‘ಮೋದಿ ಕಾ ಪರಿವಾರ್’ ಅಭಿಯಾನದ ಮೂಲ ಯಾವುದು? ಇಲ್ಲಿದೆ ವರದಿ

ಆರ್ ಜೆ ಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ‌ ಮೇಲೆ ವೈಯಕ್ತಿಕ ದಾಳಿ‌ಮಾಡುವ ಮೂಲಕ ಅವರ ಬೆಂಬಲಿಗರನ್ನು ಕೆಣಕಿ ಈಗ ಪೇಚಿಗೆ ಸಿಲುಕಿದ್ದಾರೆ.‌

ಪಾಟ್ನಾದದಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ‌ ಮಾತನಾಡಿದ ಲಾಲು, ‘ಮೋದಿ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುತ್ತಾರೆ, ಆದರೆ ಕುಟುಂಬ ರಾಜಕೀಯ ಎಂದರೇನು? ಮೋದಿಗೆ ಯಾಕೆ ಮಕ್ಕಳಿಲ್ಲ ಎಂದು ಅವರೇ ವಿವರಿಸಬೇಕು, ನರೇಂದ್ರ ಮೋದಿಗೆ ಸ್ವಂತ ಕುಟುಂಬವಿಲ್ಲದಿದ್ದರೆ ನಾವೇನು ಮಾಡಲು ಸಾಧ್ಯ? ಎಂದು ಲಾಲು ಕಿಡಿಕಾರಿದ್ದಾರೆ.

ಅಷ್ಟೇ ಅಲ್ಲದೆ ಮುಂದುವರೆದು ಮಾತನಾಡುತ್ತಾ, ‘ಮೋದಿ ರಾಮ ಮಂದಿರದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ, ಆದರೆ ಆತ ನಿಜವಾದ ಹಿಂದೂ ಅಲ್ಲವೇ ಅಲ್ಲ, ಹಿಂದೂ ಸಂಪ್ರದಾಯದ ಪ್ರಕಾರ ಹೆತ್ತವರನ್ನು ಕಳೆದುಕೊಂಡ ಬಳಿಕ ನಿಜವಾದ ಹಿಂದು ತಲೆ ಹಾಗೂ ಗಡ್ಡ ಬೋಳಿಸಬೇಕು ಆದರೆ ಅವರ ತಾಯಿ ಸತ್ತಾಗ ಮೋದಿ ಹಾಗೆ ಮಾಡಲೇ ಇಲ್ಲ’ ಎಂದಿದ್ದಾರೆ.

What is the origin of 'Modi Ka Parivar' campaign? Here is the report

ಮೋದಿಯವರ ಮೇಲೆ ವೈಯಕ್ತಿಕ ದಾಳಿ‌ ಮಾಡುವ ಮೂಲಕ ಮುನ್ನಡೆ ಸಾಧಿಸಬಹುದು ಎಂದು ಭಾವಿಸಿದ್ದ ವಿಪಕ್ಷಗಳಿಗೆ ಈಗ ಭಾರೀ ಹಿನ್ನಡೆಯಾಗಿದ್ದು ಮಾತ್ರ ಸುಳ್ಳಲ್ಲ. ಪ್ರಧಾನಿ ಮೋದಿಯವರು ಸಭೆಯೊಂದನ್ನು ಉದ್ದೇಶಿಸಿ ಮಾತನಾಡುವಾಗ, ‘140 ಕೋಟಿ ದೇಶವಾಸಿಗಳು ನನ್ನ ಕುಟುಂಬದವರೇ, ಪ್ರತಿಯೊಬ್ಬ ಬಡವನೂ ನನ್ನ ಕುಟುಂಬವೇ.‌ ಯಾರೂ ಇಲ್ಲದವರಿಗೆ ಮೋದಿ ಸೇರಿದವರು ಮತ್ತು ಮೋದಿಗೆ ಅವರು ಸೇರಿದ್ದಾರೆ’ ಎಂದು ಹೇಳಿದ್ದಾರೆ.

ಲಾಲು ಮಾತನ್ನು ಧನಾತ್ಮಕವಾಗಿ ಪರಿವರ್ತಿಸಿಕೊಂಡ ಬಿಜೆಪಿ ಬೆಂಬಲಿಗರು ಈಗ ‘ಮೋದಿ ಕಾ ಪರಿವಾರ್’ ಎಂಬ ಟ್ರೆಂಡಿಗೆ ಮುನ್ನುಡಿ ಬರೆದಿದ್ದಾರೆ. ಇನ್ನೇನು ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಬಿಜೆಪಿಗೆ ಹೊಸ ಅಸ್ತ್ರಗಳನ್ನು ವಿಪಕ್ಷಗಳೇ ನೀಡುತ್ತಿವೆ. ಈಗ ಸಾರ್ವಜನಿಕರಿಂದ ಹಿಡಿದು ಕೇಂದ್ರೀಯ ಮಂತ್ರಿಗಳಾದ ಅಮಿತ್ ಶಾ, ಅನುರಾಗ್ ಠಾಕೂರ್, ಸ್ಮೃತಿ ಇರಾನಿ, ನಿತಿನ್ ಗಡ್ಕರಿ ಹಾಗೂ ಅನೇಕರು ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಹೆಸರಿನ ಮುಂದೆ ‘ಮೋದಿ ಕಾ ಪರಿವಾರ್’ (ಮೋದಿಯ ಕುಟುಂಬ) ಎಂದು ಸೇರಿಸಿದ್ದಾರೆ. 2019 ರಲ್ಲಿ ರಾಹುಲ್ ಗಾಂಧಿಯವರು ಚೌಕಿದಾರ್ ಚೋರ್ ಹೈ ಎಂದ ಹೇಳಿಕೆಯನ್ನು ಬಿಜೆಪಿ ‘ಮೈ ಭಿ ಚೌಕಿದಾರ್ ಹೂ’ ಎಂಬ ಅಭಿಯಾನ‌ ನಡೆಸಿತ್ತು ಎಂಬುದು ಇನ್ನೂ ಹಸಿಯಾಗಿಯೇ ಇದೆ.

ಇನ್ನು 2014 ರ ಮೊದಲು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಪ್ರಧಾನಮಂತ್ರಿಯ ಪೂರ್ವ ದಿನಗಳಾದ ಚಹಾ ಮಾರುವ ಬಗ್ಗೆ ಟೀಕಿಸಿದ್ದರಿಂದ ಮೋದಿ ಚಹಾ ಹಂಚಬಹುದೇ ವಿನಃ ಎಂದೂ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಅದಾಗಿ ಕೆಲವೇ ದಿನಗಳಲ್ಲಿ ರಾಷ್ಟ್ರದಾದ್ಯಂತ ‘ಚಾಯ್ ಪೆ ಚರ್ಚಾ’ ದಂತ ಕಾರ್ಯಕ್ರಮಗಳು ನಡೆದು ಮೋದಿಯವರು ಅಭೂತಪೂರ್ವವಾಗಿ ವಿಜಯ ಸಾಧಿಸಿದ್ದು ಈಗ ಇತಿಹಾಸ.‌

You might also like
Leave A Reply

Your email address will not be published.