ರಾಮನ ಕಣ್ಣುಗಳ ವರ್ಣನೆಯಲ್ಲೇ ಮೈಮರೆತ ನಟ ರಕ್ಷಿತ್ ಶೆಟ್ಟಿ

ರಾಮ‌‌ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ದಿನ ಅಯೋಧ್ಯೆಗೆ ಭೇಟಿ ನೀಡಿದ ಕೆಲವು ಮಂದಿ ಅಯೋಧ್ಯೆಯಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದರು. ಈಗ ಅಂದರೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮುಗಿದು ಒಂದೂವರೆ ತಿಂಗಳಾದ ಬಳಿಕ ಅಲ್ಲಿಗೆ ಭೇಟಿ ನೀಡಿದ ಕರ್ನಾಟಕದ ಸಿಂಪಲ್ ಸ್ಟಾರ್ ಎಂದು ಕರೆಸಿಕೊಳ್ಳುವ ರಕ್ಷಿತ್ ಶೆಟ್ಟಿ ಅಲ್ಲಿ ತಮಗಾದ ಅನುಭವವನ್ನು ತಮ್ಮ ಎಕ್ಸ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಾಣ ಪ್ರತಿಷ್ಠೆಯಾದ ದಿನದಿಂದಲೂ ಪ್ರಭು ರಾಮನನ್ನು ನೋಡಲು ನಾನು ಹಾತೊರೆಯುತ್ತಿದ್ದೆ, ಹಾಗೂ ಅವನ ಕಣ್ಣುಗಳು ನನ್ನನ್ನು ಸೆಳೆದಿದ್ದವು. ಆ ಕಣ್ಣುಗಳನ್ನು ಪದೇ ಪದೇ ನೋಡಲು‌ ನಾನು ಅದೆಷ್ಟು ಬಾರಿ ರಾಮಲಲ್ಲಾನ ಚಿತ್ರಗಳನ್ನು ಜೂಮ್ ನೋಡಿದ್ದೇನೋ ತಿಳಿಯದು‌. ರಾಮನ ಕಣ್ಣುಗಳ ಭಾಗವು ಇಲ್ಯೂಷನ್ ತರ ಕಾಣಿಸುತ್ತಿದ್ದು ಕಣ್ಣಿನ ಬಿಳಿ ಬಣ್ಣದ ಭಾಗ ಪಡೆಯಲು ಶಿಲ್ಪಿಯು ಅಡ್ಡ ಅಡ್ಡವಾಗಿ ಕೆತ್ತಿರಬಹುದು ಎಂದು ಹಲವು ಬಾರಿ ಚಿತ್ರ ನೋಡಿದ ಬಳಿಕ‌ ನಾನು ತೀರ್ಮಾನಿಸಿದೆ.

ಇವತ್ತು ನಾನು ಅವನನ್ನು ತೀರಾ ಹತ್ತಿರದಿಂದ ನೋಡಿದೆ ಮಾತ್ರವಲ್ಲ ಅವನ ಮುಂದೆ ಅರ್ಧ ಗಂಟೆ ಕುಳಿತು ಆರಾಧಿಸಿದೆ.‌ ನನ್ನ ಜೀವನದಲ್ಲಿ ಇಲ್ಲಿಯ ತನಕ ಯಾವ ವಿಗ್ರಹದ ಮುಂದೆ‌ ಕುಳಿತೂ ನಾನು ಹೀಗೆ ಮಾಡಿಲ್ಲ. ಸಾಮಾನ್ಯವಾಗಿ ನನಗೆ ಎಲ್ಲಾ ವಿಗ್ರಹಗಳೂ ಒಪ್ಪಿಗೆಯಾಗುತ್ತವೆ ಆದರೆ ಈ ವಿಗ್ರಹ ವಿಭಿನ್ನವಾಗಿದೆ. ಬಹುಶಃ ರಾಮ‌ ನಮ್ಮೆಲ್ಲರಿಗೂ ಕೊಟ್ಟ ಅನುಭವವೇ ಅದು. ಈ ಮೂರ್ತಿ ಬರೀ ದೇವರಾಗಿರದೆ ಜೀವ ಪಡೆದ ಒಂದು ಅಧ್ಬುತ ಕಲಾ ಪ್ರಕಾರವಾಗಿದೆ.‌ ಅರುಣ್ ಯೋಗಿರಾಜ್ ಅವರನ್ನು ತಲೆಮಾರು ಮತ್ತೆ ಮತ್ತೆ ನನಪಿಸಿಕೊಳ್ಳಲಿದೆ. ಈ ದೈವಿಕ ಕೆಲಸವನ್ನು ನೋಡಿದ ಬಳಿಕ, ಒಂದು ದಿನ ಅವರನ್ನು ಭೇಟಿಯಾಗಿ ಈ ಕೆತ್ತನೆಯ ಹಿಂದಿನ ಅನುಭವಗಳ ಕುರಿತು ಅವರ ಬಳಿ ಮಾತನಾಡಲು ಇಷ್ಟಪಡುತ್ತೇನೆ, ಜೈ ಶ್ರೀರಾಮ್.

Actor Rakshit Shetty is mesmerized by the portrayal of Rama's eyes

ಕೆಲವು ವರ್ಷಗಳ ಹಿಂದೆ ಲಾಕ್‌‌ಡೌನ್ ಸಮಯದಲ್ಲಿ ನಾನು ಯಾವಾಗ ನನ್ನ 504 ಚಂದ್ರನ ಪರಿಕ್ರಮಗಳನ್ನು ಪೂರ್ಣಗೊಳಿಸುತ್ತೇನೆ ಎಂದು ಲೆಕ್ಕ ಹಾಕಿ ಯಾವಾಗ ಬರಬಹುದೆಂಬ ದಿನಾಂಕ ಗಮನಿಸಿ ಈ ವಿಷಯವನ್ನು ಅಲ್ಲಿಗೆ ಸಂಪೂರ್ಣ ಮರೆತೇಬಿಟ್ಟಿದ್ದೆ. ಕಾಕತಾಳೀಯವೆಂಬಂತೆ ಈ ಕೃಷ್ಣಪಕ್ಷ ದಶಮಿಯಂದೇ ಬಂದಿದ್ದು ನಾನು ಆದಿನ ಪ್ರಯಾಗ ರಾಜದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ, ಕಾಶಿಗೆ ಭೇಟಿನೀಡುವಲ್ಲಿ ಸಂಪನ್ನವಾಗಿದೆ. ಮರುದಿನ ರಾಮ ಜನ್ಮಭೂಮಿ ಅಯೋಧ್ಯೆಗೆ ಭೇಟಿನೀಡಿ ಪ್ರಭು ಶ್ರೀ ರಾಮನ ಪರಿವಾರ ಸಮೇತ ಉತ್ಸವ ಮೂರ್ತಿಯ ಎದುರು ನನ್ನ ಮುಂಬರುವ ಎಲ್ಲಾ ಪ್ರಾಜೆಕ್ಟ್‌ಗಳ ಕುರಿತು ಸಂಕಲ್ಪ ಮಾಡಿದೆ, ಹಾಗೂ ಹನುಮಾನ್ ಗಢಿ ಮಂದಿರಕ್ಕೂ ಭೇಟಿ ನೀಡಿದೆ ಇವೆಲ್ಲವೂ ಒಂದು ಅಧ್ಬುತ ಅನುಭವಗಳಾಗಿವೆ. ಇದನ್ನು ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ, ನನ್ನನ್ನು ಚೆನ್ನಾಗಿ ನಡೆಸಿಕೊಂಡ ಟ್ರಸ್ಟಿಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಎಲ್ಲಾ ಅನುಭವಕ್ಕೆ ಪೇಜಾವರ ಶ್ರೀಗಳಾದ ಶ್ರೀವಿಶ್ವಪ್ರಸನ್ನ ತೀರ್ಥರಿಗೆ ಧನ್ಯವಾದ ತಿಳಿಸಿರುವ ನಟ ತಮಗೆ ಜೊತೆಯಾದ ಸ್ನೇಹಿತ ವರ್ಗದವರಿಗೂ ಧನ್ಯವಾದ ತಿಳಿಸಿದ್ದಾರೆ.‌

ಇತ್ತೀಚೆಗೆ ಬಿಡುಗಡೆಯಾದ ಅವರ ಸಪ್ತಸಾಗರದಾಚೆ ಎಲ್ಲೋ ಭಾಗ ಒಂದು ಮತ್ತು ಎರಡು ಚಲನಚಿತ್ರಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಸದ್ಯಕ್ಕೆ ರಿಚರ್ಡ್ ಆ್ಯಂಟನಿ ಮತ್ತು ಪುಣ್ಯಕೋಟಿ‌ ಸಿನೆಮಾಗಳ ಮೇಲೆ ನಟ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಅವರ ಯೋಜನೆಗಳು ಯಶಸ್ವಿಯಾಗಲಿ ಎಂದು ಹಾರೈಸೋಣ‌.‌

You might also like
Leave A Reply

Your email address will not be published.