ದೇವಸ್ಥಾನ, ಚರ್ಚುಗಳೇ ಯಾಕೆ ಮಸೀದಿಯಾಗಿ ಪರಿವರ್ತನೆ ಹೊಂದುತ್ತವೆ?

ಸಂವಿಧಾನಾತ್ಮಕವಾಗಿ ಕಾನೂನಿನ ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಾಯಿತಾದರೂ ಕೆಲವು ‌ಮುಸ್ಲಿಂ ಮೂಲಭೂತವಾದಿಗಳು ಹಾಗೂ ಎಡಪಂಥೀಯರು ಡೆಮಾಕ್ರಸಿಯ ಕೊಲೆ, ಸುಪ್ರೀಂ ಕೋರ್ಟ್ ‌ನ ಈ ತೀರ್ಪನ್ನು ನಾವು ಸ್ವಾಗತಿಸುವುದಿಲ್ಲ. ಮಂದಿರವೇ ಏಕೆ ಶಾಲೆ ಕಟ್ಟಿ, ಆಸ್ಪತ್ರೆ ಕಟ್ಟಿ ಎಂದೆಲ್ಲಾ ಮಂದಿರ ಕಟ್ಟುವುದನ್ನು ನಿಲ್ಲಿಸಲು ವ್ಯರ್ಥ ಪ್ರಯತ್ನ ಮಾಡಿದರು. ಆದರೂ, ಪ್ರಭು ಶ್ರೀ ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರವನ್ನು ಕೊನೆಗೂ ನಿರ್ಮಿಸಲಾಗಿದ್ದು, ಈಗ ಅದು ಹಳೇ ವಿಷಯ ಮಥುರಾ ಕಾಶಿಯ ದೇವಸ್ಥಾನಗಳ ಜಾಗಗಳನ್ನು ಮುಸ್ಲಿಂ ಆಕ್ರಮಣದಿಂದ ಮುಕ್ತಗೊಳಿಸುವ ದಿನ ಬಹುಶಃ ದೂರವೇನಿಲ್ಲ. ಆದರೆ, ಈಗ ಚರ್ಚ್ ಒಂದನ್ನು ಮಸೀದಿಯಾಗಿ ಪರಿವರ್ತಿಸಹೊರಟ ಘಟನೆಯೊಂದು ಭಾರೀ ಸುದ್ದಿಯಲ್ಲಿದೆ.

ಹೌದು, ಟರ್ಕಿಯ ಇಸ್ತಾಂಬುಲ್ ‌ನಲ್ಲಿರುವ ನಾಲ್ಕನೇ ಶತಮಾನದ ಬೈಜಂಟಿನ್ ಚೋರಾ ಚರ್ಚ್‌ಅನ್ನು ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು‌‌ ಮಸೀದಿಯಾಗಿ ಪರಿವರ್ತಿಸುವುದಾಗಿ ಅಲ್ಲಿನ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಪೆಬ್ರವರಿಯಲ್ಲಿ ನಮಾಜಿಗೆ ತೆರೆಯಲಾಗುತ್ತದೆ ಎಂಬ ವದಂತಿಯನ್ನು ತಳ್ಳಿಹಾಕಿ‌ ಮೇ ಅಂತ್ಯದ ಒಳಗೆ ಮೊದಲ ಪ್ರಾರ್ಥನೆಯನ್ನು ಆಯೋಜಿಸಲಾಗುವುದು ಎಂದಿದೆ.

Why are temples and churches converted into mosques?

ನಾಲ್ಕನೇ ಶತಮಾನದ ಈ ಚರ್ಚ್ ಹದಿನೈದನೆಯ ಶತಮಾನದವರೆಗೂ ಚರ್ಚ್ ಆಗಿಯೇ ಉಳಿದಿತ್ತು. ಹದಿನೈದನೆಯ ಶತಮಾನದ ನಂತರ, 1511 ರಲ್ಲಿ ಒಟ್ಟೋಮನ್ ಸಾಮ್ರಾಜ್ಯದ ಅಧೀನವಾದಾಗ ಮಸೀದಿಯಾಗಿ ಪರಿವರ್ತಿಸಲಾಯಿತು. ಮಸೀದಿಯಾಗಿಯೇ ಇದ್ದ ಅದನ್ನು 1945 ರಲ್ಲಿ ಮ್ಯೂಸಿಯಂ ಆಗಿ ಬದಲಾಯಿಸಲಾಯಿತು. ಆದರೆ, ಇತ್ತೀಚೆಗೆ ಅಂದರೆ 2020 ರಲ್ಲಿ ಮತ್ತೆ ಅದನ್ನು ಮಸೀದಿಯಾಗಿ ಬದಲಾಯಿಸಯವುದಾಗಿ ಅಲ್ಲಿನ ಅಧ್ಯಕ್ಷ ಘೋಷಣೆಮಾಡಿದರು.

