ಬ್ಯಾಡ್ಮಿಂಟನ್ ಹೃದಯಕ್ಕೆ ಜಾವೆಲಿನ್ ಎಸೆದರಾ ಬಂಗಾರದ ಹುಡುಗ

ಬ್ಯಾಟ್ಮಿಂಟನ್ ತಾರೆ, ಎರಡು ಬಾರಿ ಒಲಿಂಪಿಕ್ ಮೆಡಲ್ ಗೆದ್ದ ಪಿವಿ ಸಿಂಧು ತನ್ನ ಇನ್ಸ್ಟಾ ಖಾತೆಯಲ್ಲಿ ಜಾವೆಲಿನ್ ಫೋಟೋ ಪೋಸ್ಟ್ ಮಾಡಿ ‘ಇದು ಹೇಗೆ ನನ್ನ ಬಳಿ ಬಂತು? ಗೆಸ್ ಮಾಡ್ತೀರಾ’ ಅಂತ ಕೇಳಿದ್ರೆ, ಇತ್ತ ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಪಟು ನೀರಜ್ ಕೂಡಾ ತನ್ನ ಖಾತೆಯಲ್ಲಿ ಬ್ಯಾಟ್ಮಿಂಟನ್ ಸೆಟ್ ಚಿತ್ರ ಹಾಕಿ ‘ಇದರರ್ಥವೇನು ಗೆಸ್ ಮಾಡ್ತೀರಾ’ ಎಂದು ಕೇಳುವ ಮೂಲಕ ಇಬ್ಬರ ಅಭಿಮಾನಿಗಳಲ್ಲೂ ಅನುಮಾನ ಮೂಡಿಸಿದ್ದಾರೆ.

ಈ ಅನುಮಾನ ಹೊಗೆಯಾಡೋಕೆ ಕಾರಣ ಇನ್ಸ್ಟಾಗ್ರಾಂನಲ್ಲಿ ಈ ಇಬ್ಬರೂ ಕ್ರೀಡಾಪಟುಗಳು ಹಾಕಿರುವ ಪೋಟೋಗಳು. ಅತ್ತ ಅವರ ಕ್ರೀಡೆಯ ಫೋಟೋ ಇವರು, ಇವರ ಕ್ರೀಡೆಯ ಸಂಕೇತದ ಚಿತ್ರ ಅವ್ರು ಹಾಕಿರೋದ್ ನೋಡಿದ ಅಭಿಮಾನಿಗಳು ಮದುವೆಯಾಗ್ತಿದಾರಾ ಎಂಬ ಅನುಮಾನದ ಜೊತೆ ರೋಮಾಂಚನ ಹುಟ್ಟಿಸಿದೆ.

 

View this post on Instagram

 

A post shared by PV Sindhu (@pvsindhu1)

‘ಜಾವೆಲಿನ್ ಮೀಟ್ಸ್ ಬ್ಯಾಂಡ್ಮಿಂಟನ್’

ಈ ಇಬ್ರೂ ಸಧ್ಯದಲ್ಲೇ ಮದುವೆ ಆಗ್ತಿದಾರೆ, ಇದಂತೂ ದೊಡ್ಡ ಸುದ್ದಿ ಎಂದು ಫ್ಯಾನ್ಸ್ ಸಂಭ್ರಮಿಸುತ್ತ ಇದಾರೆ. ಮತ್ತೆ ಕೆಲವರು ಯಾವಾಗ ಮದುವೆ ಎಂದು ಕೇಳ್ತಿದ್ರೆ ಕೆಲ ನೆಟ್ಟಿಗರು ಕಂಗ್ರಾಜುಲೇಶನ್ಸ್ ಎಂದು ಹಾರೈಸುತ್ತಿದ್ದಾರೆ. ‘ಜಾವೆಲಿನ್ ಮೀಟ್ಸ್ ಬ್ಯಾಂಡ್ಮಿಂಟನ್’ ಎಂದು ಕ್ರೀಡಾಭಿಮಾನಿಗಳು ಖುಷಿಯಾಗಿದ್ದಾರೆ. ಈ ಮಧ್ಯೆ ಕೆಲ ನೆಟ್ಟಿಗರು ಮಾತ್ರ, ಮದುವೆ ಗಿದುವೆ ಇರ್ಲಿಕ್ಕಿಲ್ಲ- ಇಬ್ಬರೂ ಕೊಲಾಬೊರೇಶನ್ನಲ್ಲಿ ಆಡ್ತಿರಬಹುದು ಎನ್ನುತ್ತಿದ್ದಾರೆ. ಬರುವ ಒಲಿಂಪಿಕ್ಸ್ ತಯಾರಿ ಇರಬಹುದು ಎಂದೂ ಹೇಳ್ತಿದಾರೆ.

‘ಒಲಂಪಿಕ್ ಪಂದ್ಯಗಳು ನಡೆಯುತ್ತಿವೆ, ಆದ್ದರಿಂದ ನಮ್ಮ ದೇಶವನ್ನು ಬೆಂಬಲಿಸುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರತಿಯೊಬ್ಬ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಎರಡೂ ಕ್ರೀಡಾಪಟುಗಳ ಸಹಯೋಗವಾಗಿದೆ’ ಎಂದೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಎಲ್ಲದರ ನಡುವೆ ಈ ಇಬ್ಬರೂ ಗೋಲ್ಡನ್ ಕ್ರೀಡಾಪಟುಗಳು ಮದುವೆಯಾಗುವ ವಿಷಯವೇ ನಿಜವಾಗಿರಲಿ ಎಂದೂ ಕೆಲವರು ಹಾರೈಸುತ್ತಿದ್ದಾರೆ.

You might also like
Leave A Reply

Your email address will not be published.