Unknown ಗನ್‌ಮ್ಯಾನ್‌ಗಳ ಗನ್‌ಗಳಿಗೆ ಬಲಿಯಾದ ಉಗ್ರರೆಷ್ಟು? ಗೊತ್ತಾ?

ಲಷ್ಕರ್ ಈ ತೈಬಾದ ರಾಜಕೀಯ ಅಂಗ ಸಂಸ್ಥೆಯಾದ ಮಿಲ್ಲಿ ಮುಸ್ಲಿಂ ಲೀಗ್‌ನ ಮಾಜಿ ಕೌನ್ಸಿಲರ್ ಅಷ್ಟೇ ಅಲ್ಲದೇ 2015ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ BSF ಕಾನ್ವೇ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಅದ್ನಾನ್ ಅಹಮದ್ ಇದೇ ಡಿಸೆಂಬರ್ 2 & 3ರ ರಾತ್ರಿ ಅಪರಿಚಿತ ಬಂದೂಕುದಾರಿಗಳಿಂದ ತನ್ನದೇ ಮನೆಯ ಎದುರು ಹತನಾಗಿದ್ದಾನೆ.

ಅದ್ನಾನ್ ಅಹಮದ್
ಅದ್ನಾನ್ ಅಹಮದ್

ದಾಳಿಯ ತಕ್ಷಣವೇ ಹತ್ತಿರವೇ ಇದ್ದ ಅಬ್ಬಾಸಿ ಶಹೀದ್ ಆಸ್ಪತ್ರೆಗೆ ತ್ವರಿತವಾಗಿ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸುವ ಮೊದಲೇ ಮರಣ ಹೊಂದಿರುವುದಾಗಿ ಅಲ್ಲಿನ ವೈದ್ಯರು ಖಚಿತಪಡಿಸುತ್ತಾರೆ. ಈತ ಭಾರತದ ಮೋಸ್ಟ್ ವಾಂಟೆಡ್ ಉಗ್ರ ಲಷ್ಕರ್ ಈ ತೈಬಾ ಸ್ಥಾಪಕ ಹಾಗೂ 26/11 ಮುಂಬೈ ಟೆರರಿಸ್ಟ್ ಅಟ್ಯಾಕ್‌ನ ಮಾಸ್ಟರ್ ಮೈಂಡ್ ಹಫೀಜ್ ಸೈಯದ್‌ನ ಅತ್ಯಾಪ್ತ ಕೂಡಾ ಆಗಿದ್ದ ಅನ್ನುವುದು ಗಮನಾರ್ಹ ವಿಷಯವಾಗಿದೆ.

ಭಾರತದ ವಿರುದ್ಧದ ಚಟುವಟಿಕೆಗಳಲ್ಲಿ ಬಾಗಿಯಾದವರ ಸಾವಿನಲ್ಲಿ ( 2023 ರ ಸಾಲಿನಲ್ಲಿ) ಈತನದ್ದು 12ನೆಯದ್ದಾಗಿದೆ. ಭಾರತದ ಪರವಾಗಿ ಕಾರ್ಯಾಚರಣೆ ನಿರತವಾದ ಈ ಅಪರಿಚಿತ ಬಂದೂಕುದಾರಿಗಳು ಈಗ 140 ಕೋಟಿ ಭಾರತೀಯರ ಹಾಟ್ ಫೇವರೀಟ್ ಎಂದರೆ ಖಂಡಿತಾ ತಪ್ಪಲ್ಲ.

ಹಾಗಾದರೆ 2022 ಮತ್ತು 2023 ನೇ ಸಾಲಿನಲ್ಲಿ ಈ ಮುಸುಕುದಾರಿ ಅಥವಾ ಅನಾಮಿಕ ಬಂದೂಕು ದಾರಿಗಳಿಂದ ಹತ್ಯಗೆ ಒಳಗಾದ ಭಾರತದ ಮೋಸ್ಟ್ ವಾಂಟೆಡ್ ಎನಿಸಿಕೊಂಡಿದ್ದ ಉಗ್ರರ ಪಟ್ಟಿಯನ್ನೊಮ್ಮೆ ಪರಿಶೀಲಿಸೋಣ.

