ಪ್ರಯಾಣಿಕರಿಗೆ ಶಾಕ್‌ ಕೊಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ : ಶೇ.3 ರಿಂದ 25ರ ವರೆಗೆ ಟೋಲ್‌ ದರ ಹೆಚ್ಚಳ

ವಾಹನ ಬಳಕೆದಾರರು ಇಂದಿನಿಂದ ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್ ಮತ್ತು ತುಮಕೂರು-ಹೊನ್ನಾವರ ಹೆದ್ದಾರಿ ಮತ್ತು ಹೊಸ ಕೋಟೆ- ದೇವನಹಳ್ಳಿ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಬಳಸಲು ಶೇ. 3 ರಿಂದ ಶೇ. 25 ರಷ್ಟು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ ಎಂದು NHAI ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಬಿಪಿ ಬ್ರಹ್ಮಂಕರ್ ತಿಳಿಸಿದ್ದಾರೆ.

ಇದು ಏಪ್ರಿಲ್ 1 ರಂದು ಜಾರಿಗೆ ಬರಬೇಕಿತ್ತು ಆದರೆ ಲೋಕಸಭೆ ಚುನಾವಣೆಯ ಕಾರಣ ಮುಂದೂಡಲಾಗಿತ್ತು. ಹೊಸ ಶುಲ್ಕಗಳು ಮಾರ್ಚ್ 31, 2025 ರವರೆಗೆ ಜಾರಿಯಲ್ಲಿರುತ್ತವೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಬಳಸಲು ಶೇ. 3ರಷ್ಟನ್ನು ಹೆಚ್ಚಿಸಿದರೆ, ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಬಳಸುವ ವಾಹನಗಳು ಶೇ. 14 ರಷ್ಟು ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

39.6 ಕಿ. ಮೀ ಉದ್ದದ ಸ್ಟಾಟಲೈಟ್ ಟೌನ್ ರಿಂಗ್ ರಸ್ತೆಯ ದೊಡ್ಡಬಳ್ಳಾಪುರ- ಹೊಸಕೋಟೆ ವಿಭಾಗದಲ್ಲಿ 2023, ನವೆಂಬರ್ 17 ರಂದು ಟೋಲ್ ಸಂಗ್ರಹವನ್ನು ಆರಂಭಿಸಲಾಗಿತ್ತು. ದಾಬಸ್ ಪೇಟೆ- ದೊಡ್ಡಬಳ್ಳಾಪುರ ಸೆಕ್ಷನ್ ನಲ್ಲಿ (42 ಕಿ.ಮೀ) ಜೂನ್ 15ರ ನಂತರ ಟೋಲ್ ಸಂಗ್ರಹ ಆರಂಭವಾಗುವ ಸಾಧ್ಯತೆಯಿದೆ. ಅಲ್ಲದೇ, ಟೋಲ್ ಸಂಗ್ರಹಕ್ಕಾಗಿ ಏಜೆನ್ಸಿಯನ್ನು ಆಯ್ಕೆ ಮಾಡಲಾಗಿದ್ದು, ಶುಲ್ಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು, ಹುಲಿಕುಂಟೆ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ಸಂಗ್ರಹಿಸಲಾಗುವುದು ಎಂದು NHAI ಪ್ರಾಜೆಕ್ಟ್ ಡೈರೆಕ್ಟರ್ ಕೆ.ಬಿ. ಜಯಕುಮಾರ್ ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿ: ಈ ಹೆದ್ದಾರಿ ಬಳಸುವ ಕಾರು, ವ್ಯಾನ್ ಮತ್ತು ಜೀಪ್ ಗಳು ಒಂದು ಬಾರಿಗೆ ರೂ. 330 ಪಾವತಿಸಬೇಕಾಗುತ್ತದೆ. ಬೆಂಗಳೂರು-ನಿಡಘಟ್ಟ ಸೆಕ್ಷನ್ ವರೆಗೂ ರೂ. 170 ಮತ್ತು ನಿಡಘಟ್ಟ-ಮೈಸೂರು ನಡುವಣ ರೂ.160 ರೂ. ನಿಗದಿಪಡಿಸಲಾಗಿದೆ. ಕಣಿಮಿಣಿಕೆ (ಬೆಂಗಳೂರು ನಗರ) ಶೇಷಗಿರಿಹಳ್ಳಿ (ರಾಮನಗರ) ಮತ್ತು ಗಂಗನೂರು (ಮಂಡ್ಯ) ಬಳಿ ಟೋಲ್ ಸಂಗ್ರಹಿಸಲಾಗುವುದು.

