ಕಾಡ್ಗಿಚ್ಚು – 100ಕ್ಕೂ ಹೆಚ್ಚು ಸಾವು, ಅಪಾರ ಹಾನಿ

ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದ್ದರ ಪರಿಣಾಮ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಹಾಗೂ ಬರೋಬ್ಬರಿ 8,000 ಹೆಕ್ಟೇರ್ ಪ್ರದೇಶದಲ್ಲಿದ್ದ ಅರಣ್ಯ ಪ್ರದೇಶ ಮತ್ತು ನಗರಗಳು ಸುಟ್ಟು ಹೋದ ಘಟನೆ ಚಿಲಿ ದೇಶದ ವಿನಾ ಡೆಲ್ ಮಾರ್ ನಗರದಲ್ಲಿ ನಡೆದಿದೆ.

ಅಲ್ಲದೇ ನಗರದ ಸುತ್ತಲೂ ಸುಮಾರು 200 ಜನರು ಕಾಣೆಯಾಗಿದ್ದು, ಅವರೆಲ್ಲ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲದೇ ಆಸ್ಪತ್ರೆಗೆ ದಾಖಲಾಗಿದ್ದ ಅನೇಕರ ಸ್ಥಿತಿ ಗಂಭೀರವಾಗಿದ್ದು, ಮೃತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ಸರ್ಕಾರ ತಿಳಿಸಿದೆ.

Wildfires - over 100 dead, massive damage

1931ರಲ್ಲಿ ಸ್ಥಾಪಿಸಲಾಗಿದ್ದ ಪ್ರಸಿದ್ಧ ಉದ್ಯಾನದಲ್ಲಿ ಶನಿವಾರ ಇದ್ದಕ್ಕಿದ್ದಂತೆ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ಈಗಾಗಲೇ 1,600 ಕ್ಕೂ ಹೆಚ್ಚು ಜನರ ಮನೆಗಳು ಬೆಂಕಿಗೆ ಆಹುತಿಯಾಗಿವೆ ಹಾಗೂ ಸಾವಿರಾರು ವಾಹನಗಳು ಸುಟ್ಟು ಕರಕಲಾಗಿವೆ. ಇನ್ನು ಭಾರೀ ಪ್ರಮಾಣದ ಬೆಂಕಿ ನಂದಿಸಲು ಅಗ್ನಿಶಾಮಕ ದಳಗಳು ಹರಸಾಹಸಪಟ್ಟಿವೆ.

You might also like
Leave A Reply

Your email address will not be published.