1)ಐಯಾಜ್ ಅಹಮದ್ ಅಹಂಗಾರ್

ಐಯಾಜ್ ಅಹಮದ್ ಅಹಂಗಾರ್
ಐಯಾಜ್ ಅಹಮದ್ ಅಹಂಗಾರ್

ಈತ ಕಾಶ್ಮೀರಿ ಉಗ್ರಗಾಮಿಯಾಗಿದ್ದು, ಉಗ್ರ ಸಂಘಟನೆಯಾದ ಗ್ಲೋಬಲ್ ಟೆರರ್ ಗ್ರೂಪ್ ಇಸ್ಲಾಮಿಕ್ ಸ್ಟೇಟ್ ಜೊತೆ ನಿಕಟವಾಗಿ ಸಂಪರ್ಕ ಹೊಂದಿದ್ದ. ಈತ ಅಫ್ಘಾನಿಸ್ಥಾನದ ಕುನ್ವರ್‌ನಲ್ಲಿ 2022 ರ ಫೆಬ್ರವರಿ 14ರಂದು ಮರಣಹೊಂದಿದ್ದು ತಾಲಿಬಾನ್ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

2) ಝಹೂರ್ ಮಿಸ್ಟ್ರಿ

ಝಹೂರ್ ಮಿಸ್ಟ್ರಿ
ಝಹೂರ್ ಮಿಸ್ಟ್ರಿ

ಉಗ್ರಗಾಮಿ ಸಂಘಟನೆಯಾದ ಜೈಶ್ ಈ ಮೊಹಮ್ಮದ್‌ನ ಜೊತೆ ನಿಕಟವಾದ ಸಂಪರ್ಕ ಹೊಂದಿದ್ದ ಈತ ಏರ್ ಇಂಡಿಯಾ IC – 814 ವಿಮಾನ ಅಪಹರಣದಂತ ಕೃತ್ಯದಲ್ಲೂ ಭಾಗಿಯಾಗಿದ್ದ.‌ ಈತನನ್ನು ಅನಾಮಿಕ ಬಂದೂಕುದಾರಿಗಳು 2022 ರ ಮಾರ್ಚ್ 1ರಂದು  ಕರಾಚಿಯಲ್ಲಿ ಹತ್ಯೆಮಾಡಿದ್ದಾರೆ.

3)ರಿಪುದಮನ್ ಸಿಂಗ್ ಮಲಿಕ್

ರಿಪುದಮನ್ ಸಿಂಗ್ ಮಲಿಕ್
ರಿಪುದಮನ್ ಸಿಂಗ್ ಮಲಿಕ್

ಖಾಲಿಸ್ತಾನಿ ಉಗ್ರ ಸಂಘಟನೆಯಾದ ಬಬ್ಬರ್ ಖಾಲ್ಸಾದ ಜೊತೆ ನಿಕಟ ಸಂಪರ್ಕಹೊಂದಿದ್ದ ಈತ ಭಾರತದ ವಿರುದ್ಧದ ಹಲವಾರು ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್‌ ಎಂದು ಗುರುತಿಸಿಕೊಂಡಿದ್ದ, 1985 ರಲ್ಲಿ ಕೆನಾಡದಲ್ಲಿ ನಡೆದ ಏರ್ ಇಂಡಿಯಾ ವಿಮಾನದ ಬಾಂಬಿಂಗ್ ಪ್ರಕರಣದ ಕುರಿತ ಮುಖ್ಯ ಚೆಹರೆ ಈತನದ್ದೇ ಆಗಿತ್ತು.

