ಭಾರತವನ್ನು ರಕ್ಷಿಸಿದ್ದಕ್ಕೆ ಗೋಡ್ಸೆ ಬಗ್ಗೆ ಹೆಮ್ಮೆ ಎನಿಸುತ್ತದೆ – ವಿವಾದ ಸೃಷ್ಟಿಸಿದ ಸಂದೇಶ

ಕೇರಳದ ಕ್ಯಾಲಿಕಟ್‌’ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (NIT) ಪ್ರಾಧ್ಯಾಪಕಿಯೊಬ್ಬರು ‘ಭಾರತವನ್ನು ರಕ್ಷಿಸಿದ್ದಕ್ಕೆ ಗೋಡ್ಸೆ ಬಗ್ಗೆ ಹೆಮ್ಮೆ ಎನಿಸುತ್ತದೆ’ ಎಂಬ ಸಂದೇಶವನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಎಲ್ಲೆಡೆ ವಿವಾದವನ್ನುಂಟು ಮಾಡುತ್ತಿದೆ. ಯಾರು ಆ ಅಧ್ಯಾಪಕಿ? ಏನದು ಸಂದೇಶ?

ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಎ. ಶೈಜಾ ಎಂಬುವವರು ಈ ಸಂದೇಶವನ್ನು ಹಂಚಿಕೊಂಡ ಪ್ರಾಧ್ಯಪಕಿ.

ಏನದು ಸಂದೇಶ?

ಇತ್ತೀಚೆಗೆ ವಕೀಲ ಕೃಷ್ಣ ರಾಜ್ ಎನ್ನುವವರು ಮಹಾತ್ಮಾಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಈ ಚಿತ್ರಕ್ಕೆ ಎ. ಶೈಜಾ ಅವರು, ‘ಭಾರತವನ್ನು ರಕ್ಷಿಸಿದ್ದಕ್ಕೆ ಗೋಡ್ಸೆ ಬಗ್ಗೆ ಹೆಮ್ಮೆ ಎನಿಸುತ್ತದೆ’ ಎಂದು ಕಾಮೆಂಟ್ ಹಾಕಿದ್ದರು.

Proud of Godse for saving India - a message that created controversy

ದೂರು ದಾಖಲಿಸಿದ ಎಡಪರ ಸಂಘಟನೆಗಳು:

ಈ ಕಾಮೆಂಟ್ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಇದೀಗ ಅನೇಕ ಎಡಪರ ಸಂಘಟನೆಗಳು ಕೇರಳದಲ್ಲಿ ಶೈಜಾ ಅವರ ವಿರುದ್ಧ ದೂರು ದಾಖಲಿಸಿವೆ.

NIT Campus ಅಲ್ಲಿ ಪ್ರತಿಭಟಿಸಿದ ಎಬಿವಿಪಿ:

ಇನ್ನೊಂದೆಡೆ ಶೈಜಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಎನ್‌’ಐಟಿ ಕ್ಯಾಂಪಸ್‌ ನಲ್ಲಿ ಪ್ರತಿಭಟನೆ ನಡೆಸಿದೆ.

ಕಾಲೇಜಿನಲ್ಲಿ ಶೈಜಾ ವಿರುದ್ಧ ಮೆರವಣಿಗೆ ನಡೆಸಿ, ಗೋಡ್ಸೆ ಪ್ರತಿಕೃತಿ ದಹನ ಮಾಡಿದೆ. ಅವರನ್ನು ಎನ್‌ಐಟಿಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದೆ.

ಕುನ್ನಮಂಗಳಂ, ನಾಡಕ್ಕಾವು ಸೇರಿದಂತೆ ಕೆಲವು ಪೊಲೀಸ್ ಠಾಣೆಗಳಲ್ಲಿ ಶೈಜಾ ವಿರುದ್ಧ ಐಪಿಸಿ ಸೆಕ್ಷನ್ 153 ಅಡಿ ದೂರು ದಾಖಲಾಗಿವೆ.

You might also like
Leave A Reply

Your email address will not be published.