ಇನ್ನು ಪ್ರಕರಣ ಐತಿಹಾಸಿಕ ಸೋಫಿಯಾ ಹಗಿಯಾ ಚರ್ಚಿನ ಪ್ರಕರಣಕ್ಕಿಂತ ಭಿನ್ನವಾಗಿ ಏನು ಇಲ್ಲ. ಸುಮಾರು 1500 ವರ್ಷಗಳ ಇತಿಹಾಸ ಹೊಂದಿದ್ದ ಸೋಫಿಯಾ ಹಗಿಯಾ ಚರ್ಚ್ ಅನ್ನು 1935 ರಲ್ಲಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿದರು. 2020 ರಲ್ಲಿ ಅಲ್ಲಿನ ಸರ್ಕಾರ ಅದನ್ನು ಮಸೀದಿಯಾಗಿ ಬದಲಾಯಿಸಿತಾದರೂ ಸೋಫಿಯಾ ಹಗಿಯಾದ ಒಂದು ಭಾಗವನ್ನು ಮ್ಯೂಸಿಯಂ ಆಗಿಟ್ಟು ಸಂದರ್ಶಕರಿಗೆ ತೆರೆಯಲಾಗಿದೆ.

Sophia Hagia

ನಾಲ್ಕನೇ ಶತಮಾನದ ಚೋರಾ ಚರ್ಚ್‌ಅನ್ನು ಬೈಜಾಂಟೈನ್ ಸಾಮ್ರಾಜ್ಯ ಮತ್ತು ಪೂರ್ವ ಆರ್ಥೋಡಾಕ್ಸ್ ಕ್ರೈಸ್ತ ಧರ್ಮದ ಆರಂಭಿಕ ರಚನೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಾಗೂ ಈ ಚರ್ಚ್ ಅನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಪಟ್ಟಿಮಾಡಿತ್ತು. ಟರ್ಕಿಯ ಇಂದಿನ ಅಧ್ಯಕ್ಷ ಎರ್ಡೋಗನ್ ಯಾವಾಗಲೂ ತನ್ನನ್ನು ತಾನು ಮುಸ್ಲಿಂ ಮೂಲಭೂತವಾದಿ ಎಂದು ಗುರುತಿಸಿಕೊಂಡಿದ್ದು ಮುಸ್ಲಿಮರ ರಕ್ಷಕನಂತೆ ಫೋಸುಕೊಟ್ಟು ಟರ್ಕಿಯ ಆಡಳಿತವನ್ನು ಖಿಲಾಫತ್ ಕಾಲಕ್ಕೆ ಕೊಂಡೊಯ್ಯುವುದು ಆತನ ಉದ್ದೇಶವಾಗಿದೆ ಎನ್ನಲಾಗುತ್ತದೆ‌.

ಹಗಿಯಾ ಸೋಫಿಯಾ ಚರ್ಚ್, ಮಸೀದಿಯಾಗಿ ಪರಿವರ್ತನೆಗೊಂಡಾಗ ದೊಡ್ಡ ಗಲಾಟೆ ಭುಗಿಲೆದ್ದರೂ ಟರ್ಕಿಯಿಂದ ಒಂದೇ ಒಂದು ಧ್ವನಿಯೂ ಪ್ರತಿಭಟಿಸಲಿಲ್ಲ. ಇಸ್ಲಾಂ ಧರ್ಮವು ಇತರರ ಪೂಜಾ ಸ್ಥಳಗಳಲ್ಲಿ ಮಸೀದಿಯನ್ನು ನಿರ್ಮಿಸುವುದನ್ನು ನಿಷೇಧಿಸುತ್ತದೆ ಎಂದ ಕೆಲವರ ಹೇಳಿಕೆಗಳು ಖಾಲಿ ಪುಸ್ತಕಗಳಲ್ಲೇ ಉಳಿದದ್ದು ಮಾತ್ರ ವಿಪರ್ಯಾಸ.

You might also like
Leave A Reply

Your email address will not be published.