ಹಿಂದೂ ಸಂಪ್ರದಾಯದಂತೆ ನಡೆಸದ ವಿವಾಹ ನೋಂದಣಿಯಾಗಿದ್ದರೂ, ಸಿಂಧುವಲ್ಲ – ಸುಪ್ರೀಂಕೋರ್ಟ್

ಹಿಂದೂ ವಿವಾಹಗಳನ್ನು ಹಿಂದೂ ವಿವಾಹ ಕಾಯ್ದೆಯಡಿ ಸೂಚಿಸಲಾದ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ನಡೆಸಿರದಿದ್ದರೆ ಅಂತಹ ಮದುವೆಗಳನ್ನು ನೋಂದಾಯಿಸಿದ್ದರೂ ಅದನ್ನು ಅಸಿಂಧುಗೊಳಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಿಂದೂ ಮದುವೆಗಳು ಪವಿತ್ರ ಪ್ರತಿಕ್ರಿಯೆಯಾಗಿದ್ದು ಕೇವಲ ಊಟ, ಹಾಡು, ನೃತ್ಯಗಳ ಸಮಾರಂಭವಲ್ಲ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನು ಒಳಗೊಂಡ ಪೀಠವು ಗಮನಿಸಿದೆ‌.

ಹಿಂದೂ ವಿವಾಹಕಾಯ್ದೆ 1955ರ ಸೆಕ್ಷನ್ 7 ರ ಪ್ರಕಾರ ಹಿಂದೂ ವಿವಾಹದ ಆಚರಣೆಗಳ ಅಡಿಯಲ್ಲೇ ನಡೆದ ಮದುವೆಗಳು ಸಿಂಧುತ್ವವನ್ನು ಹೊಂದಿರುತ್ತವೆ. ಒಂದುವೇಳೆ ಅದನ್ನು ಅನುಸರಿಸಿರದಿದ್ದರೆ ಆ ಮದುವೆಗಳನ್ನು ಕಾನೂನಿನ ದೃಷ್ಟಿಯಲ್ಲಿ ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರಿಂ ಕೋರ್ಟ್ ಹೇಳಿದೆ.

ಸಪ್ತಪದಿ(ಹಿಂದೂ ವಿವಾಹದ ಪವಿತ್ರ ವಿಧಿ ವಿಧಾನ) ಯಂತಹ ವಿಧಿ ವಿಧಾನ ಆಚರಣೆಗಳಿಗೆ ಅನುಗುಣವಾಗಿ ವಿವಾಹಗಳು ನಡೆದಿರದಿದ್ದರೆ ಆ ಮದುವೆಯನ್ನು ಹಿಂದೂ ವಿವಾಹವೆಂದು ಪರಿಗಣಿಸಲಾಗುವುದಿಲ್ಲ. ಅಂದರೆ ಕಾಯಿದೆಯ ಅಡಿಯಲ್ಲಿ ಮಾನ್ಯವಾದ ಮದುವೆಗೆ ಅಗತ್ಯವಾದ ಕೆಲವು ಸಮಾರಂಭಗಳನ್ನು ನಿರ್ವಹಿಸಬೇಕು. ಒಂದುವೇಳೆ ಸಮಸ್ಯೆಗಳು ಉದ್ಭವವಾದಾಗ ನೀಡಲು ಸಮಾರಂಭದ ಪುರಾವೆಗಳಿರಬೇಕು. ಒಂದು ವೇಳೆ ಅಂತಹ ಯಾವುದೇ ಕುರುಹುಗಳು ಇರದಿದ್ದಲ್ಲಿ ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ನೀಡುವ ವಿವಾಹ ಪ್ರಮಾಣಪತ್ರಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ ಹಾಗೂ ಅದನ್ನು ಧೃಡಿಕರಿಸಲಾಗುವುದಿಲ್ಲ ಎಂದಿದೆ.

Marriage registration not conducted as per Hindu tradition, not Valid - Supreme Court
ಹಿಂದೂ ವಿವಾಹವು ಸಂಸ್ಕಾರಬದ್ಧವಾಗಿದ್ದು ಭಾರತೀಯ ಸಮಾಜದಲ್ಲಿ ಹೆಚ್ಚಿನ ಮೌಲ್ಯ ಹೊಂದಿದ್ದು, ಅದಕ್ಕೆ ಅದರದೇ ಆದ ಸ್ಥಾನಮಾನ ನೀಡಬೇಕಾಗಿದೆ. ಆದ್ದರಿಂದ ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ಮದುವೆಯಾಗ ಬಯಸುವ ಯುವಜನತೆಯು ಮೊದಲು ಈ ವಿವಾಹ ವಿಧಿವಿಧಾನಗಳು ಎಷ್ಟು ಪವಿತ್ರವಾದವುಗಳು ಎಂದು ಯೋಚಿಸಬೇಕಾಗಿದೆ.

ಈ ಮದುವೆಗಳು ಹಾಡು, ನೃತ್ಯ, ವೈನ್, ಊಟ ಅಥವಾ ಅನಗತ್ಯ ಒತ್ತಡದಿಂದ ವರದಕ್ಷಿಣೆ ಮತ್ತು ಉಡುಗೊರೆಗಳನ್ನು ಬೇಡಿಕೆಯಿಡುವ ಅಥವಾ ವಿನಿಮಯ ಮಾಡಿಕೊಳ್ಳುವ ಸಂಧರ್ಬವಲ್ಲ. ಮದುವೆ ಎನ್ನುವುದು ವಾಣಿಜ್ಯ ವಹಿವಾಟು ಅಲ್ಲ. ಭಾರತೀಯ ಸಮಾಜದಲ್ಲಿ ವಿಕಸನಗೊಳ್ಳುತ್ತಿರುವ ಕುಟುಂಬಕ್ಕೆ ಗಂಡ ಮತ್ತು ಹೆಂಡತಿಯ ಸ್ಥಾನಮಾನವನ್ನು ಪಡೆಯುವ ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧವನ್ನು ಸ್ಥಾಪಿಸಲು ಆಚರಿಸಲಾಗುವ ಗಂಭೀರವಾದ ಅಡಿಪಾಯ ಕಾರ್ಯಕ್ರಮವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ‌.

ತನ್ನ ವಿರುದ್ಧದ ವಿಚ್ಛೇದನ ಪ್ರಕ್ರಿಯೆಗಳನ್ನು ವರ್ಗಾಯಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

You might also like
Leave A Reply

Your email address will not be published.