ಟ್ಯಾಂಕರ್‌ ನೀರಿಗೆ ರೇಟ್‌ ಫಿಕ್ಸ್‌ ಮಾಡಿದ ಬಿಬಿಎಂಪಿ : ನೀರಿನ ದರಗಳ ಪಟ್ಟಿ ಇಲ್ಲಿದೆ

ಬೆಂಗಳೂರಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಜನರು ಕಾವೇರಿ ನೀರಿನ ಸರಬರಾಜು ಇಲ್ಲದ್ದರಿಂದ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ನೀರಿನ ಬಿಕ್ಕಟ್ಟು ಶುರುವಾದ ಬೆನ್ನಲ್ಲೇ ಎಲ್ಲ ಖಾಸಗಿ ಮಾಲೀಕರ ಟ್ಯಾಂಕರ್‌ಗಳನ್ನು ನೋಂದಣಿ ಮಾಡಿಸಿಕೊಂಡ ಸರ್ಕಾರ ಇದೀಗ ದರವನ್ನು ನಿಗದಿಗೊಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬೆಲೆ ಕುರಿತು ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಸರ್ಕಾರ ನಿಗದಿಪಡಿಸಿದ ಬೆಲೆ ಎಷ್ಟು?

ಸಾರ್ವಜನಿಕರಿಂದ ಖಾಸಗಿ ವಾಟರ್ ಟ್ಯಾಂಕರ್ ಮಾಲೀಕರಿಂದ ಉಂಟಾಗುತ್ತಿದ್ದ ಸುಲಿಗೆಯನ್ನು ತಪ್ಪಿಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಇನ್ನು 6,000 ಲೀ. ನೀರಿನ ಟ್ಯಾಂಕರ್‌’ವೊಂದಕ್ಕೆ ಕನಿಷ್ಠ 600 ರೂ. ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇದರಲ್ಲೇನು ಇದೆ ಅನ್ಬೇಡಿ! ಈ ಲೆಕ್ಕಚಾರವನ್ನು ಸರಿಯಾಗಿ ಅರ್ಥೈಸಿಕೊಂಡರೆ ಒಂದುಕ್ಷಣ ಅಬ್ಬಾ ಅನ್ನುವುದಂತು ಸತ್ಯ.

ಸರ್ಕಾರದಿಂದ ನಿಗದಿ ಮಾಡಲಾದ ನೀರಿನ ದರಗಳ ಪಟ್ಟಿ ಇಲ್ಲಿದೆ ನೋಡಿ:

1) 100 ಮೀಟರ್‌ನಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ನೀರಿ ಸರಬರಾಜಿಗೆ ದರ:

ಟ್ಯಾಂಕರ್‌ಗಳು ಕ್ಯಾಪಾಸಿಟಿ – ನಿಗದಿಪಡಿಸಿದ ದರ
# 6000 ಲೀ. ನೀರಿನ ಟ್ಯಾಂಕರ್ – 600 ರೂಪಾಯಿ
# 8000 ಲೀ. ನೀರಿನ ಟ್ಯಾಂಕರ್ – 700 ರೂಪಾಯಿ
#12,000 ಲೀ ವಾಟರ್ ಟ್ಯಾಂಕರ್ – 1,000 ರೂಪಾಯಿ

BBMP rates fixed for tanker water: Here is the list of water rates

2) 5 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ನೀರು ಸರಬರಾಜಿಗೆ ದರ:

6000 ಲೀ. ನೀರಿನ ಟ್ಯಾಂಕರ್ – 750 ರೂಪಾಯಿ
8000 ಲೀ. ನೀರಿನ ಟ್ಯಾಂಕರ್ – 850 ರೂಪಾಯಿ
12,000 ಲೀ ವಾಟರ್ ಟ್ಯಾಂಕರ್ – 1,200 ರೂಪಾಯಿ

ಇನ್ನು 8,000 ಲೀ.ನಿಂದ 12,000 ಲೀ. ಸಾಮರ್ಥ್ಯದ ನೀರಿನ ಟ್ಯಾಂಕರ್‌ಗಳು 10 ಕಿ.ಮೀ.ಗಿಂತ ದೂರವಿದ್ದಲ್ಲಿ ಪ್ರತಿ ಕಿ.ಮೀ ಗೆ ತಲಾ 50ರೂ. ಹೆಚ್ಚುವರಿಯಾಗಿ ಹಣ ನೀಡುವಂತೆ ಆದೇಶ ಹೊರಡಿಸಲಾಗಿದೆ.

ಅಂದರೆ, ಈ ಲೆಕ್ಕಚಾರದನ್ವಯ ಒಂದು ತಿಂಗಳಿಗೆ ಕನಿಷ್ಠ 6,000 ರೂ. ಹಣವನ್ನು ಹೆಚ್ಚಾಗಿ ವೆಚ್ಚ ಮಾಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಕಾಸ್ ಅಲಿಯಾಸ್ ವಿಕ್ಕಿಪಿಡಿಯಾ ಅವರು ಬೆಂಗಳೂರಿನ ನೀರಿನ ಸಮಸ್ಯೆ ಕುರಿತಾಗಿ ವಿಡಿಯೋವೊಂದನ್ನು ಮಾಡಿ ಹರಿಬಿಟ್ಟಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಬೆಂಗಳೂರಿನಲ್ಲಿ ಒಂದು ತಿಂಗಳಿಗೆ ನೀರಿನ ವೆಚ್ಚಕ್ಕಾಗಿ 6 ಸಾವಿರ ರೂ. ಹಣವನ್ನು ಕೊಡಿ ಎಂದು ಗಂಡನ ಬಳಿ ಕೇಳಿದ್ದಾಳೆ. ಆದರೆ, ಮಾಸಿಕ ನೀರಿನ ಬಿಲ್ ಸರಾಸರಿ 500ರೂ. ಪಾವತಿ ಮಾಡುತ್ತೇವೆ. ಏಕಾಏಕಿ 6 ಸಾವಿರ ರೂ. ಬೇಕೆಂದು ಕೇಳಿದಾಗ ಗಂಡ ಶಾಕ್ ಆಗಿದ್ದಾನೆ. ನಂತರ, ಹೆಂಡತಿ ಗಂಡನನ್ನು ಕರೆದುಕೊಂಡು ಹೋಗಿ ನದಿಗಳು, ಕೆರೆಗಳು, ಕೊಳವೆ-ಬಾವಿ, ನೀರಿನ ಸಂಪ್‌ ಎಲ್ಲ ಜಲಮೂಲಗಳಲ್ಲಿಯೂ ನೀರಿಲ್ಲದೇ ಒಣಗಿರುವುದನ್ನು ತೋರಿಸಿದ್ದಾಳೆ. ಆಗ ಏನಿಲ್ಲಾ.. ಏನಿಲ್ಲಾ ಎಂಬ ಹಾಡಿನ ಮಾದರಿಯಲ್ಲಿ ನೀರಿಲ್ಲಾ… ನೀರಿಲ್ಲಾ.. ಎಂದು ಹಾಡನ್ನು ಹಾಡಿದ್ದಾರೆ.

You might also like
Leave A Reply

Your email address will not be published.