ಮೋದಿಯ ವಿಜಯಯಾತ್ರೆಗಾಗಿ ಪ್ರಾರ್ಥನೆ – ಮಲೆಮಹದೇಶ್ವರ ಬೆಟ್ಟ ಹತ್ತಿದ 102ರ ಅಜ್ಜಿ

ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕವಾಗಿ ಹೆಸರು‌ ಮಾಡಿದ ವ್ಯಕ್ತಿ. ಅವರಿಗೆ ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಲ್ಲದೇ ಕೇರಿಕೇರಿಗಳಲ್ಲೂ ಅಪಾರ ಭಕ್ತರ ಲೋಕ ವ್ಯಾಪಕವಾಗಿ ಹರಡಿದೆ. ಹೀಗಿರುವಾಗ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಉದ್ದೇಶದಿಂದ 108 ವರ್ಷದ ಮುದುಕಿ ಸುಮಾರು 18 ಕಿಮೀ ಗಳಷ್ಟು ದೂರ ಪಾದಯಾತ್ರೆ ಮಾಡಿದ್ದಾರೆ ಎಂದರೆ ಅವರಿಗೆ ಪ್ರಧಾನಿ ಮೇಲೆ ಅದೆಷ್ಟು ಗೌರವವಿರಬಹುದು ಎಂಬುದು ಊಹೆಗೂ ನಿಲುಕದ ವಿಚಾರ.

ಹೌದು! ಸಾಮಾಜಿಕ ಜಾಲತಾಣಗಳಲ್ಲಿ ಚಾಮರಾಜನಗರದ ಹನೂರು ತಾಲೂಕಿನಲ್ಲಿರುವ ಸುಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ 102 ವರ್ಷದ ಅಜ್ಜಿಯೊಬ್ಬರು ಪಾದಯಾತ್ರೆ ಮಾಡಿರುವುದು ಸಖತ್ ವೈರಲ್‌ ಆಗಿದೆ. ಇದರ ಹಿಂದಿರುವ ಉದ್ದೇಶ ಏನು ಎಂದು ಕೇಳಿದ ಪ್ರತಿಯೊಬ್ಬರಿಗೂ ಅಚ್ಚರಿ ತಂದಿದೆ.

ಶತಾಯುಷಿ ಅಜ್ಜಿ ಕಾಲ್ನಡಿಗೆಯ ಮೂಲಕವೇ 18 ಕಿಲೋಮೀಟರ್‌ ಚಾರಣ ಮಾಡಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಮೂಲದ ಪಾರ್ವತಮ್ಮ ಅವರಿಗೆ ಚಾರಣದ ವೇಳೆ ಮಾತನಾಡಿಸುವ ಇತರ ಪಾದಯಾತ್ರಿಗಳು, ಯಾಕಾಗಿ ಈ ಪಾದಯಾತ್ರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಉತ್ತರಿಸಿದ ಆ ಅಜ್ಜಿ, ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ನಮ್ಮ ರೈತರಿಗೆ ಒಳ್ಳೆಯದಾಗಬೇಕು, ಮಳೆ ಬೆಳೆ ಚೆನ್ನಾಗಿ ಆಗಬೇಕು ಎನ್ನುವ ಕಾರಣಕ್ಕೆ ಪಾದಯಾತ್ರೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಶತಾಯುಷಿಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದ್ದು, ಪ್ರಧಾನಿ ಮೋದಿ ಅವರ ಅಭಿಮಾನಿಗಳು ಇದನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

You might also like
Leave A Reply

Your email address will not be published.