4) ಹರ್ವಿಂದರ್ ಸಿಂಗ್ ಸಂಧು

ಹರ್ವಿಂದರ್ ಸಿಂಗ್ ಸಂಧು
ಹರ್ವಿಂದರ್ ಸಿಂಗ್ ಸಂಧು

ಖಾಲಿಸ್ತಾನಿ ಉಗ್ರಗಾಮಿಯಾಗಿದ್ದ ಈತ ಪಂಜಾಬಿ ಗಾಯಕ ಸಿದ್ದು ಮೂಸೇವಾಲ ಹತ್ಯೆಯ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗುತ್ತದೆ. 2022 ರ ನವೆಂಬರ್‌  19 ರಂದು ಲಾಹೋರ್‌ನಲ್ಲಿ ಈತ ಮರಣಹೊಂದುತ್ತಾನೆ.

5)ಸೈಯದ್ ನೂರ್ ಶಾಲೋಬಾರ್

ಸೈಯದ್ ನೂರ್ ಶಾಲೋಬಾರ್
ಸೈಯದ್ ನೂರ್ ಶಾಲೋಬಾರ್

ಇಸ್ಲಾಮಿಕ್ ಸ್ಟೇಟ್ ಖೋರಾಸಾನ್‌ ಕಮಾಂಡರ್. ಈತ ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ಉಗ್ರ ಸಂಘಟನೆಗಳಿಗೆ ರಿಕ್ರೂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈತನನ್ನು ಭಾರತೀಯರ ಫೇವರೀಟ್ ಮುಸುಕುದಾರಿಗಳು 2023ರ ಮಾರ್ಚ್ 3ರಂದು 72 ಕನ್ಯೆಯರ ಬಳಿ ಕಳಿಸುತ್ತಾರೆ.

6)ಸಯ್ಯದ್ ಖಲೀದ್ ರಾಜಾ

ಸಯ್ಯದ್ ಖಲೀದ್ ರಾಜಾ
ಸಯ್ಯದ್ ಖಲೀದ್ ರಾಜಾ

ಈತ ಉಗ್ರಗಾಮಿ ಸಂಘಟನೆಯಾದ ಅಲ್ ಬದ್ರ್‌ನ ಕಮಾಂಡರ್ ಆಗಿದ್ದು ಭಾರತದ ವಿರುದ್ಧ ಜಿಹಾದ್ ಮಾಡಲು ಹುರಿದುಂಬಿಸುತ್ತಿದ್ದ. ಈತನನ್ನು ಇದೇ ವರ್ಷದ ಫೆಬ್ರವರಿ 27 ರಂದು ಮೇಲೆಕಳಿಸಲಾಗಿದೆ.

7)ಬಶೀರ್ ಅಹಮದ್ ಪೀರ್

ಬಶೀರ್ ಅಹಮದ್ ಪೀರ್
ಬಶೀರ್ ಅಹಮದ್ ಪೀರ್

ಹಿಜಬುಲ್ ಮುಜಾಹಿದ್ದೀನ್‌ನ ಕಮಾಂಡರ್ ಆಗಿದ್ದ ಈತನಿಗೆ ಇದೇ ವರ್ಷದ ಫೆಬ್ರವರಿ 20ರಂದು ಅದೇ ಮುಸುಕುದಾರಿಗಳು ನರಕದ ದಾರಿ ತೋರಿಸಿದ್ದಾರೆ.

8)ಮೌಲಾನಾ ರಹೀಮ್ ಉಲ್ಲ್ಹಾ ತರೀಖ್.

ಮೌಲಾನಾ ರಹೀಮ್ ಉಲ್ಲ್ಹಾ ತರೀಖ್.
ಮೌಲಾನಾ ರಹೀಮ್ ಉಲ್ಲ್ಹಾ ತರೀಖ್.

ಜೈಶ್ ಈ ಮೊಹಮ್ಮದ್‌ನ ನಾಯಕನಾಗಿ ಗುರುತಿಸಿಕೊಂಡಿದ್ದ ಈತ ಮೌಲಾನಾ ಮಸೂದ್ ಅಜರ್‌ನ ಆಪ್ತನೂ ಆಗಿದ್ದ. ಇದೇ ವರ್ಷದ ನವೆಂಬರ್ 13ರಂದು ಈತನನ್ನೂ ಕೂಡಾ ಮುಗಿಸಲಾಗಿದೆ‌.

