ಜೊಲ್ಲೆ – ಜಾರಕಿಹೊಳಿ ಯಾರಾಗುತ್ತಾರೆ ಚಿಕ್ಕೋಡಿಯ ಚಕ್ರವರ್ತಿ

ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಭರ್ಜರಿ ಪ್ರತಿಷ್ಠೆಯ ಕಣವಾಗಿ ಇಟ್ಟುಕೊಂಡಿದ್ದು, ಈ ಭಾರಿ ಅದೃಷ್ಟ ಯಾರ ಪಕ್ಷದ ಪಾಲಾಗಲಿದೆ? ಎಂಬುದನ್ನು ನೋಡಬೇಕಿದೆ.

ಚಿಕ್ಕೋಡಿಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. ಆದರೆ, ಕಾಂಗ್ರೆಸ್‌ನಿಂದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಿದ್ದು, ಗೆಲುವಿಗಾಗಿ ಭರ್ಜರಿ ಪೈಪೋಟಿ ಶುರುವಾಗಿದೆ. ಇಬ್ಬರೂ ಅಬ್ಬರದ ಪ್ರಚಾರವನ್ನು ನಡೆಸಿದ್ದಾರೆ.

ಇನ್ನು ಅಣ್ಣಾ ಸಾಹೇಬ್ ಜೊಲ್ಲೆಗೆ ಮೋದಿ ಅಲೆ ಹಾಗೂ ರಾಮಮಂದಿರ ನಿರ್ಮಾಣದ ಬಲ ಸಿಕ್ಕಿದೆ. ಇತ್ತ ಮೊದಲ ಬಾರಿ ಲೋಕಸಭೆಗೆ ಕಣಕ್ಕಿಳಿದ ಪ್ರಿಯಾಂಕಾ ಜಾರಕಿಹೊಳಿಗೆ ತಂದೆ ಸವಚಿವರಾಗಿರುವುದು ಹಾಗೂ ಕಾಂಗ್ರೆಸ್‌ ಗ್ಯಾರಂಟಿಗಳು ಮತ ಪಡೆಯಲು ಸಹಕಾರಿ ಆಗಿವೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರವು ನಿಪ್ಪಾಣಿ, ಚಿಕ್ಕೋಡಿ, ಯಮಕನಮರಡಿ, ಹುಕ್ಕೇರಿ, ರಾಯಬಾಗ, ಕುಡಚಿ, ಅಥಣಿ ಹಾಗೂ ಕಾಗವಾಡ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಒಳಗೊಂಡಿದೆ.

Jolle - Jarakiholi who will become the emperor of Chikkodi

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿವರ:

#ಒಟ್ಟು ಅಭ್ಯರ್ಥಿಗಳು – 18
#ಒಟ್ಟು ಮತದಾರರು – 17,61,694
#ಪುರುಷ ಮತದಾರ – 8,85,200
#ಮಹಿಳಾ ಮತದಾರ – 8,76,414
ಇತರೆ – 80
#ಒಟ್ಟು ಮತಗಟ್ಟೆಗಳು – 1896
#ಚುನಾವಣಾ ಸಿಬ್ಬಂದಿ – 8,792

You might also like
Leave A Reply

Your email address will not be published.