ಲವ್‌ ಜಿಹಾದ್‌ : ಲೈಂಗಿಕವಾಗಿ ಬಳಸಿಕೊಂಡ ಶಾರುಖ್‌ ವಿರುದ್ಧ ದೂರು ದಾಖಲಿಸಿದ ಜೈನ್‌ ಯುವತಿ

ಲವ್ ಜಿಹಾದ್‌ನಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಒಟ್ಟಾರೆಯಾಗಿ ಸಮಾಜವನ್ನು ಬೆಚ್ಚಿಬೀಳಿಸುತ್ತಿವೆ. ಮಧ್ಯ ಪ್ರದೇಶದ ಇಂದೋರ್‌ನ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದ ಜೈನ್ ಯುವತಿಯೋರ್ವಳನ್ನು ತಾನು ಜೈನ್ ಎಂದು ಪರಿಚಯಿಸಿಕೊಂಡ ಮೊಹಮ್ಮದ್ ಶಾರುಖ್ ಶೇಖ್ ನಂತರ ಲವ್ ಜಿಹಾದ್‌ನಂತಹ ಕೃತ್ಯದಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

ಯಶ್ ಜೈನ್ ಎಂದು ಪರಿಚಯಿಸಿಕೊಂಡ ಶಾರುಖ್ ಆಕೆಗೆ ಮದುವೆಯ ಪ್ರಸ್ತಾಪವನ್ನು ಮಾಡಿದ್ದನು ಅಲ್ಲದೇ, ತನ್ನ ತಾಯಿಯ ತಂಗಿಯ(ಚಿಕ್ಕಮ್ಮ) ಮನೆಯಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾದಾಗ ಆಕೆಗೆ ಅನುಮಾನ ಬಂದು ಆತ ಮುಸ್ಲಿಂ ಮಾತ್ರವಲ್ಲ ಈಗಾಗಲೇ ಮದುವೆಯಾಗಿದ್ದಾನೆ ಎಂದು ತಿಳಿದು ಅದರ ಕುರಿತು ಮಾಹಿತಿ ಕಲೆ ಹಾಕಲು ಆರಂಭಿಸಿದಳು.

ಸಂತ್ರಸ್ತೆ ನೀಡಿದ ದೂರಿನಲ್ಲಿ, ಆರೋಪಿಯು ತನ್ನ ಹೆಸರನ್ನು ಬದಲಿಸಿಕೊಳ್ಳುವ ಮೂಲಕ ತನ್ನೊಂದಿಗೆ ಸ್ನೇಹ ಬೆಳೆಸಿದ ಹಾಗೂ ತನ್ನ ಧಾರ್ಮಿಕ ಗುರುತಿನ ಬಗ್ಗೆ ಸುಳ್ಳುಹೇಳಿದ್ದಾನೆ ಅಲ್ಲದೇ ಮದುವೆಯಾಗುತ್ತೇನೆ ಎಂದು ನಂಬಿಸಿ ಅದರ ಆಧಾರದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಹೇಳಿದ್ದಾಳೆ. ಬಾಲಕಿಯ ಹೇಳಿಕೆಯನ್ನು ಆಧರಿಸಿ ಮೊಹಮ್ಮದ್ ಶಾರುಖ್ ಶೇಖ್ ವಿರುದ್ಧ ಅತ್ಯಾಚಾರ ಪ್ರಕರಣವನ್ನು ಪೋಲಿಸರು ದಾಖಲಿಸಿಕೊಂಡಿದ್ದಾರೆ.

ಘಟನೆಯ ಕುರಿತು ವಿವರಣೆ ನೀಡಿದ ಸಂತ್ರಸ್ತೆ, ಕಳೆದ ವರ್ಷ ಆತ ತನ್ನನ್ನು ಯಶ್ ಜೈನ್ ಎಂದು ಪರಿಚಯಿಸಿಕೊಂಡಿದ್ದ ನಂತರ ಪರಿಚಯ ಸ್ನೇಹಕ್ಕೆ ತಿರುಗಿ ಪೋನ್‌ನಲ್ಲಿ ಮೆಸೇಜ್ ಮಾಡಲು ಆರಂಭಿಸುತ್ತಾರೆ, ಸಂಬಂಧದ ಬಗ್ಗೆ ಆತ ಗಂಭೀರವಾಗಿದ್ದು ತನ್ನನ್ನು ಮದುವೆಯಾಗಲು ಬಯಸಿದ್ದ ಅದನ್ನು ನಂಬಿ ಆಕೆ ಆತನೊಂದಿದೆ ಡೇಟಿಂಗ್ ಆರಂಭಿಸಿದಳು.‌ ಆತನ ಚಿಕ್ಕಮ್ಮನ ಮನೆಯಲ್ಲಿ ಆಗಾಗ ಭೇಟಿಯಾಗುತ್ತಿದ್ದರು ಹಾಗೂ ಮದುವೆಯ ಬಗ್ಗೆ ಚರ್ಚಿಸಲು ಮೂರ್ನಾಲ್ಕು ಬಾರಿ ಭೇಟಿಯಾದರು ಆಗ ಆತ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಮತ್ತೆ ಅದೇ ತರದ ವರ್ತನೆ ಮುಂದುವರೆಸಲಾಗಿ ಆಕೆಗೆ ಅನುಮಾನ ಬಂದು ವಿವರ ಸಂಗ್ರಹಿಸಲು‌ ಮುಂದಾದಳು.

ಆತನ ಬಗ್ಗೆ ವಿವರ ಕಲೆಹಾಕ ಹೊರಟ ಆಕೆಗೆ ದೊರಕಿದ ಮಾಹಿತಿಯಂತೆ, ಆತನ‌ ನಿಜವಾದ ಹೆಸರು ಮೊಹಮ್ಮದ್ ಶಾರುಖ್ ಶೇಖ್ ಹಾಗೂ ಚಂದನ್ ನಗರದ ನಯಾಪಿಠದಲ್ಲಿ ಮನೆಯನ್ನು ಹೊಂದಿದ್ದಾನೆ ಎಂದು ತಿಳಿದುಕೊಂಡ ಆಕೆ ಆತನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮನೆಯ ಸದಸ್ಯರನ್ನು ಭೇಟಿಯಾದಾಗ ಆತನಿಗೆ ಈಗಾಗಲೇ ಮದುವೆಯಾಗಿರುವ ವಿಷಯ ಬೆಳಕಿಗೆ ಬಂದು ಆತನ ಕುಟುಂಬಕ್ಕೆ ನಡೆದ ಎಲ್ಲಾ ವಿಷಯ ತಿಳಿಸಿ ನಂತರ ತನ್ನ ಠಾಣೆಗೆ ತೆರಳಿ ದೂರು ಸಲ್ಲಿಸಿದರು. ಆರೋಪಿಯ ವಿರುದ್ಧ ಲವ್ ಜಿಹಾದ್ ನಡೆಸುತ್ತಿದ್ದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You might also like
Leave A Reply

Your email address will not be published.