ತೆಲಂಗಾಣ ಬಜೆಟ್ 1.9 ಲಕ್ಷ ಕೋಟಿ. ಆದರೆ, ಕಾಂಗ್ರೆಸ್ ಗ್ಯಾರಂಟಿಗೆ ಬೇಕಾದ ಹಣವೆಷ್ಟು ಗೊತ್ತೇ?

ಪಂಚರಾಜ್ಯ ಚುನಾವಣೆಗಳಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಕಾಂಗ್ರೆಸ್ ಅತಿಯಾದ ಚುನಾವಣಾ ಪೂರ್ವ ಭರಸವೆಗಳನ್ನು ನೀಡಿ ಇದೀಗ, ಕೈ ಸುಟ್ಟುಕೊಂಡಂತೆ ಕಾಣುತ್ತಿದೆ. ಕರ್ನಾಟಕ ಪಕ್ಕದ ರಾಜ್ಯದಲ್ಲಿ ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದೆಹೋಗಿ 6 ಗ್ಯಾರಂಟಿಗಳನ್ನು ನೀಡುವ ಬಗ್ಗೆ ಕಾಂಗ್ರೆಸ್ ಪ್ರಮಾಣ ಮಾಡಿತ್ತು. ಗ್ಯಾರಂಟಿಗಳ ಆಸೆಯ ಮೇಲೆ ಗೆದ್ದುಬಂದಿರುವ ಕಾಂಗ್ರೆಸ್ʼಗೆ ಆರಂಭದಲ್ಲಿಯೇ ಸಂಕಷ್ಟ ಶುರುವಾಗಿದೆ.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ʼಗಢ ರಾಜ್ಯದಲ್ಲಿ ಭರ್ಜರಿ ಜಯಭೇರಿ ಭಾರಿಸಿ ಅಧಿಕಾರಕ್ಕೇರಿದೆ. ಮಿಜೋರಾಂನಲ್ಲಿ ಪ್ರಾದೇಶಿಕ ZPM ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಗ್ಯಾರಂಟಿಗಳ ಭರವಸೆಯ ನಡುವೆಯೂ ಕಾಂಗ್ರೆಸ್ ತೆಲಂಗಾಣದಲ್ಲಿ ಮಾತ್ರ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದೆ.

ಉಚಿತ ಯೋಜನೆಗಳ ಭರವಸೆಯ ಮೇಲೆ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇದೀಗ ಸಂಕ್ಟಕ್ಕೆ ಸಿಲುಕಿದೆ. ಇಂದು ಗುರುವಾರ ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ರೇವಂತ್ ರೆಡ್ಡಿಯವರಿಗೆ ಆರಂಬದಲ್ಲಿಯೇ ಸವಾಲು ಸಿದ್ದವಾಗಿದೆ.

ತೆಲಂಗಾಣದ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ

 

ಕಾಂಗ್ರೆಸ್ ತೆಲಂಗಾಣದಲ್ಲಿ 6 ಚುನಾವಣಾ ಪೂರ್ವ ಘೋಷಣೆಗಳನ್ನು ಮಾಡಿತ್ತು. ಈ ಘೋಷಣೆಗಳ ಜಾರಿಗೆ ಪ್ರಥಮ ವರ್ಷದಲ್ಲಿ ಬರೋಬ್ಬರಿ ರೂ. 1.4 ಲಕ್ಷ ಕೋಟಿ ರೂ. ವೆಚ್ಚಮಾಡಬೇಕಾಗಿದೆ. ಆದರೆ, ತೆಲಂಗಾಣದ ಒಟ್ಟು ಬಜೆಟ್ ಇರುವುದು ರೂ. 1.9 ಲಕ್ಷ ಕೋಟಿ ರೂ. ಬಜೆಟ್ʼನ ಶೇ. 75 ಕ್ಕಿಂತಲೂ ಅಧಿಕ ಪ್ರತಿಶತ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡುವುದಾದರೆ, ಸರ್ಕಾರ ನಡೆಸುವುದು ಹೇಗೆಂಬ ಪ್ರಶ್ನೆ ಉದ್ಭವವಾಗಿದೆ.

ಗ್ಯಾರಂಟಿ ಯೋಜನೆಗಳ ಜಾರಿ ಮಾಡಿ ಉಳಿದ ಕೇವಲ 50 ಸಾವಿರ ಕೋಟಿ ರೂ.ಗಳಲ್ಲಿ ನೌಕರರ ವೇತನ, ಸರ್ಕಾರಿ ಖರ್ಚು-ವೆಚ್ಚಗಳನ್ನು ನಿಭಾಯಿಸುವುದು ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡುವುದು ಹೇಗೆ ಸಾಧ್ಯ ಎಂದು ಆರ್ಥಿಕ ತಜ್ಞರು ಪ್ರಶ್ನಿಸಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಘೋಷಿಸಿದ ಉಚಿತ ಯೋಜನೆಗಳು :

