ಇಂಡೋ-ಮಯನ್ಮಾರ್ ಫ್ರೀ ಮೂವ್‌ಮೆಂಟ್ ರೆಜಿಮ್‌ಗೆ ಗುಡ್ ಬೈ ಹೇಳಲಿರುವ ಭಾರತ

ಭಾರತದ ರಾಷ್ಟ್ರೀಯ ಗಡಿಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಭಾರತವು ಮಯನ್ಮಾರ್ ಜೊತೆಗಿದ್ದ ಮುಕ್ತ ಸಂಚಾರಕ್ಕೆ ಗುಡ್ ಬೈ ಹೇಳಿ ಗಡಿಯಲ್ಲಿ ಬೇಲಿ ನಿರ್ಮಿಸಲು ನಿರ್ಧರಿಸಿದೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದ ಅಮಿತ್ ಶಾ ಅವರು, ಪೂರ್ತಿ 1643 ಕಿಲೋಮೀಟರ್ ಉದ್ದದ ಭಾರತ ಮತ್ತು ಮಯನ್ಮಾರ್ ಗಡಿಯಲ್ಲಿ ಉತ್ತಮ ಕಣ್ಗಾವಲು ಹಾಗೂ ಗಸ್ತು ತಿರುಗಲು ಅನುಕೂಲವಾಗುವಂತೆ, ಗಡಿಯಲ್ಲಿ ಆರಮವಾಗಿ ನುಸುಳಲು ಸಾಧ್ಯವಾಗದಂತ ಗಡಿಯನ್ನು ನಿರ್ಮಿಸಲು ಭಾರತವು ಬದ್ಧವಾಗಿದೆ. ಒಟ್ಟು ಗಡಿ ಉದ್ದದ ಪೈಕಿ ಮಣಿಪುರದ ಮೊಹೆರ್‌ನಲ್ಲಿ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ಹಾಕಲಾಗಿದ್ದು, ಇಷ್ಟೇ ಅಲ್ಲದೆ ಹೈಬ್ರೀಡ್ ಸರ್ವೈಲೆನ್ಸ್ ಸಿಸ್ಟಮ್ (HSS) ನ ಕಣ್ಗಾವಲು ವ್ಯವಸ್ಥೆಗಳನ್ನು ಮಣಿಪುರ ಮತ್ರು ಅರುಣಾಚಲದಲ್ಲಿ ತಲಾ ಒಂದೊಂದು ಕಿಲೋಮೀಟರ್ ‌ನಂತೆ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಹೆಚ್ಚುವರಿಯಾಗಿ ಮಣಿಪುರದಲ್ಲಿ ಸುಮಾರು 20 ಕಿಲೊಮೀಟರ್ ವ್ಯಾಪ್ತಿಯ ಕಾಮಗಾರಿಗೆ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ ಎಂದಿದ್ದಾರೆ.

India to say goodbye to Indo-Myanmar Free Movement Regime

ಭಾರತ ಮತ್ತು ಮಯನ್ಮಾರ್ ನಡುವೆ ಇರುವ FMR Policy (Free Movement Regime) ಯ ಕಾರಣದಿಂದಲೇ ಮಯನ್ಮಾರ್‌ನಿಂದ ಭಾರತಕ್ಕೆ ಸಾಕಷ್ಟು ಜನರು ಅಕ್ರಮವಾಗಿ ವಲಸೆ ಬರುತ್ತಿದ್ದು, ಮಾದಕದ್ರವ್ಯ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಅನುಕೂಲವಾಗುತ್ತದೆ ಇದು ರಾಜ್ಯದಲ್ಲಿ ಶಾಂತಿ ಕದಡುವಲ್ಲಿ ಪ್ರಮುಖ ಪಾತ್ರವಿದೆ ಎಂದು ಸ್ಥಳೀಯರು ದೂರಿರುವ ಕಾರಣ ವಿವಾದವನ್ನು ತಿಳಿಗೊಳಿಸಲು FMR ಯೋಜನೆಯನ್ನು ಕೊನೆಗೊಳಿಸುವಲ್ಲಿ ಕೇಂದ್ರ ಸರ್ಕಾರವು ಗಂಭೀರವಾಗಿ ಚಿಂತನೆ ನಡೆಸಿದೆ.

ಇನ್ನೂ FMR ಯೋಜನೆಯು ಭಾರತದ Act East ಪಾಲಿಸಿಯ ಒಂದು ಅಂಶವಾಗಿದ್ದು, ಇದರ ಪ್ರಕಾರ ಭಾರತ ಮತ್ತು ಮಯನ್ಮಾರ್‌ನ ಪರಸ್ಪರ ಪ್ರಜೆಗಳು ಗಡಿ ಪಾಸ್‌ನೊಂದಿಗೆ ಉಭಯ ದೇಶಗಳ 16 ಕಿಲೋಮೀಟರ್ ತನಕ ಆರಾಮವಾಗಿ ಪ್ರಯಾಣಿಸಬಹುದಾಗಿದ್ದು ಒಂದು ವರ್ಷ ಅವಧಿಯ ತನಕ ಅಲ್ಲಿ ಉಳಿಯಬಹುದಾಗಿದೆ‌. ಹಾಗಾಗಿ ಶೀಘ್ರದಲ್ಲೇ FMR. Policy ಯನ್ನು ಕೊನೆಗೊಳಿಸಿ ಬೇಲಿ ನಿರ್ಮಿಸಿದ ಬಳಿಕ ಅಲ್ಲಿಂದ ಭಾರತಕ್ಕೆ ಬರುವ ಜನರು ವೀಸಾ ಪಡೆದೇ ಬರಬೇಕು ಎಂಬುದು ಗೃಹ ಸಚಿವಾಲಯದಿಂದ ಬಂದ ಮಾಹಿತಿಯಾಗಿದೆ.

You might also like
Leave A Reply

Your email address will not be published.