ಗೂಳಿಹಟ್ಟಿ ಆರೋಪಕ್ಕೆ ಆರ್’ಎಸ್’ಎಸ್ ತಿರುಗೇಟು ಕೊಟ್ಟದ್ದೇಗೆ? – ಇಲ್ಲಿದೆ ಆರ್’ಎಸ್’ಎಸ್ ಬರೆದ ಪತ್ರ

 

ದಲಿತನೆಂಬ ಕಾರಣಕ್ಕೆ ತನಗೆ ಆರ್ʼಎಸ್ʼಎಸ್ ಕಛೇರಿಯ ಪ್ರವೇಶಕ್ಕೆ ಅನುಮತಿ ನೀಡಿಲ್ಲ ಎಂದು ಬಿಜೆಪಿಯ ಮಾಜಿ ಸಚಿವ, ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದು, ಇವರ ಹೇಳಿಕೆಗೆ ಆರ್ʼಎಸ್ʼಎಸ್ ಕಛೇರಿ ಸ್ಪಷ್ಟನೆ ನೀಡಿದ್ದು, ಇದರಲ್ಲಿ ಹುರುಳಿಲ್ಲ ಎಂದು ಹೇಳಿದೆ.

 

ಚಿತ್ರದುರ್ಗದ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿರುವ ಗೂಳಿಹಟ್ಟಿ ಶೇಖರ್ ಅವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀ ಸಂಘಟನಾ ಕಾರ್ಯದರ್ಶಿಗಳಾಗಿರುವ ಬಿ.ಎಲ್.ಸಂತೋಷ್ ಅವರಿಗೆ ಕಳುಹಿಸಿದ್ದಾರೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಠಿಸಿದೆ.

 

ವೈರಲ್ ಆಡಿಯೋದಲ್ಲಿ ಗೂಳಿಹಟ್ಟಿ ಶೇಖರ್ ಹೇಳಿದ್ದೇನು?

ಪರಿಶಿಷ್ಟ ಜಾತಿ ಎಂಬ ಕಾರಣಕ್ಕೆ ತಮಗೆ ನಾಗಪುರದ ಹೆಗಡೇವಾರ್ ಸ್ಮಾರಕ ದರ್ಶನಕ್ಕೆ ಇನ್ನಿಬ್ಬರು ಗೆಳೆಯರ ಜೊತೆ ಹೋಗಿದ್ದೆ. ಪ್ರವೇಶ ದ್ವಾರದಲ್ಲಿ ನಮ್ಮ ಹೆಸರನ್ನು ಬರೆಯಿಸಿಕೊಳ್ಳಲಾಯಿತು. ಈ ವೇಳೆ, ನನಗೆ ಹೆಗಡೇವಾರ್ ಸ್ಮಾರಕ ಕಟ್ಟಡದ ಪ್ರವೇಶಕ್ಕೆ ನಿರಾಕರಣೆ ಮಾಡಿ, ನನ್ನ ಜೊತೆ ಬಂದಿದ್ದ ಇನ್ನಿಬ್ಬರು ಸ್ನೇಹಿತರಿಗೆ ಅವಕಾಶ ನೀಡಲಾಯಿತು ಎಂದು ಆರೋಪಿಸಿದ್ದಾರೆ.

 

ಆರ್‌ʼಎಸ್‌ʼಎಸ್‌ ಸ್ಪಷ್ಟನೆ :

ಗೂಳಿಹಟ್ಟಿ ಶೇಖರ್‌ ಅವರ ಈ ಬಗ್ಗೆ ಆರ್‌ಎಸ್‌ಎಸ್‌ ಸ್ವಯಂ ಸೇವಕ ಸಂಘದ ದಕ್ಷಿಣ-ಮಧ್ಯ ಕ್ಷೇತ್ರೀಯ ಕಾರ್ಯವಾಹರಾದ ನಾ. ತಿಪ್ಪೆಸ್ವಾಮಿಯವರು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟಣೆ ನೀಡಿದ್ದಾರೆ.ಜಾತಿ ಕಾರಣಕ್ಕೆ ತಮಗೆ ಪ್ರವೇಶ ನಿರಾಕರಿಸಲಾಯಿತು ಎಂಬ ಗೂಳಿಹಟ್ಟಿ ಶೇಖರ್‌ ಅವರ ಆರೋಪವು ನಿರಾಧಾರ ಹಾಗೂ ಇದರಲ್ಲಿ ಯಾವುದೇ ಹುರುಳಿಲ್ಲ. ಆರ್‌ʼಎಸ್‌ʼಎಸ್‌ʼನ ಯಾವುದೇ ಕಛೇರಿ ಅಥವಾ ಸ್ಮಾರಕ ಕಟ್ಟಡಗಳಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಯಾರಿಗೂ ಪ್ರವೇಶ ನಿರಾಕರಣೆಯ ಪ್ರಶ್ನೆಯೇ ಇಲ್ಲ. ಕಳೆದ 10 ತಿಂಗಳ ಹಿಂದೆ ನಡೆದ ಈ ಘಟನೆ ಬಗ್ಗೆ ಗೂಳಿಹಟ್ಟಿ ಶೇಖರ್‌ ಅವರು ಸಂಘದ ಪ್ರಮುಖರನ್ನು ಭೇಟಿಯಾದರೂ ಈ ಬಗ್ಗೆ ತಿಳಿಸಿರಲಿಲ್ಲ. ಆದರೆ, ಇದೀಗ ಏಕಾಏಕಿ ಹೇಳಿಕೆ ನೀಡಿರುವುದು ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ. ಗೂಳಿಹಟ್ಟಿ ಶೇಖರ್‌ ಬಿಜೆಪಿ ಪಕ್ಷದಿಂದ ಸಚಿವರಾಗಿ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರಿಗೆ ಪಕ್ಷವು ಟಿಕೆಟ್‌ ನೀಡಿರಲಿಲ್ಲ. ಈ ಸಂದರ್ಭದಲ್ಲಿ, ಬಿಜೆಪಿಯ ವಿರುದ್ಧ ಕೆಂಡಾಮಂಡಲರಾಗಿದ್ದ ಇವರು ಜನಾರ್ಧನ್‌ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಾಗೂ ಕಾಂಗ್ರೆಸ್‌ ಪಕ್ಷದ ಬಾಗಿಲು ತಟ್ಟಿ ನಿರಾಶೆ ಅನುಭವಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಆರ್ʼಎಸ್ʼಎಸ್ ಕಛೇರಿ ಸ್ಪಷ್ಟನೆ
ಆರ್ʼಎಸ್ʼಎಸ್ ಕಛೇರಿ ಸ್ಪಷ್ಟನೆ
You might also like
Leave A Reply

Your email address will not be published.