29ನೇ ಬಾರಿಗೆ ಮೌಂಟ್ ಎವರೆಸ್ಟ್ ಏರಲು ಸಜ್ಜಾದ ನೇಪಾಳದ ಕಾಮಿರಿಟಾ ಶೆರ್ಪಾ!

ನೇಪಾಳದಲ್ಲಿ ಸಾಗರಮಾತ ಎಂದೇ ಕರೆಯಲ್ಪಡುವ ಮೌಂಟ್ ಎವರೆಸ್ಟ್ ಏರಬೇಕು ಎನ್ನುವುದು ಪ್ರತಿಯೋರ್ವ ಪರ್ವತಾರೋಹಿಯ ಕನಸು. ಆದರೆ ಈ‌ ಕನಸಿನ‌ ಬೆನ್ನು ಹತ್ತಿ‌ ನನಸು ಮಾಡಿಕೊಂಡವರು ಮಾತ್ರ ನೂರರಲ್ಲಿ 10 ಜನ ಮಾತ್ರವೇ.. ಆದರೆ ನೇಪಾಳದ ಕಮಿ ರೀಟಾ ಶೆರ್ಪಾ ಮಾತ್ರ 28 ಬಾರಿ ಮೌಂಟ್ ಎವರೆಸ್ಟ್ ಏರುವ ಮೂಲಕ ದಾಖಲೆ ಬರೆದದ್ದಲ್ಲದೇ ಈಗ 29ನೇ ಬಾರಿಗೆ ಏರುವ ಮೂಲಕ ವಿಶ್ವ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಕಳೆದ ವರ್ಷ 28ನೇ ಬಾರಿಗೆ ವಿಶ್ವದ ಅತೀ ಎತ್ತರದ ಶಿಖರವನ್ನು ಏರಿದ್ದ 54 ವರ್ಷದ ಶೆರ್ಪಾ ಈ ವರ್ಷ 29ನೇ ಆರೋಹಣಕ್ಕೆ ಸಜ್ಜಾಗಿದ್ದು ಈಗಾಗಲೇ ಬೇಸ್ ಕ್ಯಾಂಪ್ ತಲುಪಿದ್ದಾರೆ.

ಈ ಕುರಿತು ಮಾತನಾಡಿದ ಕಾಮಿರಿಟಾ ಶೆರ್ಪಾ, ಈ ವರ್ಷ ನಾನು 29ನೇ ಬಾರಿಗೆ ಸಾಗರ ಮಾತಾ ಏರಲು ಹೊರಟಿದ್ದೇನೆ, ನಾನು ಎಷ್ಟು ಬಾರಿ ಸಾಗರ ಮಾತ ಏರುತ್ತೇನೆ ಎಂಬುದರ ಬಗೆಗೆ ನನಗೆ ನಿರ್ಧಿಷ್ಟವಾದ ಯೋಜನೆಯಿಲ್ಲ, ಈ ಬಾರಿ ನಾನು ಎಷ್ಟುದೂರ ಹೋಗಬಹುದು ಎಂಬುದರ ಬಗ್ಗೆಯೂ ಗೊತ್ತಿಲ್ಲ ನೋಡೋಣ’ ಎಂದು ಹೇಳಿದ್ದಾರೆ. ಸ್ಪ್ರಿಂಗ್ ಸೀಸನ್ ಎವರೆಸ್ಟ್ ದಂಡಯಾತ್ರೆಯ ಭಾಗವಾಗಿ 28 ಪರ್ವತಾರೋಹಿಗಳನ್ನು ಒಳಗೊಂಡ ತಂಡದೊಂದಿಗೆ ಒಂದು ವಾರದ ಹಿಂದೆ ಕಠ್ಮಂಡುವಿನಿಂದ ಪ್ರಯಾಣ ಆರಂಭಿಸಿ ಲುಕ್ಲಾ ಮತ್ತು ನಾಮ್ಚೆ ಮೂಲಕ ಬೇಸ್ ಕ್ಯಾಂಪ್ ತಲುಪಿದ್ದಾರೆ.

