ಬೆಂಗಳೂರಲ್ಲಿ ನೀರಿನ ಹಾಹಾಕಾರ ಶುರು -‌ ಈ ಏರಿಯಾದಲ್ಲಿ ಒಬ್ಬರಿಗೆ ಒಂದೇ ಕ್ಯಾನ್‌ ಆರ್.ಒ ವಾಟರ್

ಬೋರ್ವೆಲ್ʼನಲ್ಲಿ ನೀರಿಲ್ಲ, ಕಾವೇರಿ ನೀರು ಸರಿಯಾಗಿ ಬರುತ್ತಿಲ್ಲ, ಟ್ಯಾಂಕರ್ ನೀರಿನ ಬೆಲೆ ದುಬಾರಿಯಾದ ಕಾರಣ ಈಗ ಬಹುತೇಕ ಮಂದಿ ಶುದ್ಧ ನೀರಿನ ಘಟಕದತ್ತ ಚಿತ್ತ ಹರಿಸಿದ್ದಾರೆ. ಇಲ್ಲೂ ನೀರಿನ ಅಭಾವದ ಜೊತೆ ಎಲ್ಲರಿಗೂ ನೀರು ಕೊಡಬೇಕಾಗಿರುವುದರಿಂದ ಹೊಸ ನಿಯಮ ಶುರುವಾಗಿದೆ. ಅಯ್ಯೋ ಕುಡಿಯೋ ನೀರಿಗೂ ಹೊಸ ನಿಯಮಾನಾ? ಏನಪ್ಪ ಅದು ಅಂತೀರಾ? ಅದ್ಕೆ ಈ ಸ್ಟೋರಿ ಓದಿ..

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಪ್ರಸಕ್ತ ವರ್ಷ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಒಬ್ಬರಿಗೆ ಒಂದೇ ಕ್ಯಾನ್ ನೀರು ಮಾತ್ರ ನೀಡಲಾಗುವುದು ಎಂಬ ಹೊಸ ರೂಲ್ಸ್ ಬಂದಿದೆ. ನಗರದ ಹಲವೆಡೆ ಅದರಲ್ಲೂ ರಾಜರಾಜೇಶ್ವರಿ ನಗರದ ಆರ್.ಒ ಪ್ಲಾಂಟ್ನಲ್ಲಿ ಈ ಬೋರ್ಡ್ ಕಾಣಸಿಗುತ್ತಿದೆ.

Water shortage started in Bangalore - Only one can of RO water per person in this area

ಬೋರ್ʼವೆಲ್ ಬತ್ತಿ ಶುದ್ಧ ನೀರಿನ ಘಟಕಗಳಲ್ಲಿ ನೀರಿಲ್ಲದೇ ಪರದಾಟ ಶುರುವಾಗಿರುವಾಗ, ಜನರು ಒಂದೇ ಬಾರಿಗೆ ಮೂರು-ನಾಲ್ಕು ಕ್ಯಾನ್ ಕುಡಿಯುವ ನೀರು ಒಯ್ಯುತ್ತಿದ್ದರು. ಹೀಗಾಗಿ ಒಬ್ಬರಿಗೆ ಒಂದೇ ಕ್ಯಾನ್ ನೀರು ಎಂಬ ನಿಯಮ ಆರ್.ಓ ಪ್ಲಾಂಟ್’ನಲ್ಲಿ ಜಾರಿಯಾಗಿದೆ. ಈಗಾಗಲೇ ಕೆಲವು ಕಡೆ ಬೆಳಗ್ಗೆ 8 ರಿಂದ ರಾತ್ರಿ 8 ವರೆಗೆ ನೀರು ಬಿಡಲಾಗುತ್ತಿತ್ತು. ಇದೀಗ ಬೆಳಗ್ಗೆ ಎರಡು ಗಂಟೆ ಸಂಜೆ ಎರಡು ಗಂಟೆ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವು ಕಡೆ ಆರ್.ಓ ಪ್ಲಾಂಟ್ ನೀರಿಲ್ಲದೆ ಬಂದ್ ಆಗಿವೆ.

ಮಹಾನಗರಿ ಬೆಂಗಳೂರಿನ ಜನತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳೇ ಸದ್ಯಕ್ಕೆ ಜೀವಾಳ. ಇಲ್ಲಿ ನೀರು ಸಿಕ್ಕರೆ ನೆಮ್ಮದಿ. ಇಲ್ಲೂ ನೀರು ಸಿಗದೇ ಇದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

You might also like
Leave A Reply

Your email address will not be published.