ಮೃತ್ಯುಂಜಯನಾದ ಸಾತ್ವಿಕ್ – ಈ ಹಿಂದಿನ ಕೊಳವೆ ಬಾವಿ ಪ್ರಕರಣಗಳ ಇತಿಹಾಸ ಇಲ್ಲಿದೆ.

ರಾಜ್ಯದಲ್ಲಿ ಆರೇಳು ಕೊಳವೆ ಬಾವಿ ದುರಂತಗಳು ನಡೆದಿದ್ದರೂ ನಮ್ಮ ಜನ ಇನ್ನೂ ಪಾಠ ಕಲಿತಿಲ್ಲ. ಅದರಿಂದಾಗಿಯೇ ಈಗ ಮತ್ತೊಂದು ಕೊಳವೆಬಾವಿಯಲ್ಲಿ ಬಿದ್ದ ಮಗು, ಚಡಪಡಿಸುವಂತಾದರೆ ಇಡೀ ಕುಟುಂಬವೇ ಕಂಗಾಲಾಗಿದೆ.

ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಸಾತ್ವಿಕ್ ಕೊನೆಗೆ ಸಾವಿನ ದವಡೆಯಿಂದ ಪಾರಾಗಿದ್ದಾನೆ.

17 ಗಂಟೆಗಳ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಕಾರ್ಯಾಚರಣೆ ಯಶಸ್ವಿಯಾಗಿದೆ. ತಲೆ ಕೆಳಗೆ ಬಿದ್ದ ಮಗು ಬದುಕಿ ಉಳಿಯುತ್ತಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಆದರೆ ಪವಾಡ ಎಂಬಂತೆ ಸಾತ್ವಿಕ್ ಬದುಕಿ ಉಳಿದಿದ್ದುಅಂಬುಲೆನ್ಸ್ ಮೂಲಕ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ.

2006 ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ರಾಯಚೂರು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು ಐದು ಪ್ರಕರಣಗಳು ನಡೆದಿವೆ. ಆದರೆ ಒಂದರಲ್ಲಿ ಮಾತ್ರ ಮಹಿಳೆಯನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ. ಉಳಿದ ನಾಲ್ಕು ಕಡೆಗಳಲ್ಲಿ ಮಕ್ಕಳು ಸಾವನ್ನಪ್ಪಿವೆ. ಅದೃಷ್ಟವಶಾತ್ ಇದೀಗ ಬಿದ್ದ ಮಗುವನ್ನು ಆಚೆ ತಗೆಯಲಾಗಿದ್ದು, ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿದ್ದಾನೆ.

ಈ ಹಿಂದೆ ನಡೆದ ಪ್ರಕರಣಗಳ ಕುರಿತಾದ ಮಾಹಿತಿ:

• 2007ರಲ್ಲಿ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಸಂದೀಪ್ ಎಂಬ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದ. 58 ಗಂಟೆ ಕಾರ್ಯಾಚರಣೆ ನಡೆಸಿದರೂ ಮಗು ಬದುಕಿ ಬರಲಿಲ್ಲ.
• 2008ರಲ್ಲಿ ಬಾಗಲಕೋಟೆ ಜಿಲ್ಲೆಯ ಸೀಮಿಕೇರಿಯಲ್ಲಿ ಕಲ್ಲವ್ವ ಎಂಬ ಮಹಿಳೆ ಕೊಳವೆ ಬಾವಿಗೆ ಬಿದ್ದಿದ್ದಳು. ಸತತ ಆರು ಗಂಟೆ ಕಾರ್ಯಚರಣೆ ನಡೆಸಿ ಅವಳನ್ನು ಸುರಕ್ಷಿತವಾಗಿ ಹೊರ ತರಲಾಗಿತ್ತು. ಆಗ ಅವಳಿಗೆ ಬದುಕಿ ಬಂದ ಫ್ರಿನ್ಸ್ ಅಂತ ಹೆಸರು ಕೊಡಲಾಗಿತ್ತು.
• 2009ರಲ್ಲಿ ವಿಜಯಪುರ ಜಿಲ್ಲೆಯ ಈಗಿನ ಚಡಚಣ ತಾಲೂಕಿನ ದೇವರನಿಂಬರಗಿಯಲ್ಲಿ ಕಾಂಚಣಾ ಎಂಬ ಹೆಣ್ಣು ಮಗು ಕೊಳವೆ ಬಾವಿಯಲ್ಲಿ ಬಿದ್ದಿದ್ದಳು. ಆಗ ಹತ್ತು ದಿನ ಕಾರ್ಯಾಚರಣೆ ನಡೆಸಿದರೂ ಮಗುವನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಆಗ ಎನ್ʼಡಿಆರ್‌ʼಎಫ್ ತಂಡ, ಹಟ್ಟಿ ಚಿನ್ನದ ಗಣಿ ತಂಡ ಹತ್ತು ದಿನ ಕಾರ್ಯಾಚರಣೆ ನಡೆಸಿದ್ದವು.
• 2014ರಲ್ಲಿ ವಿಜಯಪುರ ತಾಲೂಕಿನ ದ್ಯಾಬೇರಿಯಲ್ಲಿ ಮಗುವೊಂದು ಕೊಳವೆ ಬಾವಿಗೆ ಬಿದಿತ್ತು. ಮಗುವನ್ನು ಹೊರತೆಗೆಯಲು ಕಾರ್ಯಾಚರಣೆ ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ.
• 2014ರ ಆ 4ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿಯೂ ತಿಮ್ಮಣ್ಣ ಹಟ್ಟಿ ಎಂಬ ಬಾಲಕನನ್ನು ಹೊರ ತೆಗೆಯಲು ಒಂದು ವಾರ ಕಾರ್ಯಚರಣೆ ನಡೆಸಲಾಯಿತು. ಆದರೆ ಬದುಕಿ ಬರಲಿಲ್ಲ.
• 2017ರ ಏಪ್ರಿಲ್ 23ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡದಲ್ಲಿ ಮಗುವೊಂದು ಕೊಳವೆಬಾವಿಗೆ ಬಿದ್ದಾಗ ವಾರ ಕಾಲ ಕಾರ್ಯಾಚರಣೆ ನಡೆಸಿದರೂ ಮಗುವನ್ನು ಬದುಕಿಸಲಾಗಲಿಲ್ಲ.

Mrityunjayana Satvik - Here is the history of these earlier tubewell cases.

ಬೋರ್ವೆಲ್ ಅನಿವಾರ್ಯ:

ರೈತರಿಗೆ ತಮ್ಮ ಹೊಲದಲ್ಲಿನ ಬೆಳೆಗಳನ್ನು ಉಳಿಸಿಕೊಳ್ಳಲು ಕೊಳವೆ ಬಾವಿ ಕೊರೆಸುವುದು ಸಾಮಾನ್ಯ. ಅದರಲ್ಲೂ ಮಳೆಯಾಗದಿದ್ದಾಗ ಬೆಳೆ ಉಳಿಸಿಕೊಳ್ಳಲು ಬೋರ್’ವೆಲ್ ಕೊರೆಸುತ್ತಾರೆ. ಆದರೆ ಕೆಲ ಕಡೆಗಳಲ್ಲಿ ನೀರು ಬರುತ್ತದೆ. ಆಗ ಅವುಗಳನ್ನು ಉಪಯೋಗಿಸುತ್ತಾರೆ. ಇನ್ನು ಕೆಲ ಕಡೆಗಳಲ್ಲಿ ನೀರು ಬರದಿದ್ದಾಗ ನೊಂದ ರೈತರು ಅವುಗಳನ್ನು ಮುಚ್ಚುವ ಗೋಜಿಗೆ ಹೋಗುವುದಿಲ್ಲ. ಅದರಿಂದಾಗಿಯೇ ಇಂತಹ ದುರ್ಘಟನೆಗಳು ನಡೆಯುತ್ತಿವೆ. ಹಿಂದಿನ ಘಟನೆಗಳು ಗೊತ್ತಿದ್ದರೂ ಅವುಗಳನ್ನು ಮಾತ್ರ ಜನರು ಮುಚ್ಚಲು ಮನಸ್ಸು ಮಾಡಲ್ಲ.

ಕೊಳವೆ ಮುಚ್ಚಲು ಹಿಂದೇಟು ಏಕೆ?

ಸರಕಾರ ಪ್ರತಿ ಸಲ ಘಟನೆ ಆದಾಗಲೂ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಆದೇಶ ನೀಡುತ್ತದೆ. ಆದರೆ ನಮ್ಮ ಜನ ಕೊರೆಸಿದ ಬೋರ್’ವೆಲ್ಗಳಲ್ಲಿ ನೀರು ಬರಲಿಲ್ಲಅಂದ ತಕ್ಷಣ ಅದನ್ನು ಯಾಕೆ ಮುಚ್ಚಲು ಹಿಂದೇಟು ಹಾಕುತ್ತಿದ್ದಾರೆ ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ. ಈಗಾಗಲೇ ರಾಜ್ಯದಲ್ಲಿ ಐದು ಘಟನೆಗಳು ನಡೆದಿವೆ. ಇನ್ನಾದರೂ ನಮ್ಮ ಜನ ಎಚ್ಚೆತ್ತುಕೊಳ್ಳಬೇಕಿದೆ.

ಕೊಳವೆಬಾವಿ ಮುಚ್ಚಿ

ತೆರೆದ ಕೊಳವೆ ಬಾವಿಯಲ್ಲಿ ನೀರು ಇಲ್ಲಎಂಬ ಕಾರಣಕ್ಕೆ ಅವುಗಳನ್ನು ಹಾಗೆ ಬಿಡುವುದು ಸರಿಯಲ್ಲ. ಕೂಡಲೇ ಯಾವ ಯಾವ ರೈತರು ತೆರೆದ ಕೊಳವೆ ಬಾವಿಗಳನ್ನು ಹೇಗೆ ಬಿಟ್ಟಿದ್ದೀರೋ ಅವರೆಲ್ಲಅವುಗಳನ್ನು ಕೂಡಲೇ ಮುಚ್ಚಿ. ಇನ್ನಷ್ಟು ಬಲಿಯಾಗುವುದನ್ನು ತಪ್ಪಿಸಿ.

You might also like
Leave A Reply

Your email address will not be published.