ಕಾಂತಾರಕ್ಕೆ ಕಾಲಿಟ್ಟ ರಿಯಲ್ ಎಸ್ಟೇಟ್ – ಈ ವರದಿ ಓದಿ

ರಾಜ್ಯದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿಗಳ ರಿಯಲ್ ಎಸ್ಟೇಟ್ ದಂಧೆ ಸಿಲಿಕಾನ್ ಸಿಟಿ ಬಿಟ್ಟು, ಅರಣ್ಯ ಪ್ರದೇಶದತ್ತ ಹೊರಟಿದೆ. ವನ್ಯಜೀವಿ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಗಾಳಿಗೆ ತೂರಿ ರಿಯಲ್ ಎಸ್ಟೇಟ್ ಮಾಡಲೊರಟಿರುವ ಕಂಪನಿಗಳಿಗೆ ಬ್ರೇಕ್ ಬೀಳಲಿದೆಯಾ? ಎಂಬುದನ್ನು ಕಾದು ನೋಡಬೇಕಿದೆ.

ಚಿಕ್ಕಮಗಳೂರು ತಾಲೂಕಿನ ಜಾಗರ ಹೋಬಳಿಯ ಹುಲುವತ್ತಿ ಮತ್ತು ಗೊಣಕಲ್ ಗ್ರಾಮಗಳಲ್ಲಿ 242 ಎಕರೆ ಜಾಗವನ್ನು ತುಂಡು ಭೂಮಿಯಾಗಿ ವಿಭಜಿಸಿ ಕಾಫಿ ಪ್ಲಾಂಟೇಶನ್ ಮಾಡುತ್ತೇವೆ ಎಂದು ಕದ್ದು ಮುಚ್ಚಿ ಲೇಔಟ್ ನಿರ್ಮಿಸಿ, ಹೊರ ರಾಜ್ಯದವರಿಗೆ ಮಾರಾಟ ಮಾಡಲು ಭರ್ಜರಿ ತಯಾರಿ ನಡೆಸಿಕೊಂಡಿವೆ ಈ ಆರು ಕಂಪನಿಗಳು.

 

ವನ್ಯಜೀವಿ ಕಾಯ್ದೆಯನ್ವಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶವಿಲ್ಲ. ಅಲ್ಲದೇ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಯಾವುದೇ ರಕ್ಷಿತ ಪ್ರದೇಶದ ಗಡಿಯಿಂದ 10 ಕಿಮೀ ವ್ಯಾಪ್ತಿಯು ಪರಿಸರ ಸೂಕ್ಷ್ಮ ಪ್ರದೇಶವಾಗಿದೆ ಎಂಬ ಕಾನೂನುಗಳು ಜಾರಿಯಲ್ಲಿದ್ದರೂ, ಈ ಕಂಪನಿಗಳು ಮಾತ್ರ ಆದೇಶವನ್ನು ಗಾಳಿಗೆ ತೂರಿ ರಿಯಲ್ ಎಸ್ಟೇಟ್ ನಿರ್ಮಿಸಲು ಮುಂದಾಗಿವೆ.

ಈ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ರಿಯಲ್ ಎಸ್ಟೇಟ್ಗೆ ಅನುಮತಿ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದು, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಭೂ ಪರಿವರ್ತನೆ ಮಾಡಿದ ಏಳು ಅಧಿಕಾರಿಗಳಿಗೆ ಮಾಹಿತಿ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಹಾಗೇ ಲೇಔಟ್ ನಿರ್ಮಿಸಲು ಮುಂದಾಗಿದ್ದ ಜೆಎಫ್ ಕಾಫಿ ಬೈದಿ ಸ್ಟ್ರೀಮ್ ಎಲ್ ಎಲ್ಪಿ ವ್ಯವಸ್ಥಾಪಕ ಪಾಲುದಾರ ಆದಿತ್ಯ, ಎಂ ಎಸ್ ಜಯರಾಮ್, ಐಬಿಸಿ ಎಸ್ಟೇಟ್ನಿಂದ ಜಿಪಿಎ ಪಡೆದಿರುವ ವಿ ಬಾರೆಟೊ, ಅಭಿಷೇಕ್ ಜಿಂದಾಲ್, ಮಹೇಂದ್ರ ಎಸ್ ಕೆ ಅವರಿಗೆ ನೋಟಿಸ್ ನೀಡಿದ್ದಾರೆ.

You might also like
Leave A Reply

Your email address will not be published.