ಪ್ರಭು ಶ್ರೀರಾಮರೊಂದಿಗೆ ಅಂಬಾನಿಗೆ ಹೋಲಿಕೆ – ಕ್ಷಮೆ ಕೋರಿದ ಪಿ.ಆರ್‌ ಏಜೆನ್ಸಿ

ನೆಟ್ಟಿಗರಿಂದ ಟೀಕೆಗೆ ಒಳಗಾದ ಬಳಿಕ ಬಾಲಿವುಡ್‌ನ ಪಿ.ಆರ್.‌ ಏಜೆನ್ಸಿಯಾದ ವೈರಲ್‌ ಬಯಾನಿಯು ಬಹಿರಂಗವಾಗಿ ಕ್ಷಮೆಯಾಚಿಸಿದೆ‌. ಎರಡು ದಿನದ ಹಿಂದೆ ತಮ್ಮ‌ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮುಖೇಶ್ ಅಂಬಾನಿಗೆ ಪ್ರಭುರಾಮನನ್ನು ಸಮನಾಗಿಸಿಕೊಂಡು ಒಂದು ಸ್ಟೋರಿ ಹಾಕುವ ಮೂಲಕ ವ್ಯಾಪಕವಾಗಿ ಟೀಕೆಗೆ ಒಳಗಾಗಿದ್ದರು.

Comparison of Ambani with Prabhu Sri Ram - PR agency apologizes

ಘಟನೆಯ ಹಿನ್ನೆಲೆ ನೋಡುವುದಾದರೆ, ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭ ಮುಗಿದು ಎರಡು ದಿನಗಳ ಬಳಿಕ ವೈರಲ್ ಬಯಾನಿ ಎನ್ನುವ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ‘ಇತ್ತೇಚೆಗೆ ದೇಶದಲ್ಲಿ ಕೇವಲ ಎರಡು ಗಂಡಂದಿರ ಬಗ್ಗೆ ಚರ್ಚೆಯಾಗುತ್ತಿದೆ, ಒಂದು ಸೀತಾನ ಗಂಡ ಇನ್ನೊಂದು‌ ನೀತಾನ ಗಂಡ’ ಎಂದು ಪೋಸ್ಟ್ ಮಾಡಿದ್ದರು.

ಈ ಸ್ಟೋರಿ ಹಾಕಿ ಕೆಲವೇ ಗಂಟೆಗಳಲ್ಲಿ ಎಕ್ಸ್ ಖಾತೆಯಲ್ಲಿ ಹಲವಾರು ಹಿಂದೂಗಳು ಅದನ್ನು ಡಿಲೀಟ್ ಮಾಡಿ ಕ್ಷಮೆ ಯೋಚಿಸುವಂತೆ ಪಟ್ಟು ಹಿಡಿದಿದ್ದರು ಅದಾದ ಕೂಡಲೇ ತಕ್ಷಣ ಮೊದಲಿನ ಸ್ಟೋರಿ ಡಿಲೀಟ್ ಮಾಡಿ ಎಕ್ಸ್ ಖಾತೆಯಲ್ಲಿ, ಯಾವುದೇ ಧಾರ್ಮಿಕ ಭಾವನೆಗಳನ್ನು ಧಕ್ಕೆ ಮಾಡಿದ್ದಲ್ಲಿ‌ ನಾನು ಕ್ಷಮೆಯಾಚಿಸುತ್ತೇನೆ.‌ ಎಂದು ಟ್ವೀಟ್ ಮಾಡಿದ್ದರು.

Comparison of Ambani with Prabhu Sri Ram - PR agency apologizes

ಇನ್ನು‌ ಮುಂದುವರೆದು, ಈ ಸ್ಟೋರಿ ಹಾಕಿದ್ದಾಕ್ಕಿ ನನ್ನ ತಂಡದ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ.‌ ಇದೊಂದು ಫಾರ್ವರ್ಡ್‌ ಮೆಸೇಜ್ ಆಗಿದ್ದು ಅದನ್ನು ಗಮನಿಸಿದೇ ತಂಡವು ಹಂಚಿಕೊಂಡಿದೆ, ಶ್ರೀ ರಾಮನ ಕಟ್ಟಾ ಅನುಯಾಯಿಯಾಗಿರುವ ನಾನು ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕೆ ಕ್ಷಮೆ ಇರಲಿ ಎಂದಿದ್ದಾರೆ.

You might also like
Leave A Reply

Your email address will not be published.