ಬೆಸ್ಕಾಂ ಸಾರ್ವಜನಿಕರ ಸುರಕ್ಷತೆಗೆ ಹೇಗೆ ಸಹಕರಿಸುತ್ತಿದೆ ಹಾಗೂ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಗೊತ್ತೇ?

ಭಾರತದಲ್ಲಿ‌ ಅಧಿಕ ಜನರು ವಿದ್ಯುತ್ ಅವಘಡಗಳಿಂದ ಮರಣ ಹೊಂದುತ್ತಿದ್ದು, ಎನ್‌ಸಿಆರ್‌ಬಿ ಅಂಕಿ-ಅಂಶಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ (2011-2020) ವಿದ್ಯುತ್ ಅವಘಡಗಳಿಂದ ದಿನಕ್ಕೆ ಸರಾಸರಿ 30-34 ಸಾವುಗಳು ಸಂಭವಿಸಿವೆ. ಬೆಸ್ಕಾಂ ಹಲವಾರು ವಿದ್ಯುತ್ ಜಾಗೃತಿ ಹಾಗೂ ಮುಂಜಾಗೃತಾ ಕ್ರಮಗಳ ತರಬೇತಿಗಳನ್ನು ನೀಡುತ್ತಿದ್ದರೂ ಸಹ ವಿದ್ಯುತ್ ಅವಘಡಗಳು ಸಂಭವಿಸುತ್ತಿದ್ದು, ಸಾವು-ನೋವುಗಳು ಹೆಚ್ಚುತ್ತಿದೆ.

ಸಾರ್ವಜನಿಕರಲ್ಲದೆ ಬೆಸ್ಕಾಂನ ಸಿಬ್ಬಂದಿಗಳು ಅತ್ಯಂತ ಜಾಗರೂಕರಿರಬೇಕಾಗಿದ್ದು, ವಿದ್ಯುತ್ ಕಂಬಗಳನ್ನು ಹತ್ತುವಾಗ ಅಥವಾ ವಿದ್ಯುತ್ ಜಾಲದ ದುರಸ್ತಿ ನಡೆಸುವಾಗ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯವಾಗಿದೆ.

ಬೆಸ್ಕಾಂ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯುತ್ ಅವಘಡಗಳು ಸಂಭವಿಸುವುದರ ಬಗ್ಗೆ ಮತ್ತು ವಹಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತಾದ ಜಾಹೀರಾತುಗಳನ್ನು ದಿನನಿತ್ಯ ಪೋಸ್ಟ್ ಮಾಡುತ್ತಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ.

ಕೆಲವು ಬಾರಿ ನಮ್ಮ ನಿರ್ಲಕ್ಷ್ಯದಿಂದ ವಿದ್ಯುತ್ ಅವಘಡಗಳಿಂದ ಮರಣ ಹೊಂದುವ ಸಾಧ್ಯತೆ ಹೆಚ್ಚಿದ್ದು, ನಮ್ಮ ದಿನನಿತ್ಯ ಜೀವನದಲ್ಲಿ ವಿದ್ಯುತ್ ಅಪಾಯಗಳನ್ನು

ತಡೆಗಟ್ಟಲು ಈ ಕೆಳಗಿನ ಸಲಹಾ- ಸೂಚನೆಗಳನ್ನು ಪಾಲಿಸಬೇಕಾಗಿರುವುದು ಅವಶ್ಯವಾಗಿದೆ.

* ವಿದ್ಯುತ್ ತಂತಿಗಳ ಸಮೀಪ ಮಕ್ಕಳು ಗಾಳಿಪಟ ಹಾರಿಸದಂತೆ ಎಚ್ಚರವಹಿಸಿ.
* ವಿದ್ಯುತ್ ಕಂಬಗಳಿಗೆ ಬ್ಯಾನರ್, ಫ್ಲೆಕ್ಸ್’ಗಳನ್ನು ಕಟ್ಟದಿರಿ.
* ಒದ್ದೆ ಕೈಯಿಂದ ವಿದ್ಯುತ್ ಸ್ವಿಚ್’ಗಳನ್ನು ಸ್ಪರ್ಶಿಸದಿರಿ.
* ವಿದ್ಯುತ ತಂತಿಗಳು ಅಥವಾ ಗೈ ವಯರ್’ಗಳ ಮೇಲೆ ಬಟ್ಟೆಗಳನ್ನು ಒಣಗಿಸದಿರಿ.
* ಜಾನುವಾರುಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟದಿರಿ.
* ವಿದ್ಯುತ್ ಕಂಬಗಳ ಸಮೀಪ ಆಶ್ರಯ ಪಡೆಯದಿರಿ.
* ಮಕ್ಕಳು ವಿದ್ಯುತ್ ಉಪಕರಣಗಳನ್ನು ಬಳಸದಂತೆ ಎಚ್ಚರವಹಿಸಿ.
* ವಿದ್ಯುತ್ ಪರಿವರ್ತಕಗಳ ಹತ್ತಿರ ವಾಹನಗಳನ್ನು ನಿಲ್ಲಿಸದಿರಿ.
* ಮಕ್ಕಳು ವಿದ್ಯುತ್ ಉಪಕರಣಗಳನ್ನು ಬಳಸದಂತೆ ಎಚ್ಚರವಹಿಸಿ.
* ದೋಷಪೂರಿತ ವಿದ್ಯುತ್ ಉಪಕರಣಗಳನ್ನು ಮುಟ್ಟದಿರಿ.

How BESCOM is taking necessary precautions on electrical safety for citizens

ವಿದ್ಯುತ್ ಸುರಕ್ಷತೆಗಾಗಿ ಬೆಸ್ಕಾಂ ಕೈಗೊಂಡಿರುವ ಕ್ರಮಗಳು:
* ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ವಿದ್ಯುತ್ ಸುರಕ್ಷತೆಯ ಕುರಿತಾದ ಸ್ಪರ್ಧೆಗಳು.
* ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ.
* ಗ್ರಾಹಕ ಸಂವಾದ ಸಭೆಗಳಲ್ಲಿ ವಿದ್ಯುತ್ ಅವಘಡಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ.
* ವಿದ್ಯುತ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮ.
* ಅಪಾಯಕಾರಿ ವಿದ್ಯುತ್ ಸ್ಥಳಗಳನ್ನು ಗುರುತಿಸಿ, ಸರಿಪಡಿಸುವುದು.

ವಿದ್ಯುತ್ ಸುರಕ್ಷತೆಯ ಬಗ್ಗೆ ಸಾರ್ವಜನಿಕರು ಮಾತ್ರವಲ್ಲದೇ ಬೆಸ್ಕಾಂನ ಸಿಬ್ಬಂದಿಗಳೂ ಸಹ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದ್ದು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ.

ವಿದ್ಯುತ್ ಅವಘಡಗಳು ಸಂಭವಿಸಿದಲ್ಲಿ ಬೆಸ್ಕಾಂನ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ ತಿಳಿಸಿ.

ವಿದ್ಯುತ್ ಸುರಕ್ಷತಾ ಜಾಹೀರಾತುಗಳನ್ನು ನೋಡಲು ನಮ್ಮ ಅಧಿಕೃತ ಜಾಲತಾಣಗಳಿಗೆ ಭೇಟಿ ನೀಡಿ.

ಫೇಸ್ ಬುಕ್ – https://www.facebook.com/bescomblr
ಎಕ್ಸ್ – https://twitter.com/NammaBESCOM
ಇನ್ಸ್ಟಾಗ್ರಾಮ್ – https://www.instagram.com/namma_bescom/

You might also like
Leave A Reply

Your email address will not be published.