9)ಅಕ್ರಮ್ ಖಾನ್

ಅಕ್ರಮ್ ಖಾನ್
ಅಕ್ರಮ್ ಖಾನ್

ಲಷ್ಕರ್ ಈ ತೈಬಾ ಸಂಘಟನೆಯ ನಾಯಕನಾಗಿದ್ದ ಈತ LeTಯ ರಿಕ್ರೂಟರ್ ಆಗಿ ಕೂಡಾ ಕಾರ್ಯ ನಿರ್ವಹಿಸುತಗತಿದ್ದ‌. ಈ ವರ್ಷದ ನವೆಂಬರ್ 9 ಈ ಭೂಮಿಯ ಮೇಲೆ ಆತನ‌ ಕೊನೆಯ ದಿನವಾಗಿತ್ತು.

10)ಖ್ವಾಜಾ ಶಹೀದ್

ಖ್ವಾಜಾ ಶಹೀದ್
ಖ್ವಾಜಾ ಶಹೀದ್

ಲಷ್ಕರ್ ಈ ತೈಬಾದ ಕಮಾಂಡರ್ ಆಗಿದ್ದ ಈತನನ್ನು 2023ರ ನವೆಂಬರ್ 5ರಂದು ಮುಗಿಸಿದ್ದಾರೆ.

11)ಶಹೀದ್ ಲತೀಫ್

ಶಹೀದ್ ಲತೀಫ್
ಶಹೀದ್ ಲತೀಫ್

ಉಗ್ರಗಾಮಿ ಸಂಘಟನೆ ಜೈಶ್ ಈ ಮೊಹಮ್ಮದ್‌ನ ನಾಯಕನಾಗಿದ್ದ ಈತ 2016ರಲ್ಲಿ ಭಾರತದ ವಾಯುಪಡೆಯ ಬೇಸ್ ಕ್ಯಾಂಪ್ ಪಠಾಣ್‌ಕೋಟ್ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಇದೇ ವರ್ಷದ ಅಕ್ಟೋಬರ್ 11ರಂದು ಈತನಿಗೂ ನರಕದ ದಾರಿ ತೋರಿಸಿದ್ದಾರೆ.

12)ದಾವೂದ್ ಮಲೀಕ್

ದಾವೂದ್ ಮಲೀಕ್

ಉಗ್ರಗಾಮಿ ಸಂಘಟನೆಯಾದ ಲಷ್ಕರ್ ಈ ಜಬ್ಬರ್‌ನ ಸಂಸ್ಥಾಪಕನಾಗಿದ್ದ ಈತನನ್ನು ಈ ವರ್ಷದ ಅಕ್ಟೋಬರ್ 20 ರಂದು ಹತ್ಯಮಾಡಲಾಗಿದೆ‌.

13)ಝಿಔರ್ ರೆಹಮಾನ್

ಝಿಔರ್ ರೆಹಮಾನ್
ಝಿಔರ್ ರೆಹಮಾನ್

LeT ಯ ನಾಯಕನಾಗಿದ್ದ ಈತ, ಯುವಕರನ್ನು ಭಾರತದ ವಿರುದ್ಧ ದಂಗೆ ಏಳಲು ಪ್ರೇರೆಪಿಸುತ್ತಿದ್ದ. ಸೆಪ್ಟೆಂಬರ್ 29 ರಂದು ಆತನಿಗೆ ಅನಾಮಿಕ ಬಂದೂಕುದಾರಿಗಳು ಬೈ ಬೈ ಹೇಳಿದ್ದಾರೆ.

14)ಸುಖದೂಲ್ ಸಿಂಗ್ ಅಲಿಯಾಸ್ ಸುಖ ದುನಕೆ

ಸುಖದೂಲ್ ಸಿಂಗ್ ಅಲಿಯಾಸ್ ಸುಖ ದುನಕೆ
ಸುಖದೂಲ್ ಸಿಂಗ್ ಅಲಿಯಾಸ್ ಸುಖ ದುನಕೆ

ಖಾಲಿಸ್ತಾಮಿ ಉಗ್ರಗಾಮಿಯಾಗಿದ್ದ ಸುಖದೂಲ್ ಸಿಂಗ್ ಅಲಿಯಾಸ್ ಸುಖ ದುನಕೆಯನ್ನು ಸೆಪ್ಟೆಂಬರ್ 21ರಂದು ಅಪರಿಚಿತ ಬಂದೂಕುದಾರಿಗಳು ಹತ್ಯೆಮಾಡಿದ್ದಾರೆ.

15)ಅಬು ಖಾಸೀಮ್ ಕಾಶ್ಮೀರಿ ಅಲಿಯಾಸ್ ರಿಯಾಜ್ ಅಹಮದ್

ಅಬು ಖಾಸೀಮ್ ಕಾಶ್ಮೀರಿ ಅಲಿಯಾಸ್ ರಿಯಾಜ್ ಅಹಮದ್
ಅಬು ಖಾಸೀಮ್ ಕಾಶ್ಮೀರಿ ಅಲಿಯಾಸ್ ರಿಯಾಜ್ ಅಹಮದ್

ಜಮ್ಮುವಿನವನಾಗಿದ್ದ ಈತ ರಜೌರಿಯಲಿ ನಡೆದ ಧಂಗ್ರಿ ಅಟ್ಯಾಕಿನ ಮುಖ್ಯ ರುವಾರಿಯಾಗಿದ್ದ. ಅಟ್ಯಾಕ್ ಮಾಡಿ ವರ್ಷ ಮುಗಿಯುವುದರೊಳಗೇ ( ಸೆಪ್ಟೆಂಬರ್ 8 ) ಎಂದು ಬಾರದ ಲೋಕಕ್ಕೆ ಆತನನ್ನು ಕಳಿಸಲಾಗಿದೆ.

16)ಸರ್ದಾರ್ ಹುಸೈನ್ ಅರೈನ್

ಸರ್ದಾರ್ ಹುಸೈನ್ ಅರೈನ್
ಸರ್ದಾರ್ ಹುಸೈನ್ ಅರೈನ್

ಲಷ್ಕರ್ ಈ ತೈಬಾದ ಆಪರೇಟಿವ್ ಆಗಿದ್ದ ಈತ ಹಫೀಜ್ ಸಯ್ಯದ್‌ನ ಅತ್ಯಾಪ್ತನೂ ಆಗಿದ್ದ. ಈತ ಮದರಸಾ ನೆಟ್ವರ್ಕ್‌ ಆಫ್ ಜಮಾದ್- ಉದ್ -ದಾವ್ಹಾಕ್ಕೆ ಹೊಣೆಗಾರನಾಗಿದ್ದ. ಆಗಸ್ಟ್ ಒಂದರಂದು ಕರಾಚಿಯಲ್ಲಿ ಹತ್ಯೆಮಾಡಿದ ನಂತರ ಈತನ ಸಾವಿನ ಹೊಣೆಗಾರಿಕೆಯನ್ನು ಸಿದುದೇಶ್ ರೆವಲ್ಯೂಷನರಿ ಆರ್ಮಿಯು ಹೊತ್ತಿದೆ.

17) ಹರ್ದೀಪ್ ಸಿಂಗ್ ನಿಜ್ಜರ್

ಹರ್ದೀಪ್ ಸಿಂಗ್ ನಿಜ್ಜರ್
ಹರ್ದೀಪ್ ಸಿಂಗ್ ನಿಜ್ಜರ್

ಖಾಲಿಸ್ತಾನಿ ಟೈಗರ್ ಫೋರ್ಸ್‌ನ ಮುಖ್ಯಸ್ಥನಾಗಿದ್ದ ಈತ ಭಾರತದ ವಿರುದ್ಧದ ಹಲವಾರು ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ. ಇದೇ ವರ್ಷದ ಜೂನ್ 19 ರಂದು ಆತನನ್ನೂ ಕೊಲ್ಲಲಾಗಿದೆ.

18) ಅವತಾರ್ ಸಿಂಗ್ ಖಂಡ

ಅವತಾರ್ ಸಿಂಗ್ ಖಂಡ
ಅವತಾರ್ ಸಿಂಗ್ ಖಂಡ

ಇಂಗ್ಲೆಂಡ್ ನಲ್ಲಿ ನೆಲೆಸಿದ್ದ ಖಾಲಿಸ್ತಾನಿ ಉಗ್ರ, ಇದೇ ವರ್ಷ ಇಂಗ್ಲೇಂಡ್‌ನ ಇಂಡಿಯನ್ ಹೈಕಮಿಷನ್‌ ಮೇಲಾದ ದಾಳಿಯಲ್ಲಿ ಈತನ ಪಾತ್ರ ಅಪಾರವಾಗಿತ್ತು. ಇದೇ ವರ್ಷ ಜೂನ್ 16ರಂದು ಅದೇ ಅಪರಿಚಿತ ಬಂದೂಕುದಾರಿಗಳು ಆತನನ್ನು ಸಾವಿನಮನೆಗೆ ಕಳಿಸಿದ್ದಾರೆ.

19) ಪರಮ್‌ಜಿತ್ ಸಿಂಗ್ ಪನ್ವಾರ್

ಪರಮ್‌ಜಿತ್ ಸಿಂಗ್ ಪನ್ವಾರ್
ಪರಮ್‌ಜಿತ್ ಸಿಂಗ್ ಪನ್ವಾರ್

ಖಾಲಿಸ್ತಾನಿ ಕಮಾಂಡೋ ಫೋರ್ಸ್‌ನ ಮುಖ್ಯಸ್ಥನಾಗಿದ್ದ ಈತನನ್ನು ಲಾಹೋರ್‌ನ ಮನೆಯ ಎದುರೇ ಮೇ 6ರಂದು ಹತ್ಯೆ ಮಾಡಲಾಗಿದೆ. ತುಂಬಾ ಸಮಯದಿಂದ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರ ಲಿಸ್ಟಿನಲ್ಲಿ ಈತನ ಹೆಸರಿತ್ತು.

ಈ ಅಪರಿಚಿತ ಬಂದೂಕುದಾರಿಗಳಿಂದ ಇಂತಹ ಅದೆಷ್ಟೋ ಉಗ್ರರಿಗೆ ನಡುಕ ಶುರುವಾದಂತಿದೆ. ಉಗ್ರರ ಸ್ವಂತ ಮನೆಯನ್ನೇ ಹೊಕ್ಕು ಸಾವಿನ ಮನೆ ದಾರಿ ತೋರಿಸಿದ ಈ ವೀರ ಬಂದೂಕುದಾರಿಗಳಿಗೆ, ಉಗ್ರರು ಪಾತಾಳದಲ್ಲಿ ಅಡಗಿದರೂ ಬಿಡುವರೆಂಬ ನಂಬಿಕೆ ಸಧ್ಯಕ್ಕಂತೂ ಇಲ್ಲ.

ಅದೇನೇ ಇರಲಿ, ಭಾರತದ ವಿರುದ್ಧದ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಹುಡುಕಿ ಹುಡುಕಿ ಕೊಲ್ಲುತ್ತಿರುವ ಈ ಬಂದೂಕುದಾರಿಗಳಿಗೆ ದೇವರ ಆಶೀರ್ವಾದ ಸದಾ ಇರಲಿ ಇನ್ನಷ್ಟು ಉಗ್ರರನ್ನು ಹೊಡೆದುರುಳಿಸಲಿ ಎಂದು ಪ್ರಾರ್ಥಿಸೋಣ.

 

You might also like
Leave A Reply

Your email address will not be published.