ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿ ಅಬ್ದುಲ್‌ ಸಲಾಂ – ಯಾರಿವರು? ಇವರ ಹಿನ್ನೆಲೆ ಏನು ಗೊತ್ತೇ?

ಮೊನ್ನೆ ಭಾರತೀಯ ಜನತಾ ಪಾರ್ಟಿಯು ಬಿಡುಗಡೆ ಮಾಡಿದ ಮುಂಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದು ಕೇರಳದ ಮಲಪ್ಪುರಂನಿಂದ ಸ್ಪರ್ದಿಸಲಿರುವ 71 ವರ್ಷದ ಕ್ಯಾಲಿಕಟ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಅಬ್ದುಲ್ ಸಲಾಂ ಅವರು.

ತೀರಾ ಇತ್ತೀಚೆಗೆ ಬಿಬಿಸಿಯೊಂದಿಗಿನ ಸಂದರ್ಶನದಲ್ಲಿ ಅಬ್ದುಲ್ ಸಲಾಂ ಅವರು ಹೇಳಿದ ಮಾತುಗಳು ಕೇರಳದಲ್ಲಿ ಕೆಲವರ ತಲೆಕೆಡಿಸಿದೆ. ಸಂದರ್ಶನದಲ್ಲಿ ಮಾತನಾಡುತ್ತಾ, ಸಲಾಮ್ ಅವರು ಅಲ್ಲಿನಸ್ಥಳೀಯಮುಲ್ಲಾಗಳನ್ನು ಟೀಕಿಸಿದ್ದಲ್ಲದೆ ಮತದಾರರಿಗೆ ಮುಲ್ಲಾಗಳ ಮಾತನ್ನು ಕೇಳಬೇಡಿ ಎಂದು ಕರೆ ನೀಡಿದ್ದಾರೆ.‌ ಮುಲ್ಲಾಗಳು ಹೇಳುವಂತೆ ಕಾಫಿರರು ಎಂದರೆ ಯಾರು ಮುಲ್ಲಾಗಳ ಮಾತಿಗೆ ನಾವು ಗಮನಹರಿಸುವ ಅಗತ್ಯವಿಲ್ಲ. ಅವರ ಪ್ರಕಾರ ನೀವು ಇಸ್ಲಾಂ ಧರ್ಮವನ್ನು ಸ್ವೀಕರಿಸುವವರೆಗೂ ನೀವು ಕಾಫೀರರೇ ಆಗಿದ್ದೀರಿ ಹಾಗಾದರೆ ಈಗ ಮುಲ್ಲಾಗಳು ಹೇಳುವಂತೆ ಕಾಫಿರರು ಕಾಫೀರರಾಗೇ ಉಳಿಯಲಿ ಬಿಡಿ. ಮೋದಿ ಅವರ ಜೊತೆ ಸೇರಿ ಬೆಳಕಿನಲ್ಲಿ ನಡೆದು ಇಂತಹ ಅಜ್ಞಾನಗಳನ್ನು ಕೊನೆಗೊಳಿಸುವುದೇ ನನ್ನ ನಿಜವಾದ ಕೆಲಸವಾಗಿದೆ. ಅಲ್ಲಾ, ಖುರಾನ್, ಬೈಬಲ್ ಮತ್ತು ಭಗವದ್ಗೀತೆ ಇವೆಲ್ಲವನ್ನು‌ ನಾನು ನಂಬುತ್ತೇನೆ. ಎಲ್ಲಾ ಧಾರ್ಮಿಕ ಗ್ರಂಥಗಳನ್ನು ನೋಡಿದರೆ ಅವೆಲ್ಲವೂ ಹೇಳುವುದು ಒಂದೇ, ಮಾನವೀಯತೆ, ಪ್ರೀತಿ ಮತ್ತು ಕಾಳಜಿಯನ್ನೇ ಕಲಿಸುತ್ತವೆ. ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೂಡ ಇದನ್ನೇ ನಂಬಿದ್ದಾರೆ ಎಂದರು.

BJP's only Muslim candidate Abdul Salam - who? What does his background know

ಇನ್ನು ಈ ಸಂದರ್ಶನದಲ್ಲಿ ಮೋದಿಯವರನ್ನು ಹೊಗಳಿದ ಸಲಾಂ ಅವರು ನರೇಂದ್ರ ಮೋದಿ ಅವರಿಗಿಂತ ಉತ್ತಮ ವ್ಯಕ್ತಿಯನ್ನು ನಾನು ನನ್ನ ಜೀವನದಲ್ಲಿ ನೋಡಿಲ್ಲ ಎಂದು ಕೊಂಡಾಡಿದ್ದಾರೆ. ಹಿಂದೂವೇ ಆಗಿರಬಹುದು ಯಾವ ಧರ್ಮದಲ್ಲಿ ಹುಟ್ಟಬೇಕು ಎಂದು ಯಾರೂ ನಿರ್ಧಾರ ಮಾಡಿರುವುದಿಲ್ಲ. ಮೋದಿ ಅವರು ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟವರು, ಕೆಲವು ಮುಲ್ಲಾಗಳು ಮೂಲ ಖುರಾನ್ ಅನ್ನು ತಿರುಚಿ ಅವರಿಗೆ ಬೇಕಾದ ಹಾಗೆ ಹೇಳಿ ಯುವಕರ ತಲೆ ಕೆಡಿಸುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭೇಟಿ ಮಾಡಿದ ತಮ್ಮ ಕ್ಷಣಗಳನ್ನು ಹಂಚಿಕೊಂಡ ಸಲಾಂ ಅವರು ಮೋದಿಯನ್ನು ಭೇಟಿಯಾದ ಗಳಿಗೆ ನನಗೆ ಎಂದಿಗೂ ಮರೆಯ ಸಾಧ್ಯವಾಗುತ್ತಿಲ್ಲ ಅವರು ನನ್ನನ್ನು ನೋಡಿ ನಗಲಿಲ್ಲ ಬದಲಾಗಿ ನನ್ನ ಕೈಯನ್ನು ಕುಲುಕಿದರು ಆ ಒಂದು ಭೇಟಿಯಲ್ಲಿ ನನಗಾದ ಅನುಭವ ವಿವರಿಸಲು ಅಸಾಧ್ಯ ಎಂದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನರೇಂದ್ರ ಮೋದಿ ಅವರನ್ನು ಗಮನಿಸುತ್ತಿರುವ ಇವರು ಪ್ರಧಾನಿ ಮೋದಿ ಅವರ ವ್ಯಕ್ತಿತ್ವ ದೂರ ದೃಷ್ಟಿ ಮತ್ತು ಕೆಲಸಗಳು ಅವರನ್ನು ಅಪಾರವಾಗಿ ಆಕರ್ಷಿಸಿವೆ ಎಂದು ಹೇಳಿಕೊಂಡಿದ್ದಾರೆ. ಕಳೆದ 21 ವರ್ಷಗಳಿಂದ ನರೇಂದ್ರ ಮೋದಿಯವರು ಗುಜರಾತ್ ನಿಂದ ದೆಹಲಿಗೆ ಬಂದ ಪ್ರಯಾಣವನ್ನು ಗಮನಿಸಿದ್ದೇನೆ ಪ್ರಧಾನಮಂತ್ರಿ ಮೋದಿ ಅವರು ಮುಸ್ಲಿಂ ವಿರೋಧಿ ಎಂಬ ವಿಷಯ ಪ್ರತಿಪಕ್ಷಗಳ ಕಟ್ಟುಕಥೆಯಾಗಿದೆ ಹೊರತು ಸತ್ಯಕ್ಕೆ ಇದು ದೂರವಾದ ಮಾತಾಗಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಬಿಜೆಪಿ ಮುಸ್ಲಿಂ ವಿರೋಧಿಯಾಗಿದ್ದಲ್ಲಿ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ ಮತ್ತು ಸಬ್ ಕಾ ಪ್ರಯಾಸ್ ಎಂಬ ಪರಿಕಲ್ಪನೆಯನ್ನು ತಲುಪಲೇ ಇರಲಿಲ್ಲ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಎಲ್ಲರನ್ನೂ ಒಟ್ಟಾಗಿ ಮುಂದೆ ಕರೆದುಕೊಂಡು ಹೋಗಿ 2047ರಲ್ಲಿ ದೇಶವು ಸ್ವಾತಂತ್ರದ ನೂರು ವರ್ಷ ಆಚರಿಸುವ ಸಂದರ್ಭದಲ್ಲಿ ಸಮಾಜದ ಪ್ರತಿಯೊಂದು ವರ್ಗವನ್ನು ಸೇರಿಸಲು ಬಿಜೆಪಿಯು ಪ್ರಯತ್ನಿಸುತ್ತಿದೆ ಎಂದರು.

ಇನ್ನು ಭಾರತೀಯ ಜನತಾ ಪಾರ್ಟಿ ಇಂದ ಕೇರಳದ ಮಲಪುರಂ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅಬ್ದುಲ್ ಸಲಾಂ ಅವರ ಹಿನ್ನೆಲೆಯನ್ನು ನೋಡುವುದಾದರೆ ಶೈಕ್ಷಣಿಕ ಮತ್ತು ಸಂಶೋಧನೆಯಿಂದ ವಿಶಿಷ್ಟವಾದ ಜೀವನದಿಂದ ಬಂದವರು ಅಷ್ಟೇ ಅಲ್ಲದೆ ಕ್ಯಾಲಿಕಟ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾಗಿದ್ದವರು. ಮುಂಬರುವ ಚುನಾವಣೆಯಲ್ಲಿ ಇವರು ಗೆದ್ದು ಸ್ವಕ್ಷೇತ್ರವನ್ನು ಅಭಿವೃದ್ಧಿ ಮಾಡುವಂತಾಗಲಿ ಎಂಬುದು ಬಿಜೆಪಿ ಕಾರ್ಯಕರ್ತರ ಅಭಿಲಾಷೆಯಾಗಿದೆ.

You might also like
Leave A Reply

Your email address will not be published.