜ, ಕಳೆದ ವಾರ ತೀರ್ಥಹಳ್ಳಿಯ ಮನೆಗಳು ಮತ್ತು ಮೊಬೈಲ್ ಅಂಗಡಿಗಳ ಮೇಲೆ NIA ದಾಳಿ ನಡೆಸಿದ ಇಬ್ಬರು ಮುಸ್ಲಿಮರೊಂದಿಗೆ ಸಾಯಿ ಪ್ರಸಾದ್ ಸಂಪರ್ಕದಲ್ಲಿದ್ದರು ಎಂದು ವರದಿಯಾಗಿದೆ. ಇನ್ನೊಂದು ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಸಾಯಿ ಪ್ರಸಾದ್ ಅವರು ತಮ್ಮ ಹಳೆಯ ಫೋನ್ ಅನ್ನು ಬೇರೆ ಮೊಬೈಲ್‌ ಅಂಗಡಿಯ ಮಾಲೀಕರಿಗೆ ಮಾರಿದ್ದು, ಮಾಲೀಕರು ಅದನ್ನು NIA ಬಂಧಿಸಿದ ಮುಝಮ್ಮಿಲ್‌ಗೆ ಮಾರಾಟ ಮಾಡಿದ್ದಾರೆ.‌ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಸಂಪರ್ಕಿಸಲು ಆತ ಇದೇ ಫೋನ್ ಬಳಸಿದ್ದ ಎಂಬುದು ತಿಳಿದು ಬಂದಿದೆ. ಹಾಗಾಗಿ ಸಾಯಿ ಅವರು ಮಾರಾಟ ಮಾಡಿದ ಫೋನ್ ಅನ್ನು ಅಂಗಡಿಯ ಮಾಲೀಕರು ಮುಝಮ್ಮಿಲ್‌ಗೆ ಮಾರಾಟ ಮಾಡಿದ ಆಧಾರದ ಮೇಲೆ NIA ಆ ಪೋನನ್ನು ವಶಪಡಿಸಿಕೊಂಡ ಬಳಿಕ ಸಾಯಿ ಅವರನ್ನು ವಿಚಾರಣೆಗೆ ಹಾಜಾರಾಗುವಂತೆ ಕೇಳಿತ್ತು.

ಇನ್ನು ಸಾಯಿ ಪ್ರಸಾದ್ ಅವರಿಗೆ ಸ್ಫೋಟದ ಸಂಬಂಧವಿದೆ ಎಂದು ಬಂದ ವರದಿಗಳ ನಡುವೆ, ಎನ್ಐಎ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಸಾಕ್ಷಿಗಳ ಗುರುತಿನ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಬೇಡಿ ಏಕೆಂದರೆ ಇದು ತನಿಖೆಗೆ ಅಡ್ಡಿಯುಂಟು ಮಾಡುತ್ತದೆ. ಸ್ಪಷ್ಟನೆಯಲ್ಲಿ ಆರೋಪಿಗಳ ಹೆಸರು ಮುಸ್ಸಾವಿರ್ ಹುಸೇನ್ ಶಾಜೀಬ್, ಅಬ್ದುಲ್ ಮಥೀನ್ ತಾಹಾ ಹಾಗೂ ಮುಝಮ್ಮಿಲ್ ಶರೀಪ್ ಎಂದು ಹೇಳಿರುವುದರಿಂದ ಸಾಯಿ ಪ್ರಸಾದ್ ಆರೋಪಿಯಲ್ಲ ಎಂಬುದು ಸ್ಪಷ್ಟವಾಗಿದೆ. ಅಲ್ಲದೇ ಸಾಯಿ ಅವರನ್ನು ಸಾಕ್ಷಿ ಎಂದು‌ ಎನ್ಐಎ ನೇರವಾಗಿ ಪರಿಗಣಿಸದಿದ್ದರೂ ಅವರ ಬಗ್ಗೆ ಮಾಧ್ಯಮ ವರದಿಗಳ ನಂತರ ಹೇಳಿಕೆ ನೀಡಿದ್ದು ತಪ್ಪುದಾರಿಗೆ ಎಳೆಯುವ ವರದಿಗಳಿಗೆ ಪ್ರತಿಕ್ರಿಯೆಯಾಗಿ ಬಂದಂತಿತ್ತು.

You might also like
Leave A Reply

Your email address will not be published.