KAS Notification : ಆತಂಕದಲ್ಲಿದ್ದ ಕೆಎಎಸ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ

ಕಳೆದ ಹಲವು ವರ್ಷಗಳಿಂದ ರಾಜ್ಯ ಪ್ರೊಬೇಷನರಿ ಹುದ್ದೆಗಳಿಗೆ ತಯಾರು ನಡೆಸಿ ವಯಸ್ಸಿನ ಮಿತಿಯಿಂದಾಗಿ ಪರೀಕ್ಷೆಯಿಂದ ವಂಚನೆಗೊಳ್ಳುತ್ತಿದ್ದ ಸ್ಪರ್ಧಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಶೀಘ್ರದಲ್ಲೇ 16 ಇಲಾಖೆಗಳ 504 ಕೆಎಎಸ್‌ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸುವ ಸಾಧ್ಯತೆ ಇದೆ. ಆದ್ದರಿಂದ, ಅಭ್ಯರ್ಥಿಗಳ ಮನವಿ ಮೇರೆಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಕೊರೋನಾ ಸಂಕಷ್ಟದಿಂದಾಗಿ ಕಳೆದ ಕೆಲ ವರ್ಷಗಳಿಂದ ಕೆಪಿಎಸ್‌ʼಸಿ ಕರ್ನಾಟಕ ಆಡಳಿತಾತ್ಮಕ ಸೇವೆಗಳಿಗೆ ನೇಮಕಾತಿ ನಡೆಸಿರಲಿಲ್ಲ. ಇದೀಗ ಸಮಯ ಕೂಡಿ ಬಂದಿದ್ದು, ಕರ್ನಾಟಕ ಲೋಕಸೇವಾ ಆಯೋಗವು ಶೀಘ್ರವೇ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ 3 ವರ್ಷಗಳ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಿ ಆದೇಶಿಸಿದೆ.

ರಾಜ್ಯ ಸರ್ಕಾರದ 16 ಇಲಾಖೆಗಳಲ್ಲಿ ಖಾಲಿಯಿರುವ 504 ಹುದ್ದೆಗಳ ನೇಮಕಾತಿ ನಡೆಸಲು ಆರ್ಥಿಕ ಇಲಾಖೆ ಅನುಮತಿ ನೀಡಿತ್ತು. ಆದರೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕೇವಲ 276 ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್‌ʼಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಅಭ್ಯರ್ಥಿಗಳ ಒತ್ತಾಯದ ಮೇರೆಗೆ ಒಟ್ಟು 504 ಹುದ್ದೆಗಳಿಗೆ ಏಕಕಾಲದಲ್ಲಿ ನೇಮಕಾತಿ ನಡೆಸಲು ಸರ್ಕಾರದ ಒಪ್ಪಿಗೆ ನೀಡಿದೆ.

KPSC

ಪ್ರಸ್ತುತ ಇರುವ ವಯಸ್ಸಿನ ಮಿತಿ :

ಕರ್ನಾಟಕ ಆಡಳಿತಾತ್ಮಕ ಸೇವೆಗಳಿಗೆ ನೇಮಕಾತಿ ಬಯಸಿದ ಅಭ್ಯರ್ಥಿಗಳು ಕೆಪಿಎಸ್‌ʼಸಿ ಅರ್ಜಿ ಆಹ್ವಾನಿಸಿದ ಕೊನೆಯ ದಿನಾಂಕದ ಒಳಗಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, , ಒಬಿಸಿ ವರ್ಗದವರಿಗೆ 38 ವರ್ಷ, ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷದೊಳಗಿರಬೇಕಿತ್ತು.

ಈ ವರ್ಷದ ನೇಮಕಾತಿಗೆ ವಯಸ್ಸಿನ ಸಡಿಲಿಕೆ :

2024ರಲ್ಲಿ ನಡೆಸಲಾಗುವ ಕೆಎಎಸ್‌ ನೇಮಕಾತಿಗೆ ಅನ್ವಯವಾಗುವಂತೆ 3 ವರ್ಷಗಳ ವಯಸ್ಸಿನ ಮಿತಿ ಸಡಿಲಿಕೆ ಮಾಡಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ, ಒಬಿಸಿ ವರ್ಗದವರಿಗೆ 41 ವರ್ಷ, ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷ ವಯಸ್ಸಿನವರೆಗೆ ಮಿತಿ ಹೆಚ್ಚಿಸಲಾಗಿದೆ.

16 ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಗ್ರೂಪ್‌ ಎ ವೃಂದದ ಖಾಲಿ ಹುದ್ದೆಗಳು :

ವಾಣಿಜ್ಯ ತೆರಿಗೆ ಇಲಾಖೆ : 41
ಡಿಪಿಎಆರ್ (ಸೇವೆಗಳು-2) : 20
ಆರ್‌ಡಿಪಿಆರ್ ಇಲಾಖೆ : 20
ಸಮಾಜ ಕಲ್ಯಾಣ ಇಲಾಖೆ : 10
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : 7
ಒಳಾಡಳಿತ ಇಲಾಖೆ : 5
ಖಜಾನೆ ಇಲಾಖೆ : 2

ಗ್ರೂಪ್‌ ಬಿ ವೃಂದದ ಖಾಲಿ ಹುದ್ದೆಗಳು :

ವಾಣಿಜ್ಯ ತೆರಿಗೆ ಇಲಾಖೆ: 59
ಕಂದಾಯ ಇಲಾಖೆ : 26
ಆರ್ಥಿಕ ಇಲಾಖೆ (ಖಜಾನೆ): 23
ಸಹಕಾರ ಇಲಾಖೆ : 21
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ : 9
ಸಮಾಜ ಕಲ್ಯಾಣ ಇಲಾಖೆ : 7
ಡಿಪಿಎಆರ್ (ಸಿಬ್ಬಂದಿ): 5
ಆರ್ಥಿಕ ಇಲಾಖೆ (ಅಬಕಾರಿ) : 5
ಕಾರ್ಮಿಕ ಇಲಾಖೆ : 4
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ : 4
ಒಳಾಡಳಿತ (ಕಾರಾಗೃಹ) : 3
ಕೌಶಲಾಭಿವೃದ್ಧಿ ಇಲಾಖೆ : 2
ಪ್ರವಾಸೋದ್ಯಮ ಇಲಾಖೆ : 2
ನಗರಾಭಿವೃದ್ಧಿ ಇಲಾಖೆ : 1

You might also like
Leave A Reply

Your email address will not be published.