ಪ್ರಪಂಚದ ಅತೀ ಎತ್ತರದ 10 ಪರ್ವತ ಶಿಖರಗಳು ಯಾವುವು ಮತ್ತು ಎಲ್ಲಿವೆ? ಈ ವರದಿ ನೋಡಿ

ಪರ್ವತ ಶ್ರೇಣಿಗಳು ಜಗತ್ತಿನ ಭೂ ಭಾಗದ ಶೇಕಡಾ 26.5 ರಷ್ಟನ್ನು ಆವರಿಸಿಕೊಂಡಿದೆ ಹಾಗೂ ಜಗತ್ತಿನ 80% ಶುದ್ಧವಾದ ನೀರು ಹಿಮಾಲಯದ ಗ್ಲೇಶಿಯರ್‌ನಲ್ಲಿ ಸಂಗ್ರಹವಾಗಿದೆ ಎನ್ನುವುದನ್ನು ವಿಜ್ಞಾನವೇ ಹೇಳುತ್ತದೆ. ಪ್ರಪಂಚದಾದ್ಯಂತ 7000 ಮೀಟರ್‌ಗೂ ಎತ್ತರದ ಸುಮಾರು 108 ಪರ್ವತಗಳಿವೆ ಎಂದು ಅಧ್ಯಯನಗಳು ಈಗಾಗಲೇ ಬಹಿರಂಗ ಪಡಿಸಿವೆ. ಜಗತ್ತಿನ ಅತೀ ಎತ್ತರದ ಹತ್ತು ಪರ್ವತ ಶ್ರೇಣಿಗಳು ಹಿಮಾಲಯದ ತಪ್ಪಲಲ್ಲೇ ಇವೆ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವೇ ಆಗಿದೆ. ಹಾಗಾದರೆ ಆ ಹತ್ತು ಪರ್ವತ ಶ್ರೇಣಿಗಳು ಯಾವುವು ನೋಡೋಣ ಬನ್ನಿ.

1. ಮೌಂಟ್ ಎವರೆಸ್ಟ್

ಪ್ರಪಂಚದ ಅತೀ ಎತ್ತರದ ಪರ್ವತ ವಾಗಿರುವ ಮೌಂಟ್ ಎವರೆಸ್ಟ್ ಸಮುದ್ರಮಟ್ಟದಿಂದ 8,848.86 ಮೀಟರ್ ಎತ್ತರದಲ್ಲಿದ್ದು ಜಗತ್ತಿನ ಪ್ರಮುಖವಾದ ಏಳು ಶೃಂಗಗಳ ಪೈಕಿ ಇದು ಅತ್ಯಂತ ಪ್ರಮುಖವಾದುದಾಗಿದೆ. ಈ ಪರ್ವತ ಶ್ರೇಣಿಯು ನೇಪಾಳ ಮತ್ತು ಚೀನಾ ಆಕ್ರಮಿತ ಟಿಬೇಟ್ ಪರಿಸರದಲ್ಲಿದ್ದು ಹಿಮಾಲಯದ ಮಹಲಂಗೂರ್ ಹಿಮಾಲ್ ಉಪವರ್ಗದಲ್ಲಿದೆ. ಸ್ಥಳೀಯ ನೇಪಾಳಿ ಜನರು ಹಾಗೂ ನೇಪಾಳ ಸರ್ಕಾರವು ಈ ಪರ್ವತವನ್ನು ಸಾಗರಮಾತ ಎಂದು ಕರೆಯುತ್ತಾರೆ.

