ದೇಶದ ಭಧ್ರತೆಗೆ ಭಂಗ ತರಲಿದೆಯೇ ಈ ರೈತ ಪ್ರತಿಭಟನೆ?

ನವದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಭಾಗವಾಗಿ ಈಗ ಮಾರ್ಚ್ 10ರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ರ ತನಕ ರಾಷ್ಟ್ರದಾದ್ಯಂತ ‘ರೈಲ್ ರೋಕೋ’ (ರೈಲು ನಿಲ್ಲಿಸಿ) ಪ್ರತಿಭಟನೆ ನಡೆಯಲಿದೆ. ಆದರೆ, ಈ ಪ್ರತಿಭಟನೆಗೂ ದೇಶದಾದ್ಯಂತ ರೈತರು ಮಾರ್ಚ್ 6 ರಂದು ನವದೆಹಲಿಯ ಕಡೆಗೆ ಮೆರವಣಿಗೆ ನಡೆಸಲಿದ್ದಾರೆ ಎಂದು ರೈತ ಸಂಘಟನೆಗಳ ಪ್ರಮುಖರು ಮಾರ್ಚ್ 3 ರಂದು ಘೋಷಣೆ ಮಾಡಿದ್ದಾರೆ.

ರೈತ ಪ್ರತಿಭಟನೆಯ ಹೊಸ ಸ್ವರೂಪವನ್ನು ವಿವರಿಸುವಾಗ, ರೈತರು ಗಡಿಭಾಗದಲ್ಲಿ ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿದ್ದೇವೆಯೇ ಹೊರತು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ಮಾರ್ಚ್ 6ರಂದು ದೇಶದ ವಿವಿದೆಡೆಯ ರೈತರು ರೈಲು, ಬಸ್ಸು, ವಿಮಾನಗಳ ಮೂಲಕ ನವದೆಹಲಿ ತಲುಪಲಿದ್ದಾರೆ ಹಾಗೂ ಮಾರ್ಚ್ 12 ರಂದು ನಡೆಯುವ ರೈಲು ರೋಕೋ ಪ್ರತಿಭಟನೆಯನ್ನು ಸರ್ಕಾರ ಹೇಗೆ ತಡೆಯಲಿದೆ ಎಂದು ನಾವು ನೋಡುತ್ತೇವೆ ಎಂದು ರೈತನಾಯಕರಾದ ಜಗಜಿತ್ ಸಿಂಗ್ ದಲ್ಲೇವಾಲ್ ಅವರು ಸವಾಲು ಹಾಕಿದ್ದಾರೆ.

ಪೆಬ್ರವರಿ 13 ರಂದು ಆರಂಭವಾದ ಈ ರೈತ ಪ್ರತಿಭಟನೆಯಲ್ಲಿ ಹೆಚ್ಚಿನವರು ಪಂಜಾಬ್ ಮತ್ತು ಹರಿಯಾಣದವರೇ ಆಗಿದ್ದಾರೆ ಹಾಗೂ ಉಭಯ ರಾಜ್ಯಗಳ ಗಡಿಗಳಲ್ಲೇ ಬೀಡು ಬಿಟ್ಟಿದ್ದಾರೆ.‌ ಕೆಲ ದಿನಗಳ ಹಿಂದೆ ಭದ್ರತಾ ಸಿಬ್ಬಂದಿ ಮತ್ತು ಹಿಂಸಾತ್ಮಕ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಪ್ರತಿಭಟನಾಕಾರನೋರ್ವ ಸಾವನ್ನಪ್ಪಿದ್ದರಿಂದ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಎರಡು ದಿನಗಳ ಮಟ್ಟಿಗೆ ತಡೆಹಿಡಿಯಲಾಗಿತ್ತು.

ರೈತ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆದುಕೊಳ್ಳಬಹುದೆಂಬ ನಿಟ್ಟಿನಲ್ಲಿ ರಸ್ತೆಗಳಲ್ಲಿ ಹಾಕಲಾಗಿದ್ದ ಮೊಹರು, ಸಿಮೆಂಟ್ ಹಂಪ್, ಬಿಗಿ ಭದ್ರತೆಯನ್ನು ತೆಗೆಯಲಾಗಿದ್ದು ಈ ಮೂಲಕ ದೇಶದ