ರಾಮ ಮಂದಿರ ನಿಷ್ಪ್ರಯೋಜಕ – ಸಮಾಜವಾದಿ ಪಕ್ಷದ ನಾಯಕನ ವಿವಾದಿತ ಹೇಳಿಕೆ

ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಅವರು ಮಂಗಳವಾರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ರಾಮ ಮಂದಿರ ನಿಷ್ಪ್ರಯೋಜಕ (ದೇವಾಲಯವು ಬೇಕಾರ್) ಎಂದು ಹೇಳಿಕೆ ನೀಡಿ ಬಾರಿ ವಿವಾದಕ್ಕೆ ಸಿಲುಕಿದ್ದಾರೆ‌. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿದ ಸಮಾಜವಾದಿ ಪಕ್ಷದ ನಾಯಕ, ರಾಮ ಮಂದಿರವನ್ನು ವಾಸ್ತು ಪ್ರಕಾರ ನಿರ್ಮಿಸಲಾಗಿಲ್ಲ ಎಂದು ಹೇಳಿದ್ದಾರೆ.

ನಾನು ಪ್ರತಿದಿನ ರಾಮನನ್ನು ಪೂಜಿಸುತ್ತೇನೆ. ಆದರೆ ಇನ್ನು ಕೆಲವರು ರಾಮನವಮಿಯನ್ನು ಪೇಟೆಂಟ್ ಮಾಡಿದ್ದಾರೆ.‌ ಆದರೆ ಆ ಮಂದಿರ ನಿಷ್ಪ್ರಯೋಜಕವಾಗಿದೆ, ದೇವಸ್ಥಾನಗಳನ್ನು ಕಟ್ಟುವ ರೀತಿ ಅದಲ್ಲ ದೇವಾಲಯದ ವಿನ್ಯಾಸ ಮತ್ತು ನಕ್ಷೆಯು ವಾಸ್ತು ಪ್ರಕಾರ ಇಲ್ಲ.

ಇನ್ನು ರಾಮ್ ಗೋಪಾಲ್ ಯಾದವ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ, ರಾಮ ಮಂದಿರದ ಬಗ್ಗೆ INDI ಅಲಯನ್ಸ್ ನೀಡಿದ ಹೇಳಿಕೆಗಳು ಅತ್ಯಂತ ಆಘಾತಕಾರಿ ‌ಮತ್ತು ಅವಮಾನಕರವಾಗಿವೆ ಎಂದು ಹೇಳಿದೆ. ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಇಂಡಿ ಅಲಯನ್ಸ್ ತಮ್ಮ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಜನರ ನಂಬಿಕೆಗಳೊಂದಿಗೆ ಆಟವಾಡುತ್ತಿದೆ‌, ವಿರೋಧ ಪಕ್ಷಗಳು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಯಾವಾಗಲೂ ವಿರೋಧ ಮಾಡುತ್ತಲೇ ಬಂದಿದ್ದಾರೆ ಎಂದರು.

ಇನ್ನು ಬಿಜೆಪಿಯ ವಕ್ತಾರ ಶೆಹಜಾದ್ ಪೂನಾವಾಲ ಅವರು ತಮ್ಮ ಎಕ್ಸ್ ಖಾತೆಯಲ್ಲಿ, ಇಂಡಿ ಅಲಯನ್ಸ್‌ನ ಎಸ್‌ಪಿ ನಾಯಕ ರಾನ್ ಗೋಪಾಲ್ ಯಾದವ್ ಅವರು ಮಾಡಿದ ಹೇಳಿಕೆ ಆಘಾತಕಾರಿ ಮತ್ತು ಅವಮಾನಕಾರಿಯಾಗಿದೆ, ಸಮಾಜವಾದಿ ಪಕ್ಷವು ರಾಮ ಭಕ್ತರ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ ಅವರು ಇಂಹಹ ಹೇಳಿಕೆಗಳ ಮೂಲಕ ಇಂಡಿ ಮೈತ್ರಿಕೂಟವು ಸನಾತನ ಧರ್ಮದ ನಿರ್ಮೂಲನೆಗೆ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

You might also like
Leave A Reply

Your email address will not be published.