ಮೌಂಟ್ ಎವರೆಸ್ಟ್ ಶಿಖರವು ಪ್ರಪಂಚದ ಅತೀ ಎತ್ತರದ ಪರ್ವತವಾಗಿರುವುದರಿಂದ ಪ್ರಪಂಚದಾದ್ಯಂತ ಇರುವ ಚಾರಣಿಗರನ್ನು ಆಕರ್ಷಿಸುತ್ತದೆ ಹಾಗೂ ಪ್ರತಿ ವರ್ಷ 5000ಕ್ಕೂ ಹೆಚ್ಚು ಜನರು ಪರ್ವತವನ್ನು ಏರಲು ಪ್ರಯತ್ನಿಸುತ್ತಾರೆ ಎಂದು ನೇಪಾಳ ಸರಕಾರದ ದಾಖಲೆಯಾಗಿದೆ. ಹಾಗಿದ್ದೂ ಕೂಡ ಈ ಪರ್ವತವನ್ನು ಕೇವಲ ಅನುಭವಿ ಪರ್ವತಾರೋಹಿಗಳು ಮಾತ್ರವೇ ಆರೋಹ ಮಾಡಬಹುದು ಎಂದು ಹೇಳಲಾಗುತ್ತದೆ. 1,953 ಮೇ 29ರಂದು ನ್ಯೂಜಿಲೆಂಡ್ ನ ಪರ್ವತಾರೋಹಿ ಸರ್ ಎಡ್ಮಂಡ್ ಹಿಲರಿ ಮತ್ತು ಸ್ಥಳೀಯ ನೇಪಾಳಿ ಶೆರ್ಪ ತೇನ್ಸಿಂಗ್ ನೋರ್ಗೆ ಅವರು ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿದ ಮೊದಲ ವ್ಯಕ್ತಿಗಳು ಎಂದು ದಾಖಲಾಗಿದ್ದಾರೆ. ಇದು ತನಕ ಈ ಪರ್ವತವನ್ನು ಸುಮಾರು ಹತ್ತು ಸಾವಿರ ಜನರು ಏರಿದ್ದಾರೆ ಹಾಗೂ ಹತ್ತುವ ಪ್ರಯತ್ನಗಳಲ್ಲಿ ಸುಮಾರು 350 ಜನರು ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

Mount Everest

2. ಮೌಂಟ್ K2

ಬ್ರಿಟೀಷ್ ಸರ್ವೇ ಅಧಿಕಾರಿ ಪ್ರಥಮಬಾರಿಗೆ ಈ ಪ್ರದೇಶವನ್ನು ಸರ್ವೆ ಮಾಡುವಾಗ K2 ಎಂದು ಹೆಸರಿಸಿದ್ದಾರೆ. K ಎಂದರೆ ಕಾರಾಕೋರಮ್ 2 ಎಂದರೆ ಅಧಿಕಾರಿಯು ಸರ್ವೇ ಮಾಡುತ್ತಿದ್ದ ಎರಡನೇ ಪರ್ವತ ಇದಾಗಿತ್ತು ಹಾಗಾಗಿ ಇದು K2 ಅಥವಾ ಸಾವೇಜ್ ಮೌಂಟೇನ್ ಎಂದೆ ಹೆಸರಾಗಿದೆ‌.

K2 ಪರ್ವತ ಶಿಖರವು ಸಮುದ್ರ ಮಟ್ಟದಿಂದ ಸುಮಾರು 8,611 ಮೀಟರ್ ಎತ್ತರದಲ್ಲಿದೆ ಹಾಗೂ ಈ ಪರ್ವತ ಶ್ರೇಣಿಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಲ್ಟಿಸ್ಥಾನದ ಕಾರ ಕೋರಂ ಪರ್ವತ ಶ್ರೇಣಿಯಲ್ಲಿದೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ಪರ್ವತಗಳಲ್ಲಿ ಒಂದಾಗಿದ್ದು ದಾಖಲೆಗಳ ಪ್ರಕಾರ ಈ ಪರ್ವತವನ್ನು ಆರೋಹ ಮಾಡುವ ಪ್ರತಿ ನಾಲ್ಕು ಪರ್ವತಾರೋಹಿಗಳಲ್ಲಿ ಒಬ್ಬರು ಪರ್ವತದ ‌ಮೇಲೆ ಸಾಯುತ್ತಾರೆ. ಇಟಾಲಿಯನ್ ಪರ್ವತಾರೋಹಿಗಳಾದ ಲಿನೋ ಲಾಸಿಡೆಲ್ಲಿ ಮತ್ತು ಅಚಿಲ್ಲೆ ಕೆಂಪಗೊನ್ನಿಯವರು ಮೌಂಟ್ K2 ಶಿಖರವನ್ನು ಜುಲೈ 31 1954ರಲ್ಲಿ ಯಶಸ್ವಿಯಾಗಿ ಏರಿದ ಮೊದಲಿಗರು ಎನಿಸಿಕೊಂಡಿದ್ದಾರೆ.

