ಗುಡ್‌ ನ್ಯೂಸ್‌ ಕೊಟ್ಟ KSRTC – ರಸ್ತೆಗಿಳಿಯಲಿವೆ 2,275 ವಿಶೇಷ ಬಸ್‌ʼಗಳು

ಯುಗಾದಿ, ರಂಜಾನ್ ಹಬ್ಬದ ಪ್ರಯುಕ್ತ ನಗರದಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ದತೆ ನಡೆಸಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಬೆಂಗಳೂರಿನಿಂದ ಸಾಲುಸಾಲು ಬಸ್ ಗಳನ್ನು ರಸ್ತೆಗಳಿಸುವುದಾಗಿ ಕೆ.ಎಸ್.ಆರ್.ಟಿ.ಸಿ (KSRTC) ನಿಗಮ ಗುಡ್ ನ್ಯೂಸ್ ಕೊಟ್ಟಿದೆ.

ಹೌದು! ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಕೆಂಪೇಗೌಡ ನಿಲ್ದಾಣ, ಸ್ಯಾಟ್ಲೈಟ್ ನಿಲ್ದಾಣ, ಶಾಂತಿನಗರದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ ಸೇರಿದಂತೆ ಹಲವು ಸ್ಥಳಗಳಿಗೆ ವಿಶೇಷ ಬಸ್ ಸೇವೆ ಮಾಡಲಾಗಿದೆ. ಅಲ್ಲದೇ ನೆರೆರಾಜ್ಯ ಹೈದರಾಬಾದ್, ಚೆನ್ನೈ, ಗೋವಾ ಪಣಜಿ, ಶಿರಡಿ, ಎರ್ನಾಕುಲಂಗೆ ವಿಶೇಷ ಬಸ್ ಸೇವೆ ಇರಲಿದೆ ಎಂದು ಕೆ.ಎಸ್.ಆರ್.ಟಿ.ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಲು ಸಾಲು ರಜೆ:

ಏ.7 ರಿಂದ 14ರ ವರೆಗೆ ಒಟ್ಟು 5 ರಜೆಗಳು ಸಿಗಲಿದ್ದು, ಸರ್ಕಾರಿ ಹಾಗೂ ಖಾಸಗಿ ನೌಕರರು ತಮ್ಮ ತಮ್ಮ ಊರುಗಳಿಗೆ ಪ್ರವಾಸ ಕೈಗೊಳ್ಳಲು ಇವಾಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ವಿದ್ಯಾರ್ಥಿಗಳಿಗೆ ರಜೆ ಶುರುವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ ತೆರಳಲು ತಯಾರಿ ನಡೆಸಿರುವ ಪೋಷಕರಿಗೆ ಇದು ಅನುಕೂಲವಾಗಲಿದೆ.

ಏ.7 ಭಾನುವಾರ, ಏ.9 ಮಂಗಳವಾರ ಯುಗಾದಿ ಹಬ್ಬ, ಏ.11 ಗುರುವಾರ ರಂಜಾನ್ ಇದೆ. ಏ.13 ಎರಡನೇ ಶನಿವಾರ ರಜೆ ಹಾಗೂ ಏ.14 ರಂದು ಭಾನುವಾರದ ರಜೆ ಇದೆ. ಮಧ್ಯೆ ಮಧ್ಯೆ ಕಚೇರಿಗಳಲ್ಲಿ ಕೆಲಸ ಇರುವುದರಿಂದ ಕೆಲವರು ಒಂದು ವಾರದ ಮಟ್ಟಿಗೆ ರಜೆ ಹಾಕಿ ಊರಿಗೆ ತೆರಳಲು ತಯಾರಿ ನಡೆಸಿದ್ದಾರೆ.

KSRTC gave good news - 2,275 special buses will be plying

ಯಾವ ಯಾವ ನಿಗಮಗಳಲ್ಲಿ ಎಷ್ಟು ಬಸ್ ಹೆಚ್ಚುವರಿಯಾಗಲಿದೆ?

ರಜೆ ಹಿನ್ನೆಲೆ ಊರಿಗೆ ಹಾಗೂ ಪ್ರವಾಸಕ್ಕೆ ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರಿನಿಂದ ಒಟ್ಟು 2,275 ವಿಶೇಷ ಬಸ್ಗಳನ್ನು ರಸ್ತೆಗಿಳಿಸಲು ನಾಲ್ಕು ನಿಗಮಗಳು ನಿರ್ಧರಿಸಿದೆ. ಅದರ ಪೈಕಿ,

1. ಕೆ.ಎಸ್.ಆರ್.ಟಿ.ಸಿಯಿಂದ 1,750ಬಸ್
2. ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿಯ 145 ಬಸ್
3. ಕೆ.ಕೆ.ಆರ್.ಟಿ.ಸಿಯ 200 ಬಸ್
4. ಬಿಎಂಟಿಸಿಯ 180 ವಿಶೇಷ ಬಸ್

You might also like
Leave A Reply

Your email address will not be published.