ಮಗುವಿಗೆ ಹಲ್ಲು ಯಾವಾಗ ಮೂಡಿದರೆ ಉತ್ತಮ – ಇಲ್ಲಿದೆ ಮಾಹಿತಿ

ಮಗು ಬೆಳೆಯುತ್ತಿದ್ದಂತೆ ಅದರ ದೇಹದ ಪ್ರತಿಯೊಂದು ಭಾಗವು ಬೆಳೆಯುವುದು ಸರ್ವೇ ಸಾಮಾನ್ಯ. ಆದರೆ ಆ ಬೆಳವಣಿಗೆಯಲ್ಲಿ ಕೊಂಚವು ಏರಿಳಿತವಾಗದಂತೆ ನೋಡಿಕೊಳ್ಳುವುದು ಹಿರಿಯರ, ಪೋಷಕರ ಜವಾಬ್ದಾರಿಯಾಗಿರುತ್ತದೆ. ಮಗುವಿನ ಅಂಗಾಂಗಗಳ ಬೆಳವಣಿಗೆಗಳು ಎಷ್ಟು ಮುಖ್ಯವೋ ಹಾಗೆಯೇ ಅವುಗಳ ಹಲ್ಲುಗಳು ಸಹ ಅಷ್ಟೇ ಪ್ರಾಮುಖ್ಯತೆ ಹೊಂದುತ್ತವೆ. ಧಾರ್ಮಿಕ ಮತ್ತು ಜ್ಯೋತಿಷ್ಯ ಗ್ರಂಥಗಳಲ್ಲಿ, ಮಕ್ಕಳ ಹಲ್ಲು ಹುಟ್ಟುವ ಅವಧಿಯ ಬಗ್ಗೆ ಶುಭ ಮತ್ತು ಅಶುಭ ಚಿಹ್ನೆಗಳನ್ನು ಉಲ್ಲೇಖಿಸಲಾಗಿದೆ. ಈ ಗ್ರಂಥಗಳನ್ವಯ ಮಗುವಿಗೆ ಯಾವ ಸಮಯದಲ್ಲಿ ಹಲ್ಲು ಮೂಡಿಬಂದರೆ ಶುಭ ಮತ್ತು ಅಶುಭವಾಗುತ್ತದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ!

ಸಾಮಾನ್ಯವಾಗಿ ಒಂದು ಮಗು 5 ರಿಂದ 8 ತಿಂಗಳೊಳಗೆ ಹಲ್ಲನ್ನು ಪಡೆದುಕೊಳ್ಳುತ್ತದೆ. ಮಕ್ಕಳ ಹಲ್ಲುಗಳು 5 ತಿಂಗಳಿಂದ 8 ತಿಂಗಳೊಳಗೆ ಹೊರಹೊಮ್ಮುತ್ತವೆ, ಆದರೆ ಕೆಲವು ಮಕ್ಕಳು ಹುಟ್ಟಿದ 2-3 ತಿಂಗಳೊಳಗೆ ಹಲ್ಲುಗಳು ಮೂಡಿ ಬರಲು ಪ್ರಾರಂಭವಾಗುತ್ತದೆ. ಆದರೆ ಕೆಲವು ಮಕ್ಕಳ ಹಲ್ಲುಗಳು 8 ತಿಂಗಳ ನಂತರ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಯಾವ್ಯಾವ ತಿಂಗಳಲ್ಲಿ ಮಗುವಿಗೆ ಹಲ್ಲು ಹುಟ್ಟಿದರೆ ಅದರ ಹಿಂದಿರುವ ಧಾರ್ಮಿಕ ಹಿನ್ನೆಲೆ ಏನು?

1. ನಾಲ್ಕನೇ ತಿಂಗಳಲ್ಲಿ ಮಗುವಿಗೆ ಹಲ್ಲು ಮೂಡೂವುದರ ಸೂಚನೆ:

ಹುಟ್ಟಿದ ನಾಲ್ಕೇ ತಿಂಗಳಲ್ಲಿ ಮಗುವಿನ ಹಲ್ಲುಗಳು ಹೊರಹೊಮ್ಮಿದರೆ, ಅದನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಾಲ್ಕನೇ ತಿಂಗಳಲ್ಲಿ ಹಲ್ಲು ಹುಟ್ಟುವುದು ಮಗುವಿನ ಹಿರಿಯ ಒಡಹುಟ್ಟಿದವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು ಎಂಬುದನ್ನು ಸೂಚಿಸುತ್ತದೆ. ಇದರಿಂದ ಆ ಮಗುವಿನ ಅಣ್ಣ ಅಥವಾ ಅಕ್ಕಂದಿರು ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರ ಜೀವನದಲ್ಲಿ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಇದನ್ನು ಹೊರತುಪಡಿಸಿ, ಕೆಲ ತಜ್ಞರ ಪ್ರಕಾರ ನಾಲ್ಕನೇ ತಿಂಗಳಿಗೆ ಮಗುವಿನ ಹಲ್ಲು ಹುಟ್ಟುವುದರಿಂದ ತಾಯಿಯು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಸಹ ಹೇಳುತ್ತಾರೆ.

2. 6 ಮತ್ತು 7 ತಿಂಗಳ ಮಗುವಿನಲ್ಲಿ ಹಲ್ಲು ಮೂಡುವುದರ ಸೂಚನೆ:

ಹುಟ್ಟಿದ ಆರು ಮತ್ತು ಏಳನೇ ತಿಂಗಳಲ್ಲಿ ಮಗುವಿನ ಹಲ್ಲುಗಳು ಮೂಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಆರನೇ ತಿಂಗಳಲ್ಲಿ ಮಗುವಿನ ಹಲ್ಲುಗಳು ಮೂಡುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಏಳನೇ ತಿಂಗಳಲ್ಲಿ ಮಗುವಿನ ಹಲ್ಲುಗಳು ಹೊರಹೊಮ್ಮಿದರೆ, ಮಗುವಿನ ತಂದೆಯು ಜೀವನದಲ್ಲಿ ಶುಭ ಫಲಿತಾಂಶಗಳನ್ನು ಪಡೆಯಬಹುದು.

When is the best time for baby teething - here's the information

3. 9, 10, 11 ಮತ್ತು 12 ನೇ ತಿಂಗಳಲ್ಲಿ ಮಗುವಿಗೆ ಹಲ್ಲುಗಳು ಮೂಡುವುದರ ಸೂಚನೆ:

ಒಂಬತ್ತು ಮತ್ತು ಹತ್ತನೇ ತಿಂಗಳಲ್ಲಿ ಮಗುವಿನ ಹಲ್ಲುಗಳು ಹೊರಹೊಮ್ಮಿದರೆ, ಅದು ಅವನ ಭವಿಷ್ಯಕ್ಕೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಹನ್ನೊಂದನೇ ತಿಂಗಳಲ್ಲಿ ಮಗುವಿನ ಹಲ್ಲುಗಳು ಕಾಣಿಸಿಕೊಂಡರೆ, ಮಗುವಿನ ತಾಯಿಗೆ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ ಎಂದು ಹೇಳಲಾಗಿದೆ. ಹನ್ನೆರಡನೇ ತಿಂಗಳಲ್ಲಿ ಮಗುವಿನ ಹಲ್ಲುಗಳು ಮೂಡುವುದು ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಪರಿಗಣಿಸಲಾಗುತ್ತದೆ.

4. 2 ನೇ ತಿಂಗಳಲ್ಲಿ ಮಗುವಿಗೆ ಹಲ್ಲು ಮೂಡುವುದು ಅಶುಭ:

ಶಾಸ್ತ್ರದ ಪ್ರಕಾರ, ಎರಡನೇ ತಿಂಗಳಲ್ಲಿ ಮಗುವಿನ ಹಲ್ಲುಗಳು ಕಾಣಿಸಿಕೊಂಡರೆ, ಅದು ಒಳ್ಳೆಯ ಸಂಕೇತವಲ್ಲ. ಈ ರೀತಿಯಾದರೆ, ಮಗುವಿನ ಜೀವನದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತದೆ ಮತ್ತು ಕುಟುಂಬದ ಸ್ಥಿತಿಯು ಸಹ ಹದಗೆಡಬಹುದು. ಎಂಟನೇ ತಿಂಗಳಲ್ಲಿ ಮಗುವಿನ ಹಲ್ಲುಗಳು ಕಾಣಿಸಿಕೊಂಡರೆ, ಅದು ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಸಂಭವಿಸಿದಾಗ, ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆಯಿದೆ.

5. ಈ ರೀತಿ ಹಲ್ಲು ಮೂಡಿದರು ಶುಭವಲ್ಲ:

2ನೇ ತಿಂಗಳನ್ನು ಹೊರತುಪಡಿಸಿ, ಮಗುವಿನ ಮೇಲಿನ ಹಲ್ಲುಗಳು ಮೊದಲು ಬಂದರೆ ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಇದು ಮಗುವಿನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಅಂತಹ ಮಕ್ಕಳನ್ನು ಮತ್ತೆ ಮತ್ತೆ ತೊಂದರೆಗೆ ಸಿಲುಕಿಸುತ್ತದೆ. ಈ ಸಂದರ್ಭದಲ್ಲಿ, ಪೋಷಕರು ವೈದ್ಯರಿಂದ ಸರಿಯಾದ ಸಲಹೆಯನ್ನು ಪಡೆಯಬೇಕು.

ಧಾರ್ಮಿಕ ಮತ್ತು ಜ್ಯೋತಿಷ್ಯ ಗ್ರಂಥದಲ್ಲಿನ ಮಾಹಿತಿಯ ಪ್ರಕಾರ, ಮಗುವಿನ ಹಲ್ಲುಗಳು ಯಾವ ತಿಂಗಳುಗಳಲ್ಲಿ ಮೂಡತ್ತದೆ ಎಂಬುದು ಕೂಡ ಆ ಮಗುವಿನ ಮತ್ತು ಅದರ ಪೋಷಕರ ಜೀವನದ ಮೇಲೂ ಪ್ರಭಾವವನ್ನು ಬೀರುತ್ತದೆ.

You might also like
Leave A Reply

Your email address will not be published.