ಗ್ರ್ಯಾಮಿ ಅವಾರ್ಡ್ ಪ್ರಕಟ – ಭಾರತಕ್ಕೆ ಮೂರು ಪ್ರಶಸ್ತಿಗಳು

ಇಂದು 66ನೇ ಸಾಲಿನ ಗ್ರ್ಯಾಮಿ ಅವಾರ್ಡ್ (Grammy Award) ಪ್ರಶಸ್ತಿ ಪ್ರಕಟವಾಗಿದ್ದು, ಭಾರತಕ್ಕೆ ಮೂರು ಪ್ರಶಸ್ತಿಗಳು ಸಂದಿವೆ. ದಿ ಮೂಮೆಂಟ್ ಆಲ್ಬಂಗಾಗಿ ಖ್ಯಾತ ಸಂಗೀತಗಾರ ಉಸ್ತಾದ್ ಜಾಕಿರ್ ಹುಸೇನ್ (Zakir Hussain) ಅವರ ಬ್ಯಾಂಡ್ ಶಕ್ತಿಗೆ ಪ್ರಶಸ್ತಿ ಬಂದಿದ್ದು, ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂನಲ್ಲಿ ಈ ಪ್ರಶಸ್ತಿ ಸಂದಿದೆ.

Zakir Hussain

ರಾಕೇಶ್ ಚೌರಾಸಿಯಾಗೆ (Rakesh Chaurasi) ಎರಡು ಗ್ರ್ಯಾಮಿ ಅವಾರ್ಡ್ ದೊರಕಿದ್ದು, ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಹಾಗೂ ವಾದ್ಯಗಳ ವಿಭಾಗದಲ್ಲಿ ಈ ಎರಡು ಪ್ರಶಸ್ತಿಗಳನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಹಲವಾರು ಪ್ರಶಸ್ತಿಗಳು ಬೇರೆ ಬೇರೆ ಸಂಗೀತಗಾರರು ಪಡೆದುಕೊಂಡಿದ್ದಾರೆ.

Rakesh Chaurasi

ಭಾರತಕ್ಕೆ ಈ ಬಾರಿ ಮೂರು ಗ್ರ್ಯಾಮಿ ಪ್ರಶಸ್ತಿಗಳು ಬಂದಿರುವುದಕ್ಕೆ ರಿಕಿ ಕೇಜ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಯ ಸಂದೇಶವನ್ನು ಹಂಚಿಕೊಂಡಿದ್ದಾರೆ.

ರಿಕ್ಕಿ ಕೇಜ್ ಟ್ವೀಟ್

ಅತ್ಯುತ್ತಮ ನವ ಕಲಾವಿದ ಅವಾರ್ಡ್ ವಿಕ್ಟೋರಿಯಾ ಮೊನೆಟ್ಗೆ ದೊರೆತಿದೆ. ಬೆಸ್ಟ್ ಪಾಪ್ ವೋಕಲ್ ಆಲ್ಬಂ ಅವಾರ್ಡ್ ಟೈಲರ್ ಸ್ವಿಫ್ಟ್ ಪಡೆದಿದ್ದಾರೆ. ಅತ್ಯುತ್ತಮ ಪಾಪ್ ಸೋಲೋ ಪರ್ಫಾರ್ಮೆನ್ಸ್ ಅವಾರ್ಡ್ ಮೈಲಿ ಸೈರಸ್ ಅವರ ‘ಫ್ಲವರ್ಸ್’ ಆಲ್ಬಂಗೆ ಸಿಕ್ಕಿದೆ. ಅತ್ಯುತ್ತಮ ಗ್ಲೋಬಲ್ ಮ್ಯೂಸಿಕ್ ಆಲ್ಬಂ ‘ದಿಸ್ ಮೂಮೆಂಟ್’ ಸಿದ್ಧಪಡಿಸಿದ ಶಕ್ತಿ ತಂಡಕ್ಕೆ ಸಿಕ್ಕಿದೆ. ರಾಕೇಶ್ ಚೌರಾಸಿಯಾ ಅವರು ಎರಡು ಅವಾರ್ಡ್ ಪಡೆದು ಬೀಗಿದ್ದಾರೆ. ರಾಕೇಶ್ ಚೌರಾಸಿಯಾ ಅವರು ಕೊಳಲು ವಾದಕರು. ಇವರು ಹರಿಪ್ರಸಾದ್ ಚೌರಾಸಿಯಾ ಅವರ ಸಂಬಂಧಿ ಆಗಿದ್ದಾರೆ.

ರಾಕೇಶ್ ಚೌರಾಸಿಯಾ ಹಾಗೂ ಶಕ್ತಿ ಬ್ಯಾಂಡ್ಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಶುಭಾಶಯ ತಿಳಿಸಲಾಗುತ್ತಿದೆ. ಈ ಮೊದಲು ಭಾರತದ ಅನೇಕರು ಗ್ರ್ಯಾಮಿ ಅವಾರ್ಡ್ ಪಡೆದು ಬೀಗಿದ್ದಾರೆ.

You might also like
Leave A Reply

Your email address will not be published.