ಕಲಬುರ್ಗಿ : ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಹಿಂದೂಗಳಿಗೆ ಅನುಮತಿ – ಈ ಷರತ್ತುಗಳು ಅನ್ವಯ

ಹಿಂದೂ ಸಂಘಟನೆಗಳ ಮುಖಂಡರು ಶಿವರಾತ್ರಿಯಂದು ನೂರು ಜನರಿಂದ ಶಿವಲಿಂಗದ ಪೂಜೆಗೆ ಅನುಮತಿ ನೀಡಬೇಕು ಎಂದು ಕಲಬುರಗಿ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದು, ಅವರ ಕರೆಗೆ ಓಗೊಟ್ಟ ಹೈಕೋರ್ಟ್ ಆಳಂದದ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಅನುಮತಿ ನೀಡಿದೆ. ಈ ಅನುಮತಿಯೊಂದಿಗೆ ಷರತ್ತುಗಳನ್ನು ವಿಧಿಸಿದೆ. ಏನದು ಷರತ್ತು? ಎಂಬುದಕ್ಕೆ ಈ ಸ್ಟೋರಿ ಓದಿ..

ಕಳೆದ ಬಾರಿಯಂತೆ ಈ ಬಾರಿಯೂ 15 ಜನರಿಗೆ ಮಾತ್ರ ಪೂಜೆ ಸಲ್ಲಿಸಲು ಕಲಬುರಗಿ ಹೈಕೋರ್ಟ್ ಅವಕಾಶ ನೀಡಿದ್ದು, ಆಂದೋಲ ಸಿದ್ದಲಿಂಗ ಸ್ವಾಮೀಜಿ ಸೇರಿ 15 ಜನರಿಗೆ ಮಾತ್ರ ಪೂಜೆಗೆ ಅವಕಾಶ ನೀಡಲಾಗಿದೆ. ಅವಕಾಶ ಸಿಕ್ಕವರೆಲ್ಲರೂ ಮೊದಲಿಗೆ ಆಧಾರ್ ಕಾರ್ಡ್ ಅನ್ನು ನ್ಯಾಯಾಲಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಮಾರ್ಚ್ 8 ರಂದು ಶಿವರಾತ್ರಿ ಆಚರಣೆ ಮತ್ತು ಅದೇ ದಿನ ಶುಕ್ರವಾರದ ಪ್ರಾರ್ಥನೆಗೂ ಮುಸ್ಲಿಮರಿಗೆ ಅನುಮತಿ ನೀಡಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗದೆ. ಹಿಂದೂಗಳು ಪೂಜೆಗೆ ತೆರಳುವ ಸಮಯ ಇತರೇ ವಿಚಾರದ ಕುರಿತು ತೀರ್ಪನ್ನು ನ್ಯಾಯಾಲಯ ನಾಳೆಗೆ ಕಾಯ್ದಿರಿಸಿದೆ. ಆಂದೋಲ ಸ್ವಾಮೀಜಿ ಸೇರಿದಂತೆ ಉಳಿದವರು ತೆರಳುವ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ ಎಂದು ತಿಳಿಸಿದೆ.

ರಥಯಾತ್ರೆಗೆ ಷರತ್ತುಗಳೊಂದಿಗೆ ಅನುಮತಿ:

ಖ್ಯಾತ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಜೀರ್ಣೋದ್ಧಾರಕ್ಕಾಗಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ರಥಯಾತ್ರೆ ಹಮ್ಮಿಕೊಂಡಿವೆ. ಈ ರಥಯಾತ್ರೆಗೆ ಅನುಮತಿ ನೀಡುವಂತೆ ಹಿಂದೂ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಇದೀಗ ನ್ಯಾಯಾಲಯ ಷರತ್ತುಬದ್ಧ ಅನುಮತಿಯನ್ನು ನೀಡಿದೆ. ಯಾವುದದು ಐದು ಷರತ್ತುಗಳು?

Kalaburgi: Hindus allowed to worship Raghava Chaitanya Shivlinga in Dargah - these conditions including

1.ರಥಯಾತ್ರೆಯಲ್ಲಿ ಡಿಜೆ ಸೌಂಡ್ ಬಳಸುವಂತಿಲ್ಲ .
2.ರಥಯಾತ್ರೆ ವೇಳೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ.
3.ಅನ್ಯ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗುವಂತಿಲ್ಲ.
4.ವಿವಾದಿತ ಸ್ಥಳದಲ್ಲಿ ರಥಯಾತ್ರೆ ಹೋಗುವಂತಿಲ್ಲ.
5.ಸೂರ್ಯಾಸ್ತದ ನಂತರ ರಥಯಾತ್ರೆ ಮುಂದುವರಿಸುವಂತಿಲ್ಲ.

2022ರಲ್ಲಿ ಮೂತ್ರ ವಿಸರ್ಜನೆ ಆರೋಪ:

ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಮೇಲೆ ಕಿಡಿಗೇಡಿಗಳು ಮೂತ್ರ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಮುಖಂಡರು ಶಿವಲಿಂಗದ ಶುದ್ಧೀಕರಣಕ್ಕಾಗಿ ದರ್ಗಾಗೆ ತೆರಳಿದ್ದರು. ಈ ವೇಳೆ ಎರಡೂ ಸಮುದಾಯಗಳ ನಡುವೆ ದೊಡ್ಡಮಟ್ಟದಲ್ಲಿ ಗಲಾಟೆ ನಡೆದಿತ್ತು. ಶಿವಲಿಂಗದ ಶುದ್ಧೀಕರಣ ಮಾಡಿ ಬರುತ್ತಿದ್ದಂತೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು ಮತ್ತು ಕಲ್ಲು ತೂರಾಟ ನಡೆಸಲಾಗಿತ್ತು.

2023ರಂದು ಬಿಗಿ ಭದ್ರತೆಯಲ್ಲಿ ಪೂಜೆ:

2023ರಲ್ಲಿ ಪೊಲೀಸ್ ಬಿಗಿ ಭದ್ರತೆ ನಡುವೆ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗಿತ್ತು. ಅಂದು ದರ್ಗಾ ಉರುಸ್ ಮತ್ತು ಶಿವರಾತ್ರಿ ಒಂದೇ ದಿನ ಬಂದಿತ್ತು. ಈ ವರ್ಷ ಶುಕ್ರವಾರದಂದು ಶಿವರಾತ್ರಿ ಪೂಜೆ ನಡೆಯಲಾಗಿದೆ.

ಕಳೆದ ಬಾರಿಯಂತೆ ಈ ವರ್ಷವೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಲಬುರಗಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಾರ್ಚ್ 8ರಂದು ಹಿಂದೂಗಳಿಗೆ ಶಿವರಾತ್ರಿಯ ಪೂಜೆ ಮತ್ತು ಮುಸ್ಲಿಮರಿಗೆ ಶುಕ್ರವಾರದ ಪ್ರಾರ್ಥನೆಗೆ ಸಮಯ ನೀಡಲಾಗಿದೆ.

You might also like
Leave A Reply

Your email address will not be published.