ಎಚ್ಚರಿಕೆಯಿಂದ ಮಾತನಾಡಿ – ರಾಹುಲ್ ಗಾಂಧಿಗೆ ಚುನಾವಣಾ ಆಯೋಗದ ನೋಟಿಸ್

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಪನೌತಿ (ದುರದೃಷ್ಟ) ಮತ್ತು ಜೈಬ್ ಕತ್ರಾ (ಪಿಕ್ ಪಾಕೆಟ್) ಎಂದು ರಾಹುಲ್ ಗಾಂಧಿ ಕರೆದ ಕೆಲವು ವಾರಗಳ‌ ನಂತರ ದೆಹಲಿ ಹೈ ಕೋರ್ಟ್ ರಾಹುಲ್‌ ಗಾಂಧಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಅದಾದ ಕೆಲವೇ ವಾರಗಳ ನಂತರ ರಾಹುಲ್ ಗಾಂಧಿ ತನ್ನ ಮಾತಿನ ಮೇಲೆ ನಿಗಾ ಇಡುವಂತೆ ಚುನಾವಣಾ ಆಯೋಗವು ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ಮೇಲೆ‌ ಕ್ರಮ ಕೈಗೊಳ್ಳಲು ದೆಹಲಿ ಹೈಕೋರ್ಟ್, ಚುನಾವಣಾ ಆಯೋಗಕ್ಕೆ ಎಂಟು ವಾರಗಳ ಕಾಲಾವಕಾಶ ನೀಡಿತ್ತು ಎನ್ನಲಾಗಿದೆ.

ಇನ್ನು ಕೆಲವೇ ವಾರಗಳಲ್ಲಿ ಮುಂಬರುವ ಲೋಕಸಭಾ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಸಂಭವವಿದ್ದು ಪ್ರಸಕ್ತ ಲೋಕಸಭೆಯ ಅವಧಿಯು ಜೂನ್ ವೇಳೆಗೆ ಅಂತ್ಯಗೊಳ್ಳಲಿದೆ.‌ ಮೂಲಗಳ ಪ್ರಕಾರ, ರಾಜಕೀಯ ಪಕ್ಷಗಳು ವಿಷಯಾಧಾರಿತ ಚರ್ಚೆಗಳ ಮೇಲೆ ಕೇಂದ್ರೀಕರಿಸಲು ಸೂಚನೆ ನೀಡಿದ್ದು, ಚುನಾವಣಾ ಆಯೋಗವು ರಾಹುಲ್‌ ಗಾಂಧಿಯವರಿಗೆ ನೀಡಿದ ಸಲಹೆಗಳನ್ನು ಗಂಭೀರವಾಗಿ ಪಾಲಿಸುವಂತೆ ಆದೇಶಿಸಲಾಗಿದೆ.

Speak carefully - Election Commission notice to Rahul Gandhi

ಮೋದಿಯವರನ್ನು ಪನೌತಿ ಅಥವಾ ಜೈಬ್ ಕಾ ಕತ್ರಾ ಎಂದು ಕೇವಲ ರಾಹುಲ್ ಗಾಂಧಿ ಮಾತ್ರವಲ್ಲದೇ ರಾಜಸ್ಥಾನ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೋರ್ವ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ, ಐಸಿಸಿ ವಿಶ್ವಕಪ್‌ನಲ್ಲಿ ಭಾರತದ‌ ಸೋಲಿಗೆ ಪ್ರಧಾನಮಂತ್ರಿಯವರನ್ನು ದೂಷಣೆ ಮಾಡಿ ಪ್ರಧಾನಿ ಎಂದರೆ ಪನೌತಿ ಎಂದಿದ್ದರು.‌ ಇವರ ಈ ಹೇಳಿಕೆಗೆ ಬಿಜೆಪಿ‌ ನೀಡಿದ ದೂರಿನ ಆಧಾರದ‌ ಮೇಲೆ ಚುನಾವಣಾ ಆಯೋಗವು ನೋಟಿಸ್ ನೀಡಿತ್ತು.‌

You might also like
Leave A Reply

Your email address will not be published.