ಪಾಕಿಸ್ತಾನ ಜಿಂದಾಬಾದ್ ಹೇಳಿಕೆ : ನಾಸೀರ್ ಹುಸೇನ್’ಗೆ ಪ್ರಮಾಣವಚನ ಬೋಧಿಸದಂತೆ ನಿವೃತ್ತ IAS,IPS ಅಧಿಕಾರಿಗಳ ಪತ್ರ

ಕರ್ನಾಟಕ ವಿಧಾನ ಸೌಧದ ಆವರಣದಲ್ಲಿ ನಾಸಿರ್ ಹುಸೇನ್ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ವಿಜಯೋತ್ಸವದ ಸಂದರ್ಭದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳು ಕೇಳಿ ಬಂದು ವಿಚಾರಣಾ ಹಂತದಲ್ಲಿರುವುದು ಹಳೆಯ ವಿಷಯವಾಗಿದೆ‌. ಈಗ ಅದೇ ವಿಷಯದಲ್ಲಿ ನ್ಯಾಯಾಂಗ ಪ್ರಕ್ರಿಯೆಗಳು ಪೂರ್ಣಗೊಳ್ಳುವ ತನಕ ನಾಸಿರ್ ಹುಸೇನ್ ಅವರಿಗೆ ಪ್ರಮಾಣ ವಚನ‌ ಭೋಧಿಸದಂತೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಐಎಸ್, ಐಪಿಎಸ್, ಐಎಫ್ಎಸ್ ಮತ್ತು ಐಆರ್‌ಎಸ್‌ನ 24 ಜನ ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ರಾಜ್ಯದಿಂದ ನಾಸಿರ್ ಹುಸೇನ್ ಅವರನ್ನು ಕರ್ನಾಟಕದಿಂದ ಸಂಸತ್ತಿಗೆ ಆಯ್ಕೆಮಾಡಲಾಗಿದೆ ಎಂದು ಘೋಷಣೆ ಮಾಡಿದ ನಂತರ ನಾಸಿರ್ ಅವರ ಹೆಸರಿನಿಂದ ಪಾಸ್ ಪಡೆದು ವಿಧಾನ ಸೌಧ ಪ್ರವೇಶಿಸಿದ್ದ ನಾಸಿರ್ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರು. ಆದ್ದರಿಂದ ನ್ಯಾಯಾಂಗ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ರಾಜ್ಯಸಭಗೆ ಹೊಸದಾಗಿ ಆಯ್ಕೆಯಾದ ಸೈಯದ್ ನಾಸಿರ್ ಹುಸೇನ್ ಅವರಿಗೆ ಪ್ರಮಾಣ ವಚನವನ್ನು ತಡೆಹಿಡಿದು ಈ ಜವಾಬ್ದಾರಿಯಿಂದ ಅವರನ್ನು ಮುಕ್ತಗೊಳಿಸುವಂತೆ ವಿನಂತಿಸಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.

Pakistan Zindabad Statement: Retired IAS, IPS officers letter not to administer oath to Naseer Hussain

ಇನ್ನು ಈ ಘಟನೆಯಲ್ಲಿ ಎಫ್.ಎಸ್.ಎಲ್ ವರದಿ, ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಸಂಗ್ರಹಿಸಿದ ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಬಂಧಿತರಾದ ಮೂರು ಜನ ಆರೋಪಿಗಳನ್ನು ಮೂರು ದಿನ ಪೋಲಿಸ್ ಕಸ್ಟಡಿಗೆ ನೀಡಲಾಗಿದೆ.‌ ಬಂಧಿತರನ್ನು ದೆಹಲಿಯ ಇಲ್ತಾಜ್, ಬೆಂಗಳೂರಿನ ಆರ್.ಟಿ‌. ನಗರದ ಮುನಾವರ್ ಮತ್ತು ಹಾವೇರಿ ಜಿಲ್ಲೆಯ ಬ್ಯಾಡಗಿಯ ಮೊಹಮ್ಮದ್ ಶಾಫಿ ನಾಶಿಪುಡಿ ಎಂದು ಗುರುತಿಸಲಾಗಿದೆ‌.

You might also like
Leave A Reply

Your email address will not be published.