SSLC ಪರೀಕ್ಷಾ ವೇಳಾಪಟ್ಟಿ ಪ್ರಕಟ – ಒಂದು ಕೋಮಿನ ಓಲೈಕೆ, ಶಾಲೆಗಳಿಗೂ ಕಾಲಿಟ್ಟ ರಾಜಕೀಯ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಫೆಬ್ರುವರಿ 26, ಸೋಮಾವಾರರಿಂದ ಪ್ರಾರಂಭವಾಗಿ ಮಾರ್ಚ್ 02 ಶನಿವಾರದವರೆಗೆ ನಡೆಯಲಿದೆ. ಈ ಪರೀಕ್ಷೆ ಆರಂಭಕ್ಕೆ ಇನ್ನೂ ಒಂದು ತಿಂಗಳಷ್ಟೇ ಬಾಕಿ ಇದೆ. ಆದರೆ, ಈ ಭಾರಿ ಮುಸಲ್ಮಾನರ ಓಲೈಕೆಗೆ ಮಕ್ಕಳ ಪರೀಕ್ಷೆಗಳಲ್ಲೂ ಧರ್ಮ ಎಣಿಸುತ್ತಿದ್ದಾರೆಯೇ? ಪರೀಕ್ಷೆಗೂ, ಧರ್ಮಕ್ಕೂ ಏನಿದೆ ಸಂಬಂಧ?

ಹೌದು ಅಥವಾ ಇಲ್ಲ ಎಂಬುದರ ಚರ್ಚೆ ಮಾಡುವುದ್ದಕ್ಕಿಂತಲೂ ಈ ವೇಳಪಟ್ಟಿ ನೋಡುವಾಗ ಸಾಮಾನ್ಯವಾಗಿ ಕಣ್ಣಿಗೆ ಬೀಳುವ ಅಂಶವೇನೆಂದರೆ, 2024ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಫೆ.26 ರ ಸೋಮವಾರದಿಂದ ಪ್ರಾರಂಭವಾದ ಪರೀಕ್ಷೆಗಳು ಮಾ.02 ರ ಶನಿವಾರ ಮುಗಿಯಲಿದೆ. ಪ್ರತಿನಿತ್ಯ ಬೆಳಿಗ್ಗೆ 10.15ಕ್ಕೆ ಪ್ರಾರಂಭವಾಗುವ ಪರೀಕ್ಷೆಗಳು ಶುಕ್ರವಾರ ಮಾತ್ರ ಮಧ್ಯಾಹ್ನ 2 ಗಂಟೆಗೆ ವಿಜ್ಞಾನದ ಪರೀಕ್ಷೆಯನ್ನು ಪ್ರಕಟಿಸಿದ್ದು, ಹಲವರಲ್ಲಿ ಗೊಂದಲ ಪ್ರಾರಂಭವಾಗಿದೆ.

ಉಳಿದ ದಿನಗಳಲ್ಲಿ ಬೆಳಿಗ್ಗೆ 10.15 ಕ್ಕೆ ಪ್ರಾರಂಭವಾಗುವ ಪರೀಕ್ಷೆಗಳು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಇಡುವುದ್ಯಾಕೆ? ಅಂದಿನ ದಿನ ಯಾವುದಾದರು ಹಬ್ಬಗಳಿವೆಯೇ ಎಂದರೆ ಇಲ್ಲ. ವಿಶೇಷವಾದ ಕಾರಣವಿದೆಯೇ ಎಂಬುದಾದರೆ ಅದು ಇಲ್ಲ. ಮತ್ಯಾಕೆ ಶುಕ್ರವಾರದ ವಿಜ್ಞಾನ ಪತ್ರಿಕೆಯನ್ನು ಮಾತ್ರ ಮಧ್ಯಾಹ್ನ 2 ಗಂಟೆಗೆ ಇಟ್ಟಿದ್ದು ಎಂಬ ಪ್ರಶ್ನೆ ಸಹಜವಾಗೆ ಮೂಡುತ್ತದೆ.

SSLC Exam Time Table Announced: A communal affair, Politics in schools

ನಮಾಜ್ ಗಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಸಮಯ ಬದಲು:

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕದಲ್ಲಿ ಮೇಲಿಂದ ಮೇಲೆ ಔರಂಗಜೇಬನ ಪುನಃಸೃಷ್ಟಿ ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ. ಸುಲ್ತಾನ್, ಔರಂಗಜೇಬ, ಬಾಬರನ ಆಡಳಿತ ಮತ್ತೆ ಆರಂಭ ಮಾಡುವ ಕಾಂಗ್ರೆಸಿಗರ ಸಂಚು ಇದೀಗ ಎಷ್ಟು ಹೀನಾಯ ಮಟ್ಟಕ್ಕೆ ಹೋಗಿದೆ ಎಂದರೆ ತಪ್ಪಾಗಲಾರದು. ರಾಜ್ಯದಲ್ಲಿ ಮತ್ತೆ ಮುಸ್ಲಿಂ ತುಷ್ಟೀಕರಣವನ್ನು ಶಿಕ್ಷಣ ಕ್ಷೇತ್ರದಲ್ಲೂ ಕಾಂಗ್ರೆಸ್ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿ.

ಬೆಳಿಗ್ಗಿನ ನಮಾಜ್ಗೆ ಅನುಕೂಲ ಮಾಡಿಕೊಡಲು ಪರೀಕ್ಷೆಯ ವೇಳಾಪಟ್ಟಿಯನ್ನೇ ಸರಕಾರ ಬದಲಾಯಿಸಿದೆ. ಶಿಕ್ಷಣ ಕ್ಷೇತ್ರದಲ್ಲೂ ನೇರವಾಗಿ ಸರ್ಕಾರ ಮುಸ್ಲಿಂ ತುಷ್ಠೀಕರಣದ ನಡೆಸುತ್ತಿದೆ ಎಂದು ಹಿಂದೂ ಮುಖಂಡರು ಖಂಡಿಸಿದ್ದು, ಶಿಕ್ಷಣ ಇಲಾಖೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಈ ಕುರಿತು ಹಿಂದೂ ಮುಖಂಡ ಭಾಸ್ಕರನ್‌ ಮಾತನಾಡಿ, ಶಿಕ್ಷಣದಲ್ಲೂ ರಾಜಕೀಯ ಬೆಳೆಯುತ್ತಿದೆ. ಎಲ್ಲ ಧರ್ಮಗಳನ್ನು ಸರ್ಕಾರ ಸಮಾನವಾಗಿ ನೋಡಬೇಕು. ಆದರೆ, ಹಿಂದೂ- ಮುಸ್ಲಿಮರ ನಡುವೆ ಕಂದಕ ಸೃಷ್ಟಿಸಲು ಕಾಂಗ್ರೆಸ್‌ ಸರ್ಕಾರ ಯತ್ನಿಸುತ್ತಿದೆ. ಇದು ತಾಂತ್ರಿಕ ಕಾರಣಗಳಿಗೆ ಈ ರೀತಿ ಮಾಡಿದಂತಿಲ್ಲ. ಮುಸ್ಲಿಮರ ಓಲೈಕೆಗೆ ಶಾದಿ ಭಾಗ್ಯ ಮಾಡಿದ್ದ ಇವರು, ಈಗ ಶಾಲಾ ಕೊಠಡಿಗಳಲ್ಲಿ ನಮಾಜ್‌ಗೂ ಅವಕಾಶ ಮಾಡಿಬಿಡಲಿ ಎಂದು ವಾಗ್ದಾಳಿ ನಡೆಸಿದರು.

ಧರ್ಮದ ತುಷ್ಠೀಕರಣ ಇಲ್ಲ ಎಂದ ಕರ್ನಾಟಕ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ

ಮಾರ್ಚ್ 1ರಂದು ಪಿಯುಸಿ ಮುಖ್ಯ ಪರೀಕ್ಷೆ ನಡೆಯಲಿದ್ದು, ಅದೇ ದಿನ ಶುಕ್ರವಾರ ಕನ್ನಡ ಹಾಗೂ ಅರೇಬಿಕ್ ಪರೀಕ್ಷೆ ಇದೆ. ಬೆಳಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಿ 1.30ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಮಾರ್ಚ್ 1 ರಂದು ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಪ್ರಾರಂಭ ಮಾಡಲಾಗಿದೆ. ಯಾವುದೇ ನಮಾಜ್‌ಗೆ ಅನುಕೂಲ ಹಾಗೂ ಧರ್ಮದ ತುಷ್ಠೀಕರಣ ಇಲ್ಲ ಎಂದು ಕರ್ನಾಟಕ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಹಿನ್ನಲೆ ನಾಳೆ ಈ ಬಗ್ಗೆ ಇಲಾಖೆಯಿಂದ ಅಧಿಕೃತ ಸ್ಪಷ್ಟಿಕರಣ ನೀಡುವ ಸಾಧ್ಯತೆಯಿದೆ.

SSLC Exam Time Table Announced: A communal affair, Politics in schools

ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಪಟ್ಟಿ ನೋಡೋಣ ಬನ್ನಿ!

1. 26-02-2024 (ಸೋಮವಾರ) – ಪ್ರಥಮ ಭಾಷೆ – ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ.
2. 27-02-2024 (ಮಂಗಳವಾರ) – ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ
3. 28-02-2024 (ಬುಧವಾರ) – ತೃತೀಯ ಭಾಷೆ – ಕನ್ನಡ, ತೆಲುಗು, ಹಿಂದಿ (ಎನ್‌ಸಿಇಆರ್‌ಟಿ), ಮರಾಠಿ, ತಮಿಳು, ಉರ್ದು, ಇಂಗ್ಲಿಷ್, , ಸಂಸ್ಕೃತ.
4. 29-02-2024 (ಗುರುವಾರ) – ಕೋರ್ ಸಬ್ಜೆಕ್ಟ್‌ – ಗಣಿತ
5. 01-03-2024 (ಶುಕ್ರವಾರ) – ಕೋರ್ ಸಬ್ಜೆಕ್ಟ್‌ – ವಿಜ್ಞಾನ
6. 02-03-2024 (ಶನಿವಾರ) – ಕೋರ್ ಸಬ್ಜೆಕ್ಟ್‌ – ಸಮಾಜ ವಿಜ್ಞಾನ

You might also like
Leave A Reply

Your email address will not be published.