Mount K2

3. ಕಾಂಚನಜುಂಗಾ

ಸಮುದ್ರ ಮಟ್ಟದಿಂದ 8,598 ಮೀಟರ್ ಎತ್ತರದಲ್ಲಿರುವ ಈ ಶಿಖರವು ಭಾರತ ಮತ್ತು ನೇಪಾಳದ ಗಡಿ ಯುದ್ದಕ್ಕೂ ಹಿಮಾಲಯ ಪರ್ವತ ಶ್ರೇಣಿಯ ಕಾಂಚನದಿಂದ ಹಿಮಾ ವಿಭಾಗದಲ್ಲಿದೆ. ಕಾಂಚನಗಂಗದ ಐದು ಪ್ರಮುಖ ಶಿಖರಗಳಲ್ಲಿ ಮೂರು ಭಾರತದ ಸಿಕ್ಕಿಂ ರಾಜ್ಯ ಹಾಗೂ ಎರಡು ನೇಪಾಳದ ಒಂದು ಜಿಲ್ಲೆಯಲ್ಲಿವೆ. ಪ್ರಾಚೀನ ಕಾಲದಿಂದಲೂ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಡಾರ್ಜಲಿಂಗ್‌ನ ಜನರು ಈ ಪರ್ವತವನ್ನು ಪವಿತ್ರ ಎಂದು ಪೂಜಿಸುತ್ತಾರೆ. ಇಂಗ್ಲಿಷ್ ಪರ್ವತಾರೋಹಿಗಳಾದ ಜೋಬ್ರೌನ್ ಮತ್ತು ಜಾರ್ಜ್ ಬ್ಯಾಂಡ್ ಅವರು ಮೇ 25 1955ರಂದು ಈ ಪರ್ವತ ಶ್ರೇಣಿಯನ್ನು ಯಶಸ್ವಿಯಾಗಿ ಏರಿದ ಮೊದಲಿಗರು ಎನಿಸಿಕೊಂಡಿದ್ದಾರೆ.

Kanchana Junga

4. ಲೋತ್ಸ್ಹೆ ಪರ್ವತ

ಮೌಂಟ್ ಲೊತ್ಸೆ ಪರ್ವತವು ಸಮುದ್ರಮಟ್ಟದಿಂದ ಸುಮಾರು 8516 ಮೀಟರ್ ಎತ್ತರದಲ್ಲಿದ್ದು ವಿಶ್ವದ ನಾಲ್ಕನೇ ಅತಿ ಎತ್ತರದ ಪರ್ವತವಾಗಿದೆ. ಇದು ನೇಪಾಳದ ಖುಂಬು ಹಾಗೂ ಚೀನಾ ಆಕ್ರಮಿತ ಟಿಬೆಟ್ ಪ್ರದೇಶದ ಗಡಿ ಯುದ್ದಕ್ಕೂ ಮಹಾಲಂಗೂರ್ ಹಿಮಾಲಯದ ವಿಭಾಗದಲ್ಲಿದೆ. ಈ ಪರ್ವತವು ಎವರೆಸ್ಟ್ ಪರ್ವತ ಶ್ರೇಣಿಯ ಸಮೂಹಗಳ ಒಂದು ಭಾಗವಾಗಿದ್ದು ಮೌಂಟ್ ಎವರೆಸ್ಟ್ ಗೆ ಸೌತ್ ಕರ್ನಲ್ ದಾರಿಯ ಮೂಲಕ ಸಂಪರ್ಕವನ್ನು ಹೊಂದಿದೆ. ಈ ಪರ್ವತವನ್ನು ಮೇ18, 1956 ರಂದು ಸ್ವಿಸ್ ಪರ್ವತಾರೋಹಿಗಳಾದ Ernst Reiss ಹಾಗೂ Fritz Luchsinger ಏರುವ ಮೂಲಕ ಮೊದಲಿಗರಾಗಿದ್ದಾರೆ.

