ಮೋದಿ ಕಾ ಪರಿವಾರ್ ಅಭಿಯಾನಕ್ಕೆ ಮುನ್ನುಡಿ ಬರೆದ ವಾರಣಾಸಿ ಜನತೆ – ಪೆಚ್ಚಾದ ಇಂಡಿ ಮೈತ್ರಿಕೂಟ

ಪ್ರಧಾನಮಂತ್ರಿ ನರೇಂದ್ರ‌ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಜನರು ತಮ್ಮ ಮನೆಗಳ ಮುಂದೆ ‘ಹಮ್‌ ಹೈ‌ ಮೋದಿ ಕಾ ಪರಿವಾರ್’ ಎಂಬ ಪೋಸ್ಟರ್ ಅಂಟಿಸುವ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಾರೆ. ವಾರಣಾಸಿ ಜನತೆಯ ಪ್ರಕಾರ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗಾಗಿ, ಅಭ್ಯುದಯಕ್ಕಾಗಿ ಹಗಲಿರುಳೆನ್ನದೆ ದೇಶದ ಜನತೆಯೇ ತನ್ನ ಕುಟುಂಬ ಎಂದು ಭಾವಿಸಿ ದುಡಿಯುತ್ತಲೇ‌ ಇದ್ದಾರೆ ಎನ್ನುತ್ತಾರೆ.‌

ಇನ್ನು ಮೋದಿಗೆ ಕುಟುಂಬವಿಲ್ಲ ಎಂದು ಹೇಳಿದ ಆರ್.ಜೆ.ಡಿ ಪಕ್ಷದ ಲಾಲು ಯಾದವ್ ಅವರೇ ಈಗ ಖುದ್ದು ಪೇಚಾಟಕ್ಕೆ ಸಿಲುಕಿದಂತಾಗಿದೆ. ಬಿಹಾರದಲ್ಲಿ ಸಾರ್ವಜನಿಕ ರ‌್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ, ಮೋದಿ ಮಾತು ಮಾತಿಗೂ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ? ಆದರೆ ಕುಟುಂಬ ರಾಜಕಾಣವೆಂದರೆ ಏನು? ಮೋದಿಗೆ ಮಕ್ಕಳಿಲ್ಲವೆಂದರೆ ನಾವೇನು ಮಾಡಲು ಸಾಧ್ಯ, ಅವರಿಗ್ಯಾಕೆ ಮಕ್ಕಳಿಲ್ಲ ಎಂದು ಅವರೇ ವಿವರಿಸಬೇಕು ಎಂದಿದ್ದರು.‌ ಒಂದು ಹೆಜ್ಜೆ ಮುಂದೆ ಹೋಗಿ ಮೋದಿ ಹಿಂದೂ ಅಲ್ಲ ಎಂದು ಕೂಡಾ ಹೇಳಿದ್ದರು ಲಾಲು ಯಾದವ್.

ಬಿಜೆಪಿ ತನ್ನೆಡೆಗೆ ಎಸೆದ ಕಲ್ಲುಗಳನ್ನೇ ಉಪಯೋಗಿಸಿ ಮನೆ ಕಟ್ಟಿಕೊಳ್ಳುವ ಚಾಕಚಕ್ಯತೆ ಹೊಂದಿರುವ ಪಕ್ಷ. ಇದಕ್ಕೆ ಇಂಡಿ‌ ಮೈತ್ರಿಕೂಟದಂತಹ ವಿರೋಧಿ‌ ಬಣಗಳೇ ಒಂದಿಲ್ಲೊಂದು ಅಸ್ತ್ರಗಳನ್ನು ಕೈಗೆ ಕೊಟ್ಟಂತಿದೆ. ಈಗ ದೇಶದಾದ್ಯಂತ ಕೇಂದ್ರೀಯ ಮಂತ್ರಿಗಳು ಸೇರಿದಂತೆ ಅನೇಕರು ತಮ್ಮ ಹೆಸರಿನ ಮುಂದೆ‌ ನಾವು‌ ಮೋದಿಯವರ ಕುಟುಂಬ ಎಂದು ಹೆಸರು ಜೋಡಿಸಿಕೊಳ್ಳುತ್ತಿದ್ದಾರೆ. ಇನ್ನು ಮೋದಿಯವರೂ ಕೂಡಾ ತನಗೆ ಕುಟುಂಬವಿಲ್ಲ ಎಂದ ಸ್ಟೇಟ್‌ಮೆಂಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಯಾವ ವ್ಯಕ್ತಿಗೆ ಯಾರೂ ಇಲ್ಲ ಎಂದು ಕೊಳ್ಳುತ್ತಾನೋ ಅವನ ಜೊತೆ ಮೋದಿ ಇದ್ದಾರೆ ಎಂದಿದ್ದಾರೆ.

2019 ರಲ್ಲಿ ರಫೆಲ್ ವಿಚಾರಕ್ಕೆ ಚಾಕಿದಾರ್ ಚೋರ್ ಹೈ ಎಂದು ರಾಹುಲ್ ಗಾಂಧಿ, ಮೋದಿಗೆ ಹೇಳಿದ್ದರ ಪರಿಣಾಮ ದೇಶದಾದ್ಯಂತ ‘ಮೈ ಭು ಚೌಕಿದಾರ್’ ಅಭಿಯಾನ‌ ಯಾವ ರೀತಿ ನಡೆದಿತ್ತು ಎಂಬುದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಇನ್ನು ‘ಹಮ್ ಹೈ ಮೋದಿ ಕಾ ಪರಿವಾರ್’ ಎಂಬ ಅಭಿಯಾನ ಯಾವರೂಪ‌ ಪಡೆದುಕೊಳ್ಳಬಹುದು ಎಂದು ಕಾದು‌ ನೋಡಬೇಕಿದೆ.

You might also like
Leave A Reply

Your email address will not be published.