ವರ್ಕ್ ಫ್ರಂ ಹೋಂ ಕೆಲಸ – ₹160 ಕೋಟಿ ವಂಚಿಸಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಉದ್ಯೋಗ ಇಲ್ದೆ ಜೀವನವೇ ಇಲ್ಲ ಎಂಬುವಷ್ಟರ ಮಟ್ಟಿಗೆ ಕಾಲಮಾನ ಬದಲಾಗುತ್ತಿದೆ. ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಇದನ್ನೆ ಲಾಭ ಮಾಡಿಕೊಳ್ಳಲು ಹೊರಟಿರುವ ವಂಚಕರು ಪಾರ್ಟ್ ಟೈಮ್, ವರ್ಕ್ ಫ್ರಂ ಹೋಮ್ ಹೆಸರಲ್ಲಿ ಲಕ್ಷ ಲಕ್ಷ ವಂಚನೆ ಮಾಡುತ್ತಿರುವುದು ತುಸು ಹೆಚ್ಚಾಗೆ ಇದೆ. ಅಂದ ಹಾಗೆ ಈ ಬಾರಿಯು ಸೈಬರ್ ವಂಚಕರು ಮಹಿಳಾ ಇಂಜಿನೀಯರ್ಗೆ ಆಮಿಷವೊಡ್ಡಿ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಏನದು ಪ್ರಕರಣ?

 

ನೀವು ಜಾಬ್ ಹುಡುಕುತ್ತಿದ್ದೀರಾ? ಇಲ್ಲಿದೆ ಕೆಲಸ! ಅದು ವರ್ಕ್ ಫ್ರಂ ಹೋಮ್ ಎಂದು ಕೆಲಸದ ಆಮಿಷವೊಡ್ಡಿ ಸೈಬರ್ ವಂಚಕರು ಮಹಿಳಾ ಇಂಜಿನೀಯರ್ಗೆ ಲಕ್ಷ ಲಕ್ಷ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಎಚ್.ಎ.ಎಲ್ ನಿವಾಸಿಯಾಗಿರುವ ನಿಶಾ ಯಾದವ್(36) ಎಂಬುವವರು ವಂಚನೆಗೊಳಗಾದ ಮಹಿಳೆ. ಜಾಬ್ ಅಲೆದಾಟದಲ್ಲಿ ಸುಸ್ತಾಗಿ ಕುಗ್ಗೊಗಿದ್ದ ಈಕೆ ಯಾವುದೋ ಒಂದು ಕೆಲಸ ಸಿಕ್ರೆ ಸಾಕು ಎನ್ನುತಿರುವಾಗ, ಸೈಬರ್ ವಂಚಕರ ಮಾತುಗಳನ್ನು ನಂಬಿ 18 ಲಕ್ಷ ರೂ. ಕಳೆದುಕೊಂಡಿದ್ದಾರೆ. ತದನಂತರ ಈ ಮಹಿಳೆ, ಸೈಬರ್ ಕಳ್ಳರು ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಬಗ್ಗೆ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

cyber crime

ವಂಚನೆ ಮಾಡಿದ್ದು ಹೇಗೆ?

ಮಹಿಳೆ ಮೊಬೈಲ್ ನಂಬರ್ ಕಲೆಕ್ಟ್ ಮಾಡಿಕೊಂಡಿರುವ ಖದೀಮರು ಮೊದಲಿಗೆ ವರ್ಕ್ ಫ್ರಂ ಹೋಮ್ ಕೆಲಸ ಇದೆ ಎಂದು ಸಂದೇಶ ಕಳಿಸಿದ್ದಾರೆ. ಬಳಿಕ ಟೆಲಿಗ್ರಾಂ ಲಿಂಕ್ ಕಳಿಸಿ ಇದರಲ್ಲಿ ಜಾಯಿನ್ ಆಗುವಂತೆ ಮಹಿಳೆಗೆ ತಿಳಿಸಿದ್ದಾರೆ. ವಂಚಕರು ತಿಳಿಸಿದಂತೆ ಜಾಯಿನ್ ಆಗಿದ್ದಾರೆ.

ನಂತರ ಅಶ್ವಿನಿ ಎಂಬ ಹೆಸರಿನಲ್ಲಿ ನಿಶಾಗೆ ಒಂದು ಸಂದೇಶ ಬಂದಿದೆ. 17 ಉಚಿತ ಟಾಸ್ಕ್ ಹಾಗೂ 5 ಶುಲ್ಕ ಪಾವತಿಸುವ ಟಾಸ್ಕ್ ಇರುತ್ತದೆ. ಪ್ರತಿ ಟಾಸ್ಕ್ ಗೆ 50 ರೂ. ಶುಲ್ಕ ಇದೆ. ನೀವು ಟಾಸ್ಕ್ ಕಂಪ್ಲಿಟ್ ಮಾಡಲು ಹಣ ಕಳುಹಿಸಬೇಕಾಗುತ್ತದೆ ಎಂದು ನಂಬಿಸಿದ್ದಾರೆ. ಮಹಿಳೆ ವಂಚಕರ ಮಾತು ನಂಬಿ ಅದರಂತೆ ಮೊದಲಿಗೆ 7.82 ಲಕ್ಷ ರೂ. ಕಳಿಸಿರುವ ನಿಶಾ ಬಳಿಕ ಹಂತಹಂತವಾಗಿ 18 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.

ಹಣ ಪಡೆದ ಬಳಿಕ ಯಾವುದೇ ಕೆಲಸ ನೀಡಿಲ್ಲ, ಈತ್ತ ಹಣವೂ ವಾಪಸ್ ಬಂದಿಲ್ಲ. ತಾವು ಸೈಬರ್ ವಂಚಕರಿಂದ ಮೋಸಹೋಗಿದ್ದೇನೆ ಎಂದು ತಿಳಿಯುತ್ತಿದ್ದಂತೆ ಶಾಕ್ ಆಗಿರುವ ಮಹಿಳೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇದೀಗ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

You might also like
Leave A Reply

Your email address will not be published.