Mount Lhotse

5. ಮಕಾಲು ಪರ್ವತ

ಮಕಾಲು ಪರ್ವತವು ಸಮುದ್ರಮಟ್ಟದಿಂದ 8,485 ಮೀಟರ್ ಎತ್ತರದಲ್ಲಿದ್ದು, ಹಿಮಾಲಯ ಪರ್ವತ ಶ್ರೇಣಿಯ ಮಹಾಲಂಗೂರ್ ಹಿಮಾಲ್ ವಿಭಾಗದಲ್ಲಿ ನೇಪಾಳ ಮತ್ತು ಚೀನಾ ಆಕ್ರಮಿತ ಟಿಬೆಟ್ ಪ್ರದೇಶದ ನಡುವಿನ ಗಡಿಯಲ್ಲಿದೆ, ಹಾಗೂ ಇದು ವಿಶ್ವದ ಐದನೇ ಎತ್ತರದ ಪರ್ವತ ಶ್ರೇಣಿಗಳಲ್ಲಿ ಒಂದಾಗಿದೆ.

ಫ್ರೆಂಡ್ಸ್ ನ ಪರ್ವತಾರೋಹಿಗಳಾದ ಲಿಯೋ ಮತ್ತು ಜೀನ್ ಕೌಜಿ ಅವರು ಮೇ 15, 1955 ರಂದು ಈ ಪರ್ವತವನ್ನು ಏರುವ ಮೂಲಕ ಮಕ್ಕಳು ಪರ್ವತವನ್ನು ಯಶಸ್ವಿಯಾಗಿ ಏರಿದ ಮೊದಲ ಪರ್ವತಾರೋಹಿಗಳು ಎನಿಸಿಕೊಂಡರು.

Mount Makalu

6. ಚೋ ಓಯು ಪರ್ವತ

ಈ ಪರ್ವತವು ಹಿಮಾಲಯದ ಮಹಲ್ಗೂರ್ ಹಿಮಾಲ್ ವಿಭಾಗದಲ್ಲಿದ್ದು ನೇಪಾಳ ಮತ್ತು ಚೀನಾ ನಡುವಿನ ಗಡಿಯ ಸಮೀಪದಲ್ಲಿದೆ ಹಾಗೂ ಮೌಂಟ್ ಎವರೆಸ್ಟ್ ನ ಪಶ್ಚಿಮಕ್ಕೆ 20 ಕಿ.ಮೀ ದೂರದಲ್ಲಿದೆ ಈ ಶಿಖರವು ಸಮುದ್ರಮಟ್ಟದಿಂದ 88 ಮೀಟರ್ ಎತ್ತರ ಪ್ರದೇಶದಲ್ಲಿದ್ದು ವಿಶ್ವದ ಆರನೇ ಅತಿ ಎತ್ತರದ ಪರ್ವತವಾಗಿದೆ ಹಾಗೂ ಅತಿ ಸುಲಭವಾಗಿ ಆರೋಹ ಮಾಡಬಹುದಾದ 8000ಮೀಟರ್ ಶಿಖರಗಳಲ್ಲಿ ಒಂದು ಎಂದು ಇದನ್ನು ಪರಿಗಣಿಸಲಾಗಿದೆ. ಆಸ್ಟ್ರಿಯನ್ ಪರ್ವತಾರೋಹಿಗಳಾದ ಹರ್ಬರ್ಟ್ ಡಿಚಿ ಮತ್ತು ಜೋಸೆಫ್ ಹಾಗೂ ಸ್ಥಳೀಯ ಶರ್ಪ ಪ್ರಸನ್ ದಾವಲಾಮ ಅವರು ಅಕ್ಟೋಬರ್ 19, 1954 ರಂದು ಯಶಸ್ವಿಯಾಗಿ ಏರಿದ ಮೊದಲಿಗರು ಎನಿಸಿಕೊಂಡಿದ್ದಾರೆ.