ಈ ದಂಡಯಾತ್ರೆಯನ್ನು ಸೆವೆನ್ ಸಮ್ಮಿಟ್ ಟ್ರೆಕ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದೆ. ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಅಧ್ಯಕ್ಷೆ ಮಿಂಗ್ಮಾ ಶೆರ್ಪಾ ಅವರು ತಮ್ಮ ಕಂಪನಿಯ ಮೂಲಕ ಸಾಗರ‌ಮಾತದ 29 ನೇ ಆರೋಹಣಕ್ಕಾಗಿ ಕಾಮಿರಿಟಾ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಮಿಂಗ್ಮಾ ಪ್ರಕಾರ, ಹೆಚ್ಚಿನ ಆರೋಹಿಗಳು ಬೇಸ್ ಕ್ಯಾಂಪ್ ತಲುಪಿದ್ದಾರೆ ಮತ್ತು ಆರೋಹಣಕ್ಕೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ.

Nepal's Kamirita Sherpa ready to climb Mount Everest for the 29th time!

ಈ ಬಾರಿ ಬರೋಬ್ಬರಿ 80 ಮಂದಿ ಪರ್ವತಾರೋಹಿಗಳು ಸೆವೆನ್ ಸಮ್ಮಿಟ್ ಟ್ರೆಕ್ಸ್ ಕಂಪನಿಯ ಮೂಲಕ ಮೌಂಟ್ ಎವರೆಸ್ಟ್ ಅನ್ನು ಏರಲು ಹೊರಟಿದ್ದಾರೆ. ಕಮಿ ರೀಟಾ ಪರ್ವತಾರೋಹಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದು, ಈ ಬಾರಿ ಸಾಗರ ಮಾತ ಏರುವಲ್ಲಿ ಯಶಸ್ವಿಯಾದರೆ ತಮ್ಮದೇ ಹಿಂದಿನ ದಾಖಲೆಯನ್ನು ಹಿಂದಿಕ್ಕಿ ಹೊಸ ದಾಖಲೆ ಬರೆಯಲಿದ್ದಾರೆ.

ಕಾಮಿ ರೀಟಾ ಅವರು ಸಾಗರಮಾತಾ ಆರೋಹಣದ 71 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ವಿಶ್ವದ ಅತಿ ಎತ್ತರದ ಶಿಖರವನ್ನು ಅತಿ ಹೆಚ್ಚು ಆರೋಹಣ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಸೋಲುಖುಂಬು ಮೂಲದ ಪಸಂಗ್ ದಾವಾ ಶೆರ್ಪಾ ಅವರು ಕಳೆದ ವರ್ಷ 27 ನೇ ಬಾರಿಗೆ ಸಾಗರಮಾತಾವನ್ನು ಏರಿದರು, ಆದರೆ ಅವರು ಈ ಬಾರಿ ಆರೋಹಣಕ್ಕೆ ಪ್ರಯತ್ನಿಸುತ್ತಾರೆಯೇ ಎಂಬುದು ಖಚಿತವಾಗಿಲ್ಲ.

“ನಾನು ಸಾಗರಮಾತವನ್ನು ಏರಲು ಹೋಗುತ್ತಿದ್ದೇನೆ; ನನಗೆ ಬೇರೆ ಯಾವುದೇ ಉದ್ದೇಶವಿಲ್ಲ, ನಾನು ಪರ್ವತಾರೋಹಣ ವೃತ್ತಿಯನ್ನು ಸರಳವಾಗಿ ಮುಂದುವರಿಸಿದ್ದೇನೆ; ನಾನು ದಾಖಲೆಗಾಗಿ ಏರಿಲ್ಲ.” ಎಂದು ಕಾಮಿ ರೀಟಾ ಶೆರ್ಪಾ ಹೇಳಿದ್ದಾರೆ.

You might also like
Leave A Reply

Your email address will not be published.