ನಿಮ್ಮ ವಾಹನಕ್ಕೆ HSRP ಅಳವಡಿಸಿಲ್ಲವೇ? ಕಾದಿದೆ ಸಂಕಷ್ಟ, ಇಂದೇ ನೋಂದಾಯಿಸಿ

ವಾಹನಗಳಿಗೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್(HSRP) ಅಳವಡಿಕೆ ಕಡ್ಡಾಯವಾಗಿದೆ. ಆದರೆ ಸರ್ಕಾರ ನೀಡಿದ ಹಲವು ಗಡುವುಗಳನ್ನು ವಿಸ್ತರಿಸಿ ಇದೀಗ ಮೇ 31ಕ್ಕೆ ಡೆಡ್ ಲೈನ್ ನೀಡಲಾಗಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇನ್ನೂ ವಾಹನಗಳು HSRP ನಂಬರ್ ಪ್ಲೇಟ್ ಅಳವಡಿಸಿಲ್ಲ. ಹೀಗಾಗಿ ಜನರು ಮತ್ತೊಮ್ಮೆ ಗುಡುವು ವಿಸ್ತರಣೆ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸರ್ಕಾರದ ನಿಲುವೇನು ಅನ್ನೋ ಕುತೂಹಲ ಸದ್ಯ ಎಲ್ಲರಲ್ಲೂ ಮನೆ ಮಾಡಿದೆ. ಸರ್ಕಾರದ ನಿಲುವೇನು? ಬನ್ನಿ ಈ ಸ್ಟೋರಿ ಓದೋಣ.

ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಮೇ.31ಕ್ಕೆ ನೀಡಿರುವ ಅಂತಿಮ ಗಡುವು ವಿಸ್ತರಣೆಯಾಗುವ ಸಾಧ್ಯತೆಗಳು ತುಂಬಾ ಕಡಿಮೆಯಿದೆ. ಆದರೆ ಜೂನ್ 4 ರಂದು ಲೋಕಸಭಾ ಫಲಿತಾಂಶ ಘೋಷಣೆಯಾದ ಬಳಿಕ ನೀತಿ ಸಂಹಿತೆ ತೆರವಾಗಲಿದೆ. ಬಳಿಕ ವಾಹನಗಳ HSRP ಅಂಕಿ ಸಂಖ್ಯೆ ನೋಡಿಕೊಂಡು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ.

ಕರ್ನಾಟದಲ್ಲಿ ಸರಿಸುಮಾರು 55 ಲಕ್ಷ ವಾಹನಳು HSRP ನಂಬರ್ ಪ್ಲೇಟ್ ಅಳಡಿಸಿಕೊಂಡಿದೆ. ಇದಕ್ಕಿಂತ ದುಪ್ಪಟ್ಟು ವಾಹನಗಳು ಇನ್ನೂ ಅಳವಡಿಸಿಕೊಂಡಿಲ್ಲ. ಇದು ಸರ್ಕಾರದ ತಲೆನೋವಿಗೆ ಕಾರಣವಾಗಿದೆ. ಲೋಕಸಭಾ ಚುನಾವಣೆ ಕಾರಣದಿಂದ HSRP ನಂಬರ್ ಪ್ಲೇಟ್ ಅಳವಡಿಕೆ, ಬುಕಿಂಗ್ ಗಣನೀಯವಾಗಿ ಇಳಿಕೆಯಾಗಿದೆ.

ಕರ್ನಾಟಕದಲ್ಲಿ ನಡೆದ ಮೊದಲ 14 ಕ್ಷೇತ್ರಗಳ ಮತದಾನದ ಬಳಿಕ ಈ ಕ್ಷೇತ್ರಗಳಲ್ಲಿ HSRP ನಂಬರ್ ಪ್ಲೇಟ್ ಬುಕಿಂಗ್ ಹಾಗೂ ಅಳವಡಿಕೆ ಏರಿಕೆಯಾಗಿದೆ. ಆದರೆ ಉತ್ತರ ಕರ್ನಾಟಕ ಹಾಗೂ ಗ್ರಾಮೀಣ ಭಾಗದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

Is your vehicle not equipped with HSRP? Don't wait, register today

ಮೇ.07ರಂದು ಕರ್ನಾಟಕದಲ್ಲಿ ಇನ್ನುಳಿದ 14 ಕ್ಷೇತ್ರಗಲಿಗೆ ಮತದಾನ ನಡೆಯಲಿದೆ. ಮೇ.8ರಿಂದ HSRP ನಂಬರ್ ಪ್ಲೇಟ್ ಬುಕಿಂಗ್ ಹಾಗೂ ಅಳವಡಿಕೆ ಹೆಚ್ಚಾಗೋ ನಿರೀಕ್ಷೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಮತದಾನ ಕಾರಣ ಮುಂದಿಟ್ಟುಕೊಂಡು ಸರ್ಕಾರ HSRP ನಂಬರ್ ಪ್ಲೇಟ್ ಅಳವಡಿಕೆ ಗಡುವನ್ನು ಕೊನೆಯ ಬಾರಿಗೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

ಒಂದು ವೇಳೆ ರಾಜ್ಯ ಸರ್ಕಾರ HSRP ನಂಬರ್ ಪ್ಲೇಟ್ ಅಳವಡಿಕೆ ಅವಧಿ ವಿಸ್ತರಣೆ ಮಾಡಿದರೆ ಮತ್ತೆ ಮೂರು ತಿಂಗಳು ಅಂದರೆ ಆಗಸ್ಟ್ ಅಂತ್ಯಕ್ಕೆ ಡೆಡ್‌ಲೈನ್ ನೀಡುವ ಸಾಧ್ಯತೆ ಇದೆ. ಸದ್ಯ ಚುನಾವಣೆ ಹಾಗೂ ನೀತಿ ಸಂಹಿತೆ ಕಾರಣ ಸರ್ಕಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ.

HSRP ನಂಬರ್ ಪ್ಲೇಟ್‌ನ್ನು ಆನ್‌ಲೈನ್ ಮೂಲಕ ಬುಕ್ ಮಾಡಿಕೊಳ್ಳಬೇಕು. ಅಲ್ಲೇ ಪಾವತಿ ಮಾಡಬೇಕು. Book my hsrp.com ಅಥವಾ www.siam.in ವೆಬ್‌ಸೈಟ್‌ಗೆ ತೆರಳಿ ವಾಹನದ ರಿಜಿಸ್ಟ್ರೇಶನ್ ನಂಬರ್, ಎಂಜಿನ್, ಚಾಸಿ , ವಿಳಾಸ ಸೇರಿದಂತೆ ಇತರ ಮಾಹಿತಿಗಳನ್ನು ನೀಡಿ ಬುಕಿಂಗ್ ಮಾಡಿಕೊಳ್ಳಬೇಕು. ಹತ್ತಿರದ ಡೀಲರ್ ವಿಳಾಸ ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ನೀವು ಬುಕ್ ಮಾಡಿದ HSRP ನಂಬರ್ ಪ್ಲೇಟ್ ಹತ್ತಿರದ ಡೀಲರ್ ಬಳಿ ಬರಲಿದೆ. ನಿಗದಿತ ದಿನಾಂಕದಂದು ತೆರಳಿ ಅಳವಡಿಸಿಕೊಳ್ಳಬಹುದು.

You might also like
Leave A Reply

Your email address will not be published.