Mount Cho Oyu

7.ಧೌಲಗಿರಿ ಪರ್ವತ

ದೌಲಗಿರಿ ಪರ್ವತವು ಸಮುದ್ರಮಟ್ಟದಿಂದ 867 ಮೀಟರ್ ಎತ್ತರದಲ್ಲಿದೆ ಹಾಗೂ ಇದು ವಿಶ್ವದ 7ನೇ ಅತಿ ಎತ್ತರದ ಪರ್ವತವಾಗಿದೆ ಇದು ಸಂಪೂರ್ಣವಾಗಿ ನೇಪಾಳ ದೇಶದೊಳಗೆ ಇದ್ದು ನೇಪಾಳ ದೇಶದ ಗಡಿಯೊಳಗೆ ಸಂಪೂರ್ಣವಾಗಿ ನೆಲೆಗೊಂಡಿರುವ ಅತ್ಯಂತ ಎತ್ತರದ ಪರ್ವತವಾಗಿದೆ. ಈ ಪರ್ವತವು ಮೈಗ್ಡಿ ಖೋಲಾ, ಭೇರಿ, ನದಿಗಳಿಂದ ಸುತ್ತುವರೆದಿದೆ ಕಾಳಿ ಗಂಡಗಿನದಿಯ ಕಂದರವು ಪಶ್ಚಿಮದಲ್ಲಿ ದೌಲಗಿರಿ ಪರ್ವತವನ್ನು ಪೂರ್ವದಲ್ಲಿ ಅನ್ನಪೂರ್ಣ ಪರ್ವತದಿಂದ ಪ್ರತ್ಯೇಕಗೊಳಿಸುತ್ತದೆ. ಸ್ವಿಸ್ ಮತ್ತು ಆಸ್ಟ್ರಿಯನ್ ಪರ್ವತಾರೋಹಿಗಳ ತಂಡವು ಇಬ್ಬರು ಶೇರ್ಪಾಗಳಾದ ನವಾಂಗ್ ಡೋರ್ಜೆ ಮತ್ತು ನೈಮ ಡೋರ್ಜೆ ಅವರೊಂದಿಗೆ ಮೇ 13 1960ರಂದು ಈ ಪರ್ವತವನ್ನು ಮೊದಲ ಬಾರಿ ಆರೋಹ ಮಾಡಿದ್ದಾರೆ.

Mount Dhaulagiri

8. ಮನಸ್ಲು ಪರ್ವತ

ಮನಸ್ಲು ಪರ್ವತವು ಸಮುದ್ರ ಮಟ್ಟದಿಂದ 8,163 ಮೀಟರ್ ಎತ್ತರದಲ್ಲಿದ್ದು ವಿಶ್ವದ ಅತಿ ಎತ್ತರದ ಎಂಟನೇ ಶಿಖರವಾಗಿದೆ ನೇಪಾಳದ ಗುರ್ಕಾ ಜಿಲ್ಲೆಯಲ್ಲಿರುವ ಇದು ಹಿಮಾಲಯದ ಮಾನ್ಸಸರಿ ಹಿಮಾಲ್ ಉಪ ವರ್ಗದಲ್ಲಿದೆ ಮನಸ್ಲು ಎಂಬ ಹೆಸರಿನ ಹಿನ್ನೆಲೆ ನೋಡುವುದಾದರೆ ಈ ಹೆಸರು ಸಂಸ್ಕೃತದ ಪದ ಮಾನಸ ದಿಂದ ಬಂದಿದೆ. ಇದರ ಅರ್ಥ ಆತ್ಮ ಅಥವಾ ಬುದ್ಧಿ ಮತ್ತು ‘ಚೇತನದ ಪರ್ವತ’ ಎಂದು ಇದನ್ನು ಹೇಳಲಾಗುತ್ತದೆ. 2008 ರ ಹೊತ್ತಿಗೆ ಈ ಪರ್ವತವನ್ನು ಸುಮಾರು 297 ಬಾರಿ ಆರೋಹ ಮಾಡಲಾಗಿದ್ದು ಈ ಪ್ರಯತ್ನದಲ್ಲಿ ಸುಮಾರು 53 ಜನರು ಸಾವನ್ನಪ್ಪಿದ್ದಾರೆ. ತೋಷಿಯೋ ಇಮಾನಿಶಿ ಮತ್ತು ಗ್ಯಾಲ್ಜೆನ್ ನಾರ್ಬೋ ಎಂಬ ಜಪಾನಿನ ಪರ್ವತಾರೋಹಿಗಳ ತಂಡವು ಮೇ 9 1956 ರಂದು ಈ ಪರ್ವತವನ್ನು ಮೊದಲ ಬಾರಿ ಆರೋಹ ಮಾಡಿದ್ದಾರೆ.

Mount Manaslu

9. ನಂಗಾ ಪರ್ಬತ್

ವಿಶ್ವದ ಒಂಬತ್ತನೇ ಅತಿ ಎತ್ತರದ ಶಿಖರವಾಗಿರುವ ನಂಗ ಪರ್ಬತ್ ಪರ್ವತವನ್ನು ಸ್ಥಳೀಯವಾಗಿ ಡೈಮರ್ ಎಂದು ಕೂಡ ಕರೆಯಲಾಗುತ್ತದೆ. ಇದು ಸಮುದ್ರ ಮಟ್ಟದಿಂದ 8,126 ಮೀಟರ್ ಎತ್ತರದಲ್ಲಿದ್ದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಲ್ತಿಸ್ಥಾನ ಪ್ರದೇಶದ ಡೈಮಂಡ್ ಜಿಲ್ಲೆಯಲ್ಲಿದೆ. ಈ ಪರ್ವತವು ಸಿಂಧೂ ನದಿಯ ದಕ್ಷಿಣಕ್ಕೆ ಇದ್ದು ಆಸ್ಟ್ರಿಯನ್ ಪರ್ವತಾರೋಹಿ ಹರ್ಮನ್ ಬುಹ್ಲ್ ಅವರು ಜುಲೈ 3, 1953 ರಂದು ಏರುವ‌ ಮೂಲಕ‌ ಮೊದಲಿಗರಾಗಿದ್ದಾರೆ.

Mount Nanga Parbat

10. ಅನ್ನಪೂರ್ಣ ಪರ್ವತ

ಅನ್ನಪೂರ್ಣ ಪರ್ವತವು ವಿಶ್ವದ ಹತ್ತನೇ ಅತಿ ಎತ್ತರದ ಶಿಖರವಾಗಿದೆ. ಇದು ನೇಪಾಳದ ಉತ್ತರ ಮಧ್ಯ ಭಾಗದಲ್ಲಿದ್ದು, ಸಮುದ್ರಮಟ್ಟದಿಂದ 891 ಮೀಟರ್ ಗಳಷ್ಟು ಎತ್ತರದಲ್ಲಿದೆ.

ಅನ್ನಪೂರ್ಣ ಶಿಖರವು ಅತ್ಯಂತ ಕ್ಲಿಷ್ಟಕರವಾದ ಪರ್ವತವಾಗಿದ್ದು ಇದರ ತುದಿ ತಲುಪುವುದು ತುಂಬಾ ಕಷ್ಟಕರವಾದ ಸಾಹಸ ಎಂದೇ ಹೇಳಲಾಗುತ್ತದೆ. 1950 ಜೂನ್ ಮೂರರಂದು ಫ್ರೆಂಚ್ ಪರ್ವತಾರೋಹಿಗಳಾದ ಮೌರ್ಯ ಜೋರ್ಗ್ ಮತ್ತು ಲೂಯಿಸ್ ಲಾ ಚಾನೆಲ್ ಅವರು ಅನ್ನಪೂರ್ಣ ಪರ್ವತ ಏರಿದ ಮೊದಲ ಪರ್ವತಾರೋಹಿಗಳು ಎನಿಸಿಕೊಂಡಿದ್ದಾರೆ.

Mount Annapurna

ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಜಗತ್ತನ್ನು ತಮ್ಮಷ್ಟಕ್ಕೆ ಗಮನಿಸುತ್ತಾ ಪರ್ವತಾರೋಹಿಗಳನ್ನು ಆಕರ್ಷಿಸುವ ಈ ಪರ್ವತಗಳು ಪ್ರವಾಸೋದ್ಯಮವನ್ನು ಬೆಂಬಲಿಸಲು ಸಹಾಯವೇನು ಮಾಡುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ಈ ಪರ್ವತಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ ಈ ಪರ್ವತಗಳನ್ನು ರಕ್ಷಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ.

You might also like
Leave A Reply

Your email address will not be published.