T20 World Cup 2024 Schedule : ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ – ಭಾರತ v/s ಪಾಕಿಸ್ತಾನದ ಪಂದ್ಯಕ್ಕೆ ಕ್ಷಣಗಣನೆ

ವೆಸ್ಟ್ ಇಂಡೀಸ್ ಮತ್ತು ಅಮೇರಿಕಾದಲ್ಲಿ ಆಯೋಜನೆಯಾಗಿರುವ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ (T20 World Cup 2024 Schedule) ಬಿಡುಗಡೆಯಾಗಿದ್ದು, 2024ರ ಟಿ20 ವಿಶ್ವಕಪ್‌ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ.

ಜೂನ್ 5ರಿಂದ ಜೂನ್ 29ರವರೆಗೆ 5 ದಿನಗಳ ಕಾಲ ಟಿ20 ವಿಶ್ವಕಪ್ (T20 World Cup 2024) ನಡೆಯಲಿದೆ. ಭಾರತ ತನ್ನ ಚೊಚ್ಚಲ ಟಿ20 ವಿಶ್ವಕಪ್‌ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್ ತಂಡದ ವಿರುದ್ಧ ಆಡಲಿದೆ. ಜೂನ್‌ 9 ರಂದು ಪಾಕಿಸ್ತಾನದ ವಿರುದ್ಧ ಭಾರತ ತಂಡ ಸೆಣಸಲಿದ್ದು, ಅಭಿಮಾನಿಗಳು ತೀವ್ರ ಕುತೂಹಲದಿಂದ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ.

ವೆಸ್ಟ್‌ ಇಂಡೀಸ್‌ ಮತ್ತು ಅಮೇರಿಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ʼನ ಲೀಗ್‌ ಹಂತದ ಪಂದ್ಯಗಳನ್ನು ಅಮೇರಿಕಾದಲ್ಲಿ ಹಾಗೂ ಸೂಪರ್-8‌ ಹಂತದ ಪಂದ್ಯಗಳನ್ನು ವೆಸ್ಟ್‌ ಇಂಡೀಸ್‌ʼನಲ್ಲಿ ಆಯೋಜಿಸಲಾಗಿದೆ.

T20 World Cup 2024 Schedule

2024ರ ಟಿ20 ವಿಶ್ವಕಪ್‌ʼನಲ್ಲಿ ಭಾಗವಹಿಸುವ ತಂಡಗಳೆಷ್ಟು?

2024ರ ಟಿ20 ವಿಶ್ವಕಪ್‌ʼನಲ್ಲಿ (T20 World Cup 2024) ಬರೋಬ್ಬರಿ 20 ತಂಡಗಳು ಕಣಕ್ಕಿಳಿಯಲಿವೆ. ಇದೇ ಮೊದಲ ಬಾರಿಗೆ ಈ ಪ್ರಮಾಣದ ತಂಡಗಳು ಟಿ20 ವಿಶ್ವಕಪ್ʼನಲ್ಲಿ ಮುಖಾಮುಖಿಯಾಗಲಿವೆ. 20 ತಂಡಗಳಿಂದ ತಲಾ 5 ತಂಡಗಳಿರುವ 4 ಗುಂಪುಗಳನ್ನಾಗಿ ವಿಂಗಡನೆ ಮಾಡಲಾಗಿದೆ. ಪ್ರತಿ ಗುಂಪುಗಳಿಂದ 2 ತಂಡಗಳು ಸೂಪರ್-8 ಹಂತಕ್ಕೇರಲಿದೆ. ಸೂಪರ್-8‌ ಹಂತದಲ್ಲಿ ಗೆಲುವು ಸಾಧಿಸಿದ 4 ತಂಡಗಳು ಸೆಮಿಫೈನಲ್‌ʼನಲ್ಲಿ ಸೆಣಸಲಿವೆ. ಸೆಮಿಸ್‌ನಲ್ಲಿ ಗೆದ್ದ 2 ತಂಡಗಳು ಫೈನಲ್ ಪ್ರವೇಶಿಸಲಿವೆ.

ಫೈನಲ್‌ ಪಂದ್ಯಕ್ಕೆ ಮೀಸಲು ದಿನ :

ಟಿ20 ವಿಶ್ವಕಪ್‌ʼನ (T20 World Cup 2024) ಲೀಗ್ ಮತ್ತು ಸೂಪರ್ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

ಲೀಗ್ ಹಂತದಲ್ಲಿ ಭಾರತದ ಪಂದ್ಯಗಳ ವೇಳಾಪಟ್ಟಿ :

ಜೂನ್‌ 05 : ಭಾರತ v/s ಐರ್ಲೆಂಡ್
ಜೂನ್‌ 09 : ಭಾರತ v/s ಪಾಕಿಸ್ತಾನ
ಜೂನ್‌ 12 : ಭಾರತ v/s ಅಮೇರಿಕಾ
ಜೂನ್‌ 15 : ಭಾರತ v/s ಕೆನಡಾ

You might also like
Leave A Reply

Your email address will not be published.