1) ಮಹಾಲಕ್ಷ್ಮಿ ಯೋಜನೆ : ಈ ಯೋಜನೆಯಡಿ ತೆಲಂಗಾನದ ಮಹಿಳೆಯರಿಗೆ ಮಾಸಿಕ ರೂ. 2,500 ರೂ.ಗಳು. ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳಲು ರೂ. 500 ಹಾಗೂ ಬಸ್ʼಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಭರವಸೆ.
2) ರೈತು ಭರೋಸಾ : ರೈತರಿಗೆ ವಾರ್ಷಿಕ ರೂ.15,000, ಕೃಷಿ ಕಾರ್ಮಿಕರಿಗೆ ವಾರ್ಷಿಕ ರೂ.12,000 ಹಾಗೂ ಭತ್ತ ಕಟಾವಿಗೆ ರೂ.500 ಪ್ರೋತ್ಸಾಹಧನ ನೀಡುವ ಭರವಸೆ.
3) ಗೃಹಜ್ಯೋತಿ : 200 ಯೂನಿಟ್ ವರೆಗಿನ ಗೃಹ ಬಳಕೆ ವಿದ್ಯುತ್ ಉಚಿತ.
4) ಇಂದಿರಮ್ಮ ಮನೆ : ಈ ಯೋಜನೆಯಡಿ ತೆಲಂಗಾಣ ಮೂವ್ʼಮೆಂಟ್ ಹೋರಾಟಗಾರರಿಗೆ 250 sq yards ಪ್ಲಾಟ್ಸ್ ಹಾಗೂ ಮನೆ ಇಲ್ಲದವರಿಗೆ ಉಚಿತ ಮನೆ ನಿವೇಶನ ಹಾಗೂ ರೂ.5 ಲಕ್ಷ ಹಣ ನೀಡುವ ಭರವಸೆ
5) ಯುವ ವಿಕಾಸಂ : ರೂ.2 ಲಕ್ಷ ಮೌಲ್ಯದ ವಿದ್ಯಾ ಬರೋಸಾ ಕಾರ್ಡ್ ವಿತರಿಸಲಾಗುತ್ತದೆ. ಪ್ರತಿ ತಾಲ್ಲೂಕಿನಲ್ಲಿ ತೆಲಂಗಾಣ ಇಂಟರ್ ನ್ಯಾಷನಲ್ ಶಾಲೆಗಳ ಆರಂಭಿಸುವ ಭರವಸೆ.
6) ಚೆಯೂತ : ಹಿರಿಯ ನಾಗರಿಕರಿಗೆ ಮಾಸಿಕ ರೂ.4000 ಪಿಂಚಣಿ. ರಾಜೀವ್ ಆರೋಗ್ಯ ಶ್ರೀ ಇನ್ಸುರೆನ್ಸ್ ಅಡಿ ರೂ. 10 ಲಕ್ಷ ಜೀವವಿಮೆ.

Telangana Election 2023
ತೆಲಂಗಾಣದಲ್ಲಿ ಕಾಂಗ್ರೆಸ್ ಘೋಷಿಸಿದ ಉಚಿತ ಯೋಜನೆಗಳು

 

ತೆಲಂಗಾಣದಲ್ಲಿ 64 ಶಾಸಕರ ಬಲದಿಂದ ಅಧಿಕಾರಕ್ಕೇರಿರುವ ಕಾಂಗ್ರೆಸ್ ತನ್ನ ಭರವಸೆಗಳನ್ನು ಈಡೇರಿಸಲು ಸರ್ಕಸ್ ಮಾಡಬೇಕಿರುವುದು ಅನಿವಾರ್ಯ. ಕರ್ನಾಟಕದಲ್ಲಿ ಭರವಸೆ ನೀಡಿದ್ದ 5 ಗ್ಯಾರಂಟಿಗಳನ್ನು ಜಾರಿ ಮಾಡಲು ಕಾಂಗ್ರೆಸ್;ಗೆ ಇದುವರೆಗೂ ಸಾಧ್ಯವಾಗಿಲ್ಲ. ಹಲವು ಷರತ್ತುಗಳನ್ನು ಹಾಕಿ 4 ಗ್ಯಾರಂಟಿಗಳನ್ನು ಜಾರಿ ಮಾಡಿದ್ದರೂ, 5 ನೇ ಗ್ಯಾರಂಟಿ ಯುವಶಕ್ತಿ ಯೋಜನೆ ಜಾರಿ ಮಾಡಲು ಸರ್ಕಾರದ ಹತ್ತಿರ ಅಂದಾಜು ಅಂಕಿ-ಅಂಶಗಳೇ ಇಲ್ಲ. ಗ್ಯಾರಂಟಿ ಯೋಜನೆಗಳ ಪರಿಣಾಮ ರಾಜ್ಯದಲ್ಲಿ ಬೆಲೆ ಏರಿಕೆ, ಅಭಿವೃದ್ಧಿ ಕಾಮಗಾರಿಗಳ ಸ್ಥಗಿತತೆ, ಈ ಹಿಂದೆ ನಡೆದ ಕಾಮಗಾರಿಗಳಿಗೆ ಅನುದಾನ ನೀಡದೇ ಇರುವಂತಹ ಸಾಕಷ್ಟು ಸಮಸ್ಯೆಗಳನ್ನು ಕಾಂಗ್ರೆಸ್ ಸರ್ಕಾರವನ್ನು ಕಾಡುತ್ತಿವೆ.

ಇಷ್ಟೆಲ್ಲ ಸಂಕಷ್ಟದ ನಡುವೆಯೂ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಮ್ಮ 6 ಗ್ಯಾರಂಟಿಗಳನ್ನು ಹೇಗೆ ಜಾರಿ ಮಾಡುತ್ತಾರೆ ಎನ್ನುವ ಆಸಕ್ತಿ ಜನತೆಯಲ್ಲಿ ಮೂಡಿದೆ.

You might also like
Leave A Reply

Your email address will not be published.