ಗೋವಾದಲ್ಲಿ ಗೋಬಿ‌‌ ಮಂಚೂರಿ ಬ್ಯಾನ್!! ಏನಿದು ವರದಿ?

ಗೋವಾದ ಮಸುಪಾ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಗೋಬಿ ಮಂಚೂರಿಯನ್ ಅನ್ನು ನಿಷೇಧಿಸಲಾಗಿದೆ. ‌ಈಗ ಅಲ್ಲಿ ಯಾವುದೇ ಅಂಗಡಿಗಳಲ್ಲಿ ಅಥವಾ ಬೀದಿಗಳಲ್ಲಿ ಅದನ್ನು ಮಾರುವ ಹಾಗಿಲ್ಲ.

ಕಳೆದ ತಿಂಗಳು ನಡೆದ ಬೋಡ್ಗೇಶ್ವರ ದೇವರ ಜಾತ್ರೆಯಲ್ಲಿ ಗೋಬಿಯನ್ನು ನಿ಼ಷೇಧ ಮಾಡುವಂತೆ ಮಸುಪಾ ಕೌನ್ಸಿಲರ್ ತಾರಕ್ ಅರೋಲ್ಕರ್ ಸಲಹೆ ನೀಡಿದರು ಹಾಗೂ ಪರಿಷತ್ತಿನ‌ ಉಳಿದ ಸದಸ್ಯರು ಒಪ್ಪಿಗೆಯನ್ನು ಸೂಚಿಸಿದ ತಕ್ಷಣವೇ ಗೋಬಿಯನ್ನು ನಿಷೇಧಿಸಲಾಗಿದೆ.

Gobi Manchuri Ban in Goa!! What is a report?

ಏಕಾಏಕಿ ಗೋಬಿಯನ್ನು ನಿಷೇಧಿಸಲು ಕಾರಣವೇನೆಂದು‌ ನೋಡುವುದಾದರೆ, ಮೊದಲನೆಯದು ಸ್ವಚ್ಛತೆಗೆ ಸಂಭಂಧಿಸಿದ್ದಾದರೆ, ಎರಡನೆಯದು ಅದರಲ್ಲಿ ಬಳಸುವ ಆರೋಗ್ಯಕ್ಕೆ ಹಾನಿಕಾರಕ ಸಿಂಥೆಟಿಕ್ ಬಣ್ಣ.

ಹೌದು, ಇದೇ ಎರಡು ಮುಖ್ಯ ಕಾರಣಕ್ಕೆ ಈಗ ಅಲ್ಲಿ ಗೋಬಿ ಮಂಚೂರಿಯನ್ ಅನ್ನು ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಮಂಚೂರಿಯನ್ ನಲ್ಲಿ ಆರೋಗ್ಯಕ್ಕೆ ಹಾನಿಕಾರಕ ಚಟ್ನಿಯನ್ನೂ ಬಳಸಿರುವುದಾಗಿ ತಮಗೆ ದೂರು ಬಂದಿರುವುದಾಗಿ ಎಫ್ ಡಿ ಎ ಯ ಹಿರಿಯ ಆಹಾರ ಸುರಕ್ಷತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿಟ್ಟಿನೊಂದಿಗೆ ಬಟ್ಟೆ ಒಗೆಯಲು ಬಳಸುವ ಪುಡಿಯ ತರದ ಕೆಲವನ್ನು ಬಳಸುವುವುದರಿಂದ ಇದು ಆರೋಗ್ಯಕ್ಕೆ ವ್ಯತಿರಿಕ್ತವಾಗಿದ್ದು ಆ ಪುಡಿಯಿಂದಾಗಿ ಡೀಪ್ ಪ್ರೈ ಬಳಿಕವೂ ಗೋಬಿ ಗರಿ ಗರಿಯಾಗಿರುತ್ತದೆ.

You might also like
Leave A Reply

Your email address will not be published.