ಎಂಎಸ್‌ ಧೋನಿ ನಡೆ ನಿಗೂಢ – ಈ ಐಪಿಎಲ್‌ʼನಲ್ಲಿ ಧೋನಿ ಆಟವಾಡ್ತಾರಾ?

ಐಪಿಎಲ್ 2024 ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಉಳಿದಿದ್ದು, ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಅದರಲ್ಲೂ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಅಭಿಮಾನಿಗಳ ಕಾತರಕ್ಕೆ ಕೊನೆಯೇ ಇಲ್ಲ. ಆದರೆ, ಎಂಎಸ್ ಧೋನಿ ತಮ್ಮ ಫೇಸ್ಬುಕ್ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದು, ಕೆಲವರಲ್ಲಿ ಆತಂಕವೂ ಸೃಷ್ಟಿಸಿದೆ. ದೋನಿ ನೀಡಿರುವ ಹೊಸ ಜವಾಬ್ದಾರಿಯ ಸುಳಿವು ಅಭಿಮಾನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಅವರು ನೀಡಿದ ಸುಳಿವಾದರು ಏನು?

ಐಪಿಎಲ್ ಆರಂಭಕ್ಕೆ ಕೆಲ ದಿನಗಳಿರುವಾಗಲೇ ಧೋನಿ ಫೇಸ್ಬುಕ್ ಮೂಲಕ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಎಂ.ಎಸ್ ಧೋನಿ “ಹೊಸ ಆವೃತ್ತಿಯಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಇನ್ನು ಹೆಚ್ಚು ದಿನ ಕಾಯಲು ಸಾಧ್ಯವಿಲ್ಲ. ನೀವು ಕಾಯುತ್ತಿರಿ” ಎಂದು ಫೇಸ್ಬುಕ್ ಮೂಲಕ ಸಂದೇಶ ನೀಡಿದ್ದಾರೆ.

ಧೋನಿ ಅವರ ಈ ಸಂದೇಶ ಸಾರ್ವಜನಿಕರಲ್ಲಿ ಹಲವು ರೀತಿಯ ಯೋಚನೆಗಳಿಗೆ ಎಡೆ ಮಾಡಿಕೊಟ್ಟಿದೆ. ಅದೇನೆಂದರೆ, ಐಪಿಎಲ್ 2024ರಲ್ಲಿ ಧೋನಿ ತಮ್ಮ ಫಿಟ್ನೆಸ್ ಹಾಗೂ ಮೊಣಕಾಲಿನ ಗಾಯವನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವ ಹಾಗೂ ಕ್ರಿಕೆಟ್ ಆಟದಿಂದ ಹಿಂದೆ ಸರಿಯುತ್ತಾರಾ? ಅಥವಾ ಧೋನಿ ನಾಯಕತ್ವ ತ್ಯಜಿಸಿ, ತಂಡದ ಮೆಂಟರ್, ತಂಡದ ಸಲಹೆಗಾರನಾಗಿ ಅಥವಾ ಇತರ ರೂಪದಲ್ಲಿ ಜವಾಬ್ದಾರಿ ವಹಿಸಿಕೊಳ್ಳುತ್ತಾರಾ? ಅನ್ನೋ ಚರ್ಚೆಗಳು ಶುರುವಾಗಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಕಳೆದ ಐಪಿಎಲ್ ಫೈನಲ್ ಬಳಿಕ ನಿವೃತ್ತಿ ಮಾತು ತಳ್ಳಿ ಹಾಕಿದ ಧೋನಿ, 2024ರ ಐಪಿಎಲ್ ಟೂರ್ನಿಯಲ್ಲಿ ಆಡಲು ಪ್ರಯತ್ನಿಸುವುದಾಗಿ ಹೇಳಿದ್ದರು. ಇಷ್ಟೇ ಅಲ್ಲ ನಾಯಕತ್ವ ವಹಿಸಿಕೊಳ್ಳುವ ಕುರಿತು ಯಾವುದೇ ಖಚಿತತೆ ಕೂಡ ನೀಡಿಲ್ಲ. ಸದ್ಯ ಫೇಸ್ಬುಕ್ನಲ್ಲಿ ಧೋನಿ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಧೋನಿ ಐಪಿಎಲ್ ಟೂರ್ನಿ ಅಥವಾ ಇನ್ಯಾವುದಾದರೂ ಹೊಸ ಜವಾಬ್ದಾರಿ ಕುರಿತು ಮಾತನಾಡಿದ್ದಾರಾ ಅನ್ನೋ ಕುರಿತು ಯಾವುದೇ ಸ್ಪಷ್ಟತೆ ಕೂಡ ಇಲ್ಲ.

ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ. ಫಿಟ್ ಅಂಡ್ ಫೈನ್ ಆಗಿರುವ ಧೋನಿ ಈ ಆವೃತ್ತಿಯಲ್ಲಿ ಕಾಣಿಸಿಕೊಳ್ಳೊ ಸಾಧ್ಯತೆ ಕೂಡ ತುಸು ಹೆಚ್ಚಾಗೆ ಇದೆ. ಇದರೊಂದಿಗೆ 2024ರ ಐಪಿಎಲ್ ಟೂರ್ನಿ ಮೂಲಕ ಕ್ರಿಕೆಟ್ನಿಂದ ನಿವೃತ್ತಿ ಪಡೆಯುವ ಸಾಧ್ಯತೆ ಕೂಡ ಇದೆ ಎಂದೇ ಹೇಳಬಹುದು.

You might also like
Leave A Reply

Your email address will not be published.