ತೆಪ್ಪಗಾಗಿದ್ದ ನಕ್ಸಲರು ಮತ್ತೆ ತಲೆ ಎತ್ತಿದರಾ? – ಪಶ್ಚಿಮ ಘಟ್ಟದ ತಪ್ಪಲಲ್ಲಿ ಕೆಂಪು ಉಗ್ರರ ನೆರಳು

ಕಳೆದ ಕೆಲ ವರ್ಷಗಳಿಂದ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಇದೀಗ ಮತ್ತೆ ಎಚ್ಚೆತ್ತುಕೊಂಡಿದೆ. ಹಾಗಾದರೆ ದಶಕದ ಬಳಿಕ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಕ್ಸಲ್ ಚಟುವಟಿಕೆ ಸಕ್ರಿಯವಾಗಿದೆಯಾ? ನಕ್ಸಲ್ ನಿಗ್ರಹ ಪಡೆ (ANF) ಕೂಡ ಚುರುಕುಗೊಂಡಿದ್ದು, ತೀವ್ರ ಕಟ್ಟೆಚ್ಚರ ವಹಿಸುವಂತೆ ಸರ್ಕಾರ ಸೂಚನೆ ನೀಡಿದ್ದು, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಏನದು ಪ್ರಕರಣ?

ಗ್ರಾಮಸ್ಥರಿಂದ ಸಿಕ್ಕ ಮಾಹಿತಿ: ಹೇಗಿದ್ದರು ಈ ನಕ್ಸಲರು?

ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮಗಳಿಗೆ ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ. ನಾಲ್ವರು ನಕ್ಸಲರು ಹಲವು ಮನೆಗಳಿಗೆ ಭೇಟಿ ನೀಡಿದ್ದು, ಈ ನಕ್ಸಲರು ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದು, ಇಬ್ಬರಲ್ಲಿ ಶಸ್ತ್ರಾಸ್ತ್ರ ಇರುವ ಬಗ್ಗೆ ಗ್ರಾಮಸ್ಥರು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಯಾರು ಈ ವಿಕ್ರಮ ಗೌಡ?

ಉಡುಪಿಯ ಹೆಬ್ರಿ ಮೂಲದ ವಿಕ್ರಮ್ ಗೌಡ ನೇತೃತ್ವದ ನಕ್ಸಲರ ತಂಡ ಬೈಂದೂರು ತಾಲೂಕಿನ ನಾಲ್ಕು ಗ್ರಾಮಗಳ ಸುತ್ತಮುತ್ತ ಓಡಾಡಿರುವ ಕುರಿತು ಶಂಕೆ ವ್ಯಕ್ತವಾಗಿದೆ. ವಿಕ್ರಮ್ ಗೌಡ ಸುಮಾರು 20 ವರ್ಷಗಳ ಹಿಂದೆ ನಕ್ಸಲೈಟ್ ಆಗಿದ್ದನು. ಕೇರಳದಲ್ಲಿ ಈತ ತನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದನು. ಬಿ.ಜಿ ಕೃಷ್ಣಮೂರ್ತಿ ಬಳಿಕ ಕರ್ನಾಟಕದ ನಕ್ಸಲ್ ನಾಯಕತ್ವವನ್ನು ವಿಕ್ರಂ ಗೌಡ ವಹಿಸಿಕೊಂಡಿದ್ದಾನೆ.

Naxal Vikrama Gowda

ಈತನ ತಂಡದ ಮೂವರು ಸಶಸ್ತ್ರಧಾರಿಯಾಗಿ ಬೈಂದೂರಿನ ಗ್ರಾಮದ ಮನೆಗಳಿಗೂ ತೆರಳಿ ಹೋಗಿರುವುದಾಗಿ ಮಾಹಿತಿ ಸಿಕ್ಕಿದೆ. ನಕ್ಸಲರ ಓಡಾಟ ಮಾಹಿತಿ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದು, ವರ್ಷಗಳ ನಂತರ ಮತ್ತೆ ಬೈಂದೂರಿನಲ್ಲಿ ಕೂಂಬಿಂಗ್ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಕ್ಸಲ್ ಹುತಾತ್ಮ ದಿನ ಆಚರಿಸಲು ತಯಾರಿ

2005ರ ಫೆಬ್ರವರಿ 5 ರಂದು ಕಳಸ ತಾಲೂಕಿನ ಮೆಣಸಿನ ಹಾಡ್ಯದಲ್ಲಿ ರಾತ್ರಿ ಪೊಲೀಸರ ಎನ್ಕೌಂಟರ್’ನಲ್ಲಿ ಸಾಕೇತ್ ಎಂಬ ನಕ್ಸಲ್ ಸಾವಿಗೀಡಾಗಿದ್ದನು. ಸಾಕೇತ್ ರಾಜನ್ ಸಾವಿಗೆ ರೆಡ್ ಸಲ್ಯೂಟ್ ದಿನ ಆಚರಿಸಲು ನಕ್ಸಲರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಸಾಕೇತ್ ನೆನಪಿಗಾಗಿ ನಕ್ಸಲರು ಪ್ರತಿ ವರ್ಷ ನಕ್ಸಲ್ ಹುತಾತ್ಮ ದಿನಾಚರಣೆ ಆಚರಿಸುತ್ತ ಬಂದಿದ್ದಾರೆ.

Did the naxals who wanted to raft rise again? - The shadow of red militants in the foothills of the Western Ghats

ನಕ್ಸಲರ ದಾಳಿ

1. ನವೆಂಬರ್ 17, 2003: ಉಡುಪಿ ಜಿಲ್ಲೆಯಲ್ಲಿ ನಕ್ಸಲೀಯರಾದ ಹಾಜಿಮಾ ಮತ್ತು ಪಾರ್ವತಿ ಪೊಲೀಸರ ಗುಂಡಿಗೆ ಬಲಿಯಾದರು.
2. ಫೆಬ್ರವರಿ 6, 2005: ಚಿಕ್ಕಮಗಳೂರಿನಲ್ಲಿ ರಾಜ್ಯ ನಕ್ಸಲ್ ನಿಗ್ರಹ ದಳದಿಂದ ನಕ್ಸಲ್ ನಾಯಕ ಸಾಕೇತ್ ರಾಜನ್ ಹತ್ಯೆ ಮಾಡಲಾಯಿತು.
3. ಮೇ 17, 2005: ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕೆ ಆದಿವಾಸಿ ನಾಯಕ ಶೇಷಯ್ಯನನ್ನು ನಕ್ಸಲರು ಕೊಂದರು.
4. ಫೆಬ್ರವರಿ 10, 2005: ತುಮಕೂರಿನ ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲರು 6 ಪೊಲೀಸರು ಮತ್ತು ಒಬ್ಬ ನಾಗರಿಕನನ್ನು ಕೊಂದರು. ಈ ದಾಳಿಯೇ ನಕ್ಸಲ್ ವಿರೋಧಿ ಪಡೆ ರಚನೆಗೆ ಕಾರಣವಾಗುತ್ತದೆ.
5. ನವೆಂಬರ್ 19, 2008: ಹೊರನಾಡು ಬಳಿ ಎನ್ಕೌಂಟರ್ನಲ್ಲಿ ಮೂವರು ನಕ್ಸಲರು ಮೃತಪಟ್ಟರು. ಈ ಕಾರ್ಯಾಚರಣೆಯಲ್ಲಿ ಓರ್ವ ಎಎನ್’ಎಫ್ ಅಧಿಕಾರಿ ಕಮಾಂಡೊ ಹುತಾತ್ಮರಾದರು.

You might also like
Leave A Reply

Your email address will not be published.