18 ವರ್ಷದ ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ ರೂ.1000 ಹಣ : ಬಜೆಟ್‌ʼನಲ್ಲಿ ಘೋಷಣೆ

ದೆಹಲಿ ಸರ್ಕಾರ ಇವತ್ತು ಪ್ರಸ್ತುತ ಪಡಿಸಿದ ಬಜೆಟ್ʼನಲ್ಲಿ ಹಣಕಾಸು ಸಚಿವೆ ಆತಿಶಿ (Atishi) ಅವರು 76,000 ಕೋಟಿ ರೂ. ಗಾತ್ರದ ತಮ್ಮ ಚೊಚ್ಚಲ ಬಜೆಟ್ ಅನ್ನು ಇಂದು ಮಂಡಿಸಿದರು. ಇದರಲ್ಲಿ ಶಿಕ್ಷಣ ಮತ್ತು ಮಹಿಳೆಯರ ಮೇಲೆ ಹೆಚ್ಚು ಒತ್ತು ನೀಡಲಾಗಿದ್ದು, ಯಾವ ಯಾವ ಇಲಾಖೆಗೆ ಎಷ್ಟು ಒತ್ತು ನೀಡಲಾಗಿದೆ ಎಂಬುದಕ್ಕೆ ಈ ಸ್ಟೋರಿ ಓದಿ.

ಬಜೆಟ್ʼನಲ್ಲಿ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯನ್ನು (Mukhyamantri Mahila Samman Yojana) ಘೋಷಿಸಿದ್ದು, ಏಪ್ರಿಲ್ 1 ರಿಂದ ಇದು ಜಾರಿಯಾಗಲಿದೆ. ಇದರಲ್ಲಿ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲಾ ಮಹಿಳೆಯರಿಗೂ ತಿಂಗಳಿಗೆ 1 ಸಾವಿರ ರೂ. ನೀಡಲಾಗುತ್ತದೆ. ಬಜೆಟ್’ನಲ್ಲಿ ಶೇ.21ಕ್ಕೂ ಹೆಚ್ಚು ಹಣವನ್ನು ಶಿಕ್ಷಣಕ್ಕೆ ನೀಡಲಾಗಿದೆ.

ಹಣಕಾಸು ಸಚಿವೆ ಆತಿಶಿ ತಮ್ಮ 76,000 ಕೋಟಿ ರೂ ದಾಖಲೆಯ ಬಜೆಟ್ʼನಲ್ಲಿ 16,396 ಕೋಟಿ ರೂ.ಗಳನ್ನು ಶಿಕ್ಷಣ ವಲಯಕ್ಕೆ ಕೊಟ್ಟಿದ್ದಾರೆ. 8,685 ಕೋಟಿ ರೂ. ಅನ್ನು ಆರೋಗ್ಯ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಕೇಜ್ರಿವಾಲ್ ಸರ್ಕಾರದ ಟ್ರೇಡ್ಮಾರ್ಕ್ ಎನಿಸಿರುವ ಮೊಹಲ್ಲಾ ಕ್ಲಿನಿಕ್ಗಳಿಗೆ 212 ಕೋಟಿ ರೂ ಕೊಡಲಾಗಿದೆ.

ಮಹಿಳೆಯರಿಗೆ ಮಾಸಿಕ 1,000 ರೂ ನೀಡುವುದು ಈ ಬಾರಿಯ ಬಜೆಟ್‌ʼನ ಮುಖ್ಯ ಅಂಶವಾಗಿದೆ. ಹಾಗೆಯೇ, ವಿದ್ಯುತ್ ಬಿಲ್ ಸಬ್ಸಿಡಿ ಮುಂದುವರಿಯುತ್ತಿದೆ. 2023ರಲ್ಲಿ 3.41 ಕೋಟಿ ಗ್ರಾಹಕರಿಗೆ ಶೂನ್ಯ ವಿದ್ಯುತ್ ಬಿಲ್ ನೀಡಲಾಗಿತ್ತು. ಅದು ಮುಂದುವರಿಯಲಿದೆ ಎಂದು ಆತಿಶಿ ಸ್ಪಷ್ಟಪಡಿಸಿದ್ದಾರೆ.

Rs.1000 per month for women above 18 years: Announced in the budget

• ಶಿಕ್ಷಣ ಕ್ಷೇತ್ರ: 16,400 ಕೋಟಿ ರೂ
• ಆರೋಗ್ಯ ಕ್ಷೇತ್ರ: 8,685 ಕೋಟಿ ರೂ
• ದೆಹಲಿ ಜಲ ಮಂಡಳಿ: 7,195 ಕೋಟಿ ರೂ
• ಸಾಮಾಜಿಕ ಕಲ್ಯಾಣ ಇಲಾಖೆ, ಎಸ್ಸಿ ಎಸ್ಟಿ ಒಬಿಸಿ ಕಲ್ಯಾಣ ಇಲಾಖೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳಿಗೆ 6,216 ಕೋಟಿ ರೂ ಕೊಡಲಾಗಿದೆ.
• ಸಾರ್ವಜನಿಕ ಸಾರಿಗೆ: 5,702 ಕೋಟಿ ರೂ

You might also like
Leave A Reply

Your email address will not be published.