ಕುತೂಹಲ ಮೂಡಿಸಿದ ಭಾರತ-ನೇಪಾಳ ವಿದೇಶಾಂಗ ಸಚಿವರ ಭೇಟಿ

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾದ ಶ್ರೀ ಜೈಶಂಕರ್ ಅವರು ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವರಾದ ಶ್ರೀ ನಾರಾಯಣ ಪ್ರಕಾಶ್ ಸೌದ್ ಅವರನ್ನು ಕಠ್ಮಂಡುವಿನಲ್ಲಿ ಭೇಟಿಯಾದರು. ನೇಪಾಳ ಮತ್ತು ಭಾರತದ ಸಮಗ್ರ ಹಾಗೂ ಉತ್ಪಾದನೆಗಳ ಕುರಿತು ಚರ್ಚೆಯಾಗಿದ್ದು, ಒಟ್ಟಾರೆ ದ್ವಿಪಕ್ಷೀಯ ಮಾತುಕತೆಗಳು ನೆಲ, ರೈಲು ಮತ್ತು ವಾಯು ಸಂಪರ್ಕ ಸೇರಿದಂತೆ ವ್ಯಾಪಕ ಶ್ರೇಣಿಯ ಪ್ರದೇಶಗಳನ್ನು ಒಳಗೊಂಡಿದೆ. ರಕ್ಷಣಾ ಸಹಕಾರ, ಭದ್ರತೆ, ಶಕ್ತಿ, ನೀರು ಮತ್ತು ವಿದ್ಯುತ್ ಗಳು ಕೂಡಾ ಇದರಲ್ಲಿ ಸೇರಿಕೊಂಡಿವೆ.

 

ಈ ಭೇಟಿಯಲ್ಲಿ ಉಭಯ ದೇಶಗಳು ಕೆಲವು ದೀರ್ಘಕಾಲದ ಒಪ್ಪಂದಗಳಿದ್ದು, ಅದರಲ್ಲಿ ನೇಪಾಳದಿಂದ ಭಾರತಕ್ಕೆ ಮುಂದಿನ ಹತ್ತು ವರ್ಷಗಳಲ್ಲಿ 10,000 ಮೆಗಾವ್ಯಾಟ್ ವಿದ್ಯುತ್ ಆಮದು ಮಾಡಿಕೊಳ್ಳಲು ಸಹಿಹಾಕಿವೆ. ಇದಷ್ಟೇ ಅಲ್ಲದೇ, Implementation of high impact community development projects, ದೀರ್ಘಾವಧಿಯ ವಿದ್ಯುತ್ ವ್ಯಾಪಾರ, ನವೀಕರಿಸಬಹುದಾದ ಇಂಧನ ಅಭಿವೃದ್ಧಿಯಲ್ಲಿ ಸಹಕಾರ, ಮ್ಯೂನಲ್ ಉಪಗ್ರಹ ಮತ್ತು ಜಾರ್ಕೋಟ್ ಭೂಕಂಪದ ಪರಿಹಾರ ಪೂರೈಕೆಯ ಹಸ್ತಾಂತರದ ಕುರಿತು ಕೆಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇದಷ್ಟೇ ಅಲ್ಲದೇ ನಿನ್ನೆ ಸಂಜೆ ನೇಪಾಳದ ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡವನ್ನು ಭೇಟಿಯಾದ ಸಚಿವರು ಟಿ-ಟ್ವೆಂಟಿ ವಿಶ್ವಕಪ್ ‌ಗೆ ನೇಪಾಳ ತಂಡ ಆಯ್ಕೆಯಾದ ಕುರಿತು ಶುಭಾಶಯ ಕೋರಿ ಭಾರತದಿಂದ ಯಾವುದೇ ರೀತಿಯ ನೆರವು ನೀಡಲು ಸಿದ್ದ ಎಂದು ಹೇಳಿದರು‌.

 

ಇನ್ನು ಇಂದು ಬೆಳಿಗ್ಗೆ ನೇಪಾಳದ ಪ್ರಸಿದ್ದ ಮಂದಿರವಾದ ಪಶುಪತಿನಾಥಕ್ಕೆ ಭೇಟಿ ನೀಡಿದ ಸಚಿವರು, ಉಭಯ ದೇಶಗಳ ಯೋಗಕ್ಷೇಮಗಳ ಕುರಿತು ಪ್ರಾರ್ಥಿಸಿದ್ದಾಗಿ ಟ್ವೀಟ್ ಮಾಡಿದ್ದಾರೆ. ನೇಪಾಳವು ಹೊಸವರ್ಷ ಆರಂಭವಾದ ಬಳಿಕ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು ಭೇಟಿ ನೀಡಿದ ಮೊದಲ ರಾಷ್ಟ್ರವಾಗಿದೆ.

You might also like
Leave A Reply

Your email address will not be published.