ಸಿಲಿಕಾನ್ ಸಿಟಿಗೆ ಆನೆಗಳ ದಾಳಿ – ದಿಡೀರ್ ಬಂದ ಆನೆಗಳ ವೀಕ್ಷಣೆಗೆ ಜನತೆ ನೂಕುನುಗ್ಗಲು

ಹೇ ಆನೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಆನೆಗಳೊಂದಿಗೆ ಆಟ ಆಡಿ, ಫೋಟೋ ತೆಗೆದುಕೊಳ್ಳುವುದ್ದಕ್ಕೆ ಒಂಟಿಗಾಲಲ್ಲಿ ನಿಂತಿರ್ತಿವಿ. ಆನೆಗಳ ವೀಕ್ಷಣೆಗೆಂದೆ ಬಂಡಿಪುರ ಆನೆ ಪಾರ್ಕ್ ಅಥವಾ ತೈಲಾಂಡ್ ಟ್ರಿಪ್ ಮಾಡುವುದು ಹೆಚ್ಚು ಅಲ್ವೆ? ಆನೆ ಪ್ರಿಯರಿಗಾಗಿ ಸಿಲಿಕಾನ್ ಸಿಟಿಯಲ್ಲಿ ಲ್ಯಾಂಟಾನಾ ಆನೆಗಳ ಪ್ರತಿಕೃತಿಗಳ ಘರ್ಜನೆ ಶುರುವಾಗಿದೆ. ಯಾವ ಪ್ಲೇಸ್ ಅಲ್ಲಿ ನಿರ್ಮಿಸಲಾಗಿದೆ ಎಂಬಿತ್ಯಾದಿ ಮಾಹಿತಿಗಾಗಿ ಈ ಸ್ಟೋರಿ ಓದಿ.

ಸಿಲಿಕಾನ್ ಸಿಟಿಯ ಸಸ್ಯಕಾಶಿ ಲಾಲ್ ಬಾಗ್ನಲ್ಲಿ ಇತ್ತೀಚೆಗಷ್ಟೇ 215ನೇ ಫಲಪುಷ್ಪ ಪ್ರದರ್ಶನ ಭರ್ಜರಿಯಾಗಿ ನಡೆಯಿತು. ಫಲಪುಷ್ಪ ಪ್ರದರ್ಶನ ನಂತರ ಬೆಂಗಳೂರಿನ ಸಸ್ಯಕಾಶಿ ತೋಟದಲ್ಲಿ ಲ್ಯಾಂಟಾನಾ ಆನೆಗಳ ಪ್ರತಿಕೃತಿಗಳ ಘರ್ಜನೆ ಶುರುವಾಗಿದೆ.

ಹೌದು! ನಮ್ಮ ಬೆಂಗಳೂರಿನ ಸಸ್ಯಕಾಶಿ ತೋಟಕ್ಕೆ ಒಂದು ವಿಸಿಟ್ ಕೊಟ್ರೆ ಸಾಕು. ನೀವು ಬೆರಗಾಗೋದು ಪಕ್ಕಾ. ಇದರಲ್ಲಿ ಡೌಟೇ ಇಲ್ಲ. ಜೀವಂತ ಆನೆಗಳಂತೆ ಪೋಸ್ ಕೊಡುತ್ತಿರುವ ಲ್ಯಾಂಟಾನಾ ಆನೆಗಳ ಪ್ರತಿಕೃತಿಗಳು ಕಣ್ಣನ್ನು ಸೆಳೆಯುತ್ತವೆ. ಆನೆಗಳ ನೋಡಿ ಮಕ್ಕಳು ಖುಷಿಪಟ್ಟು ಆಡೋದಂತು ಪಕ್ಕ. ಯಾಕಂದ್ರೆ ಇವೇನು ನಿಜವಾದ ಆನೆಗಳಲ್ಲ.

Elephants in Silicon City

ಈ ಲ್ಯಾಂಟಾನಾ ಆನೆಗಳನ್ನು ತಯಾರಿಸಿದ್ದು ಎಲ್ಲಿ ಮತ್ತು ಯಾರು?

ದಿ ರಿಯಲ್ ಎಲಿಫೆಂಟ್ ಕಲೆಕ್ಟೀವ್ ವತಿಯಿಂದ ಹಾಗು ಬಿ.ಆರ್. ಹಿಲ್ಸ್, ತಮಿಳುನಾಡು ಬಯೋ ರಿಸರ್ವ್ ಪ್ರದೇಶದಿಂದ ಲಾಂಟಾನಾ ಕಮಾರದಿಂದ ತಯಾರಿಸಿರುವ ಲ್ಯಾಂಟಾನಾ ಆನೆಗಳ ಪ್ರತಿಕೃತಿ ಇದಾಗಿದೆ. ಬುಡಕಟ್ಟು ಜನಾಂಗದ ಪರಿಣಿತರಿಂದ ಕಳೆ ಗಿಡವಾದ ಲಾಂಟಾನಾ ಕಮಾರ ಕಾಂಡದಿಂದ ಅರಳಿದ ಪರಿಸರ ಸ್ನೇಹಿ 60 ಬೃಹತ್ ಆನೆಗಳ ಪ್ರತಿರೂಪಗಳ ಪ್ರದರ್ಶನ ನಡೆಯುತ್ತಿದೆ.

ಮಾರ್ಚ್ 3ರವರೆಗೆ ಲ್ಯಾಂಟಾನಾ ಆನೆಗಳ ಪ್ರದರ್ಶನ:

ಈ ಲ್ಯಾಂಟಾನಾ ಆನೆಗಳನ್ನು ನೋಡುವುದಕ್ಕೆ ಜೀವಂತ ಆನೆಗಳಂತೆ ಇದ್ದು, ಮಾರ್ಚ್ 3ರವರೆಗೂ ಆನೆಗಳ ಪ್ರತಿಕೃತಿ ಪ್ರದರ್ಶನ ನಡೆಯಲಿದೆ. ಇನ್ನೂ ಬೆಳ್ಳಂ ಬೆಳ್ಳಗೆ ಲಾಲ್ ಬಾಗ್ಗೆ ವಾಕಿಂಗ್ ಬಂದ ಮಂದಿ ಜೀವಂತ ಆನೆಗಳನ್ನು ನೋಡಿದಂತೆ ಭಾಸವಾಗುತ್ತಿದೆ ಎಂದು ಖುಷಿ ಪಡುತ್ತಿದ್ದಾರೆ. ಅಷ್ಟೆ ಅಲ್ಲದೆ ವೀಕೆಂಡ್ನಲ್ಲಿ ತಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಬಂದು ಲಾಂಟಾನಾ ಆನೆಗಳನ್ನು ಕಂಡು ಖುಷಿ ಆಗಿದ್ದಾರೆ.

Elephants in Silicon City

ಸಾರ್ವಜನಿಕರಿಗೆ ಜೋಷೋ ಜೋಷ್:

ಒಂದು ಕಡೆ ಮುಗ್ದ ಮಕ್ಕಳು ಗಜ ಪ್ರತಿಕೃತಿಗಳ ಜೊತೆ ಆಟ ಆಡಿಕೊಂಡು ಸಂತೋಷ ಪಡುತ್ತಿದ್ರೆ, ಇನ್ನೊಂದು ಕಡೆ ಯುವಕ ಯುವತಿಯರು ಆನೆಗಳ ಜೊತೆ ಸೆಲ್ಫಿ, ರೀಲ್ಸ್ ಮಾಡಿಕೊಂಡು ಎಂಜಾಯ್ ಮಾಡ್ತಿದ್ದಾರೆ.

ಒಟ್ಟಿನಲ್ಲಿ ಲ್ಯಾಂಟಾನಾ ಆನೆಗಳ ಪ್ರತಿಕೃತಿಗಳು ಕೇವಲ ಒಂದು ತಿಂಗಳ ಕಾಲ ಅಷ್ಟೆ ಇರಲಿದ್ದು, ಈ ಆನೆಗಳು ಲಾಲ್ ಬಾಗ್ನಲ್ಲೇ ಇದ್ರೆ ತುಂಬಾ ಚೆನ್ನಾಗಿರುತ್ತೆ ಎಂದು ಸಾಕಷ್ಟು ಜನರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬನ್ನಿ ಮತ್ತೆ ಇನ್ಯಾಕೆ ತಡ ನಾವು ಹೋಗ್ಬರೋಣ!!

You might also like
Leave A Reply

Your email address will not be published.