National Highway Authority gave a shock to passengers: Toll rate increase from 3 to 25 percent

ದೊಡ್ಡಬಳ್ಳಾಪುರ-ಹೊಸಕೋಟೆ: ದೊಡ್ಡಬಳ್ಳಾಪುರ ಬೈಪಾಸ್ ಮತ್ತು ಹೊಸಕೋಟೆ ನಡುವೆ ರೂ. 80 (ಸಿಂಗಲ್ ಜರ್ನಿ) ರೂ.120 ( ರಿಟರ್ನ್ ಜರ್ನಿ, ರೂ 2,720 (ಕಾರು, ವ್ಯಾನ್ ಮತ್ತು ಜೀಪ್ ಗಳಿಗೆ ತಿಂಗಳಲ್ಲಿ 50 ಭಾರಿ ಪ್ರಯಾಣ) ಪಾವತಿಸಬೇಕಾಗುತ್ತದೆ. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿ ಬಸ್‌ಗಳು ಕ್ರಮವಾಗಿ ರೂ. 135 (ಸಿಂಗಲ್ ಜರ್ನಿ) ರೂ. 200 (ರಿಟರ್ನ್ ಜರ್ನಿ) ರೂ. 4,395 (50 ಜರ್ನಿ) ಪಾವತಿಸಬೇಕಾಗುತ್ತದೆ. ಟ್ರಕ್‌ಗಳು ಮತ್ತು ಬಸ್‌ಗಳು (ಎರಡು ಆಕ್ಸಲ್‌ಗಳು) ರೂ 275 (ಒಮ್ಮೆ ಪ್ರಯಾಣ) ರೂ 415 (ರಿಟರ್ನ್ ಜರ್ನಿ) ರೂ 9,205 (50 ಭಾರಿ ಜರ್ನಿ) ಪಾವತಿಸಬೇಕಾಗುತ್ತದೆ. ಟೋಲ್ ಪ್ಲಾಜಾದಿಂದ 20 ಕಿ.ಮೀ ಒಳಗಡೆ ವಾಣಿಜ್ಯೇತರ ವಾಹನಗಳು ತಿಂಗಳ ಪಾಸಿಗೆ ರೂ. 340 ಭರಿಸಬೇಕಾಗುತ್ತದೆ. ದೇವನಬಳ್ಳಿ ಬಳಿಯ ನಲ್ಲೂರು ಬಳಿ ಟೋಲ್ ಸಂಗ್ರಹಿಸಲಾಗುತ್ತದೆ.

ಬೆಂಗಳೂರು- ಹೈದರಾಬಾದ್ ಹೆದ್ದಾರಿ: ತುಮಕೂರು- ಹೊನ್ನಾವರ ಸಂಪರ್ಕಿಸುವ ಈ ಹೆದ್ದಾರಿ ಬಳಸುವ ಕಾರು, ಜೀಪ್, ವ್ಯಾನ್, ಲಘು ಸಾರಿಗೆಗಳು ರೂ. 115 (ಒಮ್ಮೆ ಪ್ರಯಾಣ) ರೂ. 175 (ರಿಟರ್ನ್ ಜರ್ನಿ) ಪಾವತಿಸಬೇಕಾಗುತ್ತದೆ. ಬಾಗೇಪಲ್ಲಿಯಲ್ಲಿ ಟೋಲ್ ಕೇಂದ್ರ ತೆರೆಯಲಾಗಿದೆ. ಇನ್ನೂ ರಾಷ್ಟ್ರೀಯ ಹೆದ್ದಾರಿ 206 ಬಳಸುವ ಕಾರು, ಜೀಪ್, ವ್ಯಾನ್, ಲಘು ವಾಹನಗಳು ರೂ. 60( ಸಿಂಗಲ್ ಜರ್ನಿ) ರೂ. 90 ( ರಿಟರ್ನ್ ಜರ್ನಿ) ಪಾವತಿಸಬೇಕು.

You might also like
Leave A Reply

Your email address will not be published.