ಬೆಂಗಳೂರಿಗರೇ ಮುಂದಿನ 15 ದಿನ ಈ ಕೆಲಸ ಮಾಡಬೇಡಿ – ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರಿನ ಕಳೆದ 100 ವರ್ಷದ ಇತಿಹಾಸದಲ್ಲಿ ಏಪ್ರಿಲ್ ತಿಂಗಳು ಮಳೆ ಇಲ್ಲದೆ ಸಾಗಿದ್ದು ಇದೇ ಮೊದಲು. ಆದರೆ ಬೆಂಗಳೂರಿಗರ ಪ್ರಾರ್ಥನೆಯನ್ನು ಮಳೆರಾಯ ಕೇಳಿಸಿಕೊಂಡ. ಕೊನೆಗೂ ಮೇ ತಿಂಗಳ ಆರಂಭದಲ್ಲೇ ಮಳೆ ಶುರುವಾಗಿದೆ. ಮೇ.1ರಂದು ತುಂತುರು ಹನಿ ಮೂಡಿಸಿ ಮರೆಯಾಗಿದ್ದ ಮಳೆರಾಯ, ಮೇ 4 ರಂದು ನಿಯಮಿತ ಮಳೆ ಮೂಲಕ ಸಿಹಿ ನೀಡಿದ್ದಾನೆ.

ಒಂದೆಡೆ ಬಿಸಿಲಿನ ಬೇಗೆ, ಮತ್ತೊಂದೆಡೆ ನೀರಿಗೆ ಹಾಹಾಕಾರದಿಂದ ಜನರು ಹೈರಾಣಾಗಿದ್ದರು. ಇದೀಗ ಮಳೆಯ ಸಿಂಚನವಾಗಿದ್ದು ಎಲ್ಲೆಡೆ ಸಂಭ್ರಮ ನೆಲೆಸಿದೆ. ಈ ಸಂಭ್ರಮದ ನಡುವೆ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆ ನೀಡಿದೆ.

ಮುಂದಿನ 2 ವಾರ ಬೆಂಗಳೂರಲ್ಲಿ ಗುಡುಗು ಅಬ್ಬರಿಸಲಿದೆ ಎಂದಿದೆ. ಬಾರಿ ಗುಡುಗು ಅಪ್ಪಳಿಸುವ ಕಾರಣ ಬೆಂಗಳೂರಿಗರು ಅತೀವ ಎಚ್ಚರವಹಿಸಬೇಕಾದ ಅವಶ್ಯಕತೆ ಇದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮುಂದಿನ 2 ವಾರ ಗುಡುಗು ಅಬ್ಬರಿಸುವ ಸಾಧ್ಯತೆಯೆನ್ನು ಹವಾಮಾನ ಇಲಾಖೆ ಸೂಚಿಸಿದೆ. ಗುಡುಗು ಮಿಂಚಿನಿಂದ ಜನಸಾಮಾನ್ಯರು ಎಚ್ಚರಿಕೆಯಿಂದ ಇರಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲ ಮಹತ್ವದ ಸಲಹೆ ನೀಡಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮುಂದಿನ 2 ವಾರ ಗುಡುಗು ಅಬ್ಬರಿಸುವ ಸಾಧ್ಯತೆಯೆನ್ನು ಹವಾಮಾನ ಇಲಾಖೆ ಸೂಚಿಸಿದೆ. ಗುಡುಗು ಮಿಂಚಿನಿಂದ ಜನಸಾಮಾನ್ಯರು ಎಚ್ಚರಿಕೆಯಿಂದ ಇರಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲ ಮಹತ್ವದ ಸಲಹೆ ನೀಡಿದೆ.

ಮಳೆ ಮುನ್ಸೂಚನೆ, ಮೋಡ ಕವಿದ ವಾತಾರವಣವಿದ್ದರೆ ಅನಗತ್ಯ ಕಾರಣಗಳಿಗೆ ಮನೆಯಿಂದ ಹೊರಹೋಗಬೇಡಿ.

ಮನೆಯೊಳಗೆ ಉಳಿದುಕೊಳ್ಳುವುದು ಸುರಕ್ಷಿತ.

ಒಂದು ವೇಳೆ ರಸ್ತೆಯಲ್ಲಿರುವಾಗ, ಸಂಚರಿಸುತ್ತಿರುವಾಗ ಮಳೆ, ಗುಡುಗು, ಮಿಂಚು ಕಾಣಿಸಿಕೊಂಡರೆ ಮರದ ಕೆಳಗೆ ಆಶ್ರಯ ಪಡೆಯಬೇಡಿ, ಜೊತೆಗೆ ಕಂಪೌಂಡ್ ಬಳಿ ನಿಲ್ಲಬೇಡಿ. ಬಯಲು ಪ್ರದೇಶದಲ್ಲಿ ಇದ್ದರೆ ತಗ್ಗು ಪ್ರದೇಶದಲ್ಲಿ ಆಶ್ರಯ ಪಡೆದುಕೊಳ್ಳಿ, ಎತ್ತರ ಪ್ರದೇಶದಿಂದ ದೂರವಿರಿ.

ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್, ಮೊಬೈಲ್ ಟವರ್, ಲೋಹದ ಸ್ಥಂಬ, ತಂತಿ ಬೇಲಿ, ರೈಲ್ವೇ ಹಳಿ, ಕಬ್ಬಿಣದ ಪೈಪ್‌ನಿಂದ ದೂರವಿರಿ‌.

ಕಾರು ಅಥವಾ ವಾಹನಗಳಲ್ಲಿ ಸಂಚರಿಸುತ್ತಿದ್ದರೆ, ಕಾರಿನ ವಿಂಡೋ ಕ್ಲೋಸ್ ಮಾಡಿ. ಕಾರಿನ ಮೆಟಲ್ ಬಾಗಕ್ಕೆ ದೇಹ ತಾಗದಂತೆ ಎಚ್ಚರಹಿಸುವುದು ಸೂಕ್ತ. ಅಥವಾ ಕಾರು ನಿಲ್ಲಿಸಿ ಸುರಕ್ಷಿತ ಕಟ್ಟಡದಲ್ಲಿ ಆಶ್ರಯ ಪಡೆಯುವುದು ಒಳಿತು
ಮಳೆ ಬರುವಾಗ ಅನುಭವಿಸಲು ಟೆರೆಸ್ ಮೇಲೆ ಹತ್ತಬೇಡಿ. ಗುಡುಗು ಸಹಿತ ಮಳೆಯಾಗುವ ಕಾರಣ ದಿಢೀರ್ ಗುಡುಗು ಅಪ್ಪಳಿಸುವ ಸಾಧ್ಯತೆ ಇದೆ. ಇದು ಅಪಾಯ ಹೆಚ್ಚಿಸುತ್ತದೆ.

ಕಾರ್ಮೋಡ ಮಳೆ ಆಗುತ್ತಿರುವ ಸಂದರ್ಭದಲ್ಲಿ ಲೋಹದ ವಸ್ತುಗಳಿಂದ ದೂರವಿರಿ.

ಜಾನುವಾರುಗಳನ್ನು ಬಯಲಲ್ಲಿ, ಹೊರ ಪ್ರದೇಶಗಳಲ್ಲಿ ಬಿಡಬೇಡಿ, ಜಾನುವಾರು ಕೊಟ್ಟಿಗೆಯಲ್ಲಿ ಅಥವಾ ಸೂಕ್ತ ಜಾಗದಲ್ಲಿ ಜಾನುವಾರುಗಳಿಗೆ ಆಶ್ರಯ ನೀಡಿ.

ಕಾಂಕ್ರೀಟ್ ಗೊಡೆಗಳಲ್ಲಿ ಲೋಹ ಬಳಿಸಿರುವ ಕಾರಣ ಅಪಾಯ ಸಾಧ್ಯತೆ ಇದೆ. ಹೀಗಾಗಿ ಕಾಂಕ್ರೀಟ್ ಗೊಡೆಗಳಿಗೆ ಒರಗಿ ನಿಲ್ಲುವುದು, ಕುಳಿತುಕೊಳ್ಳುವುದು ಅಥವಾ ಮಲಗುವುದು ಮಾಡಬೇಡಿ.

You might also like
Leave A Reply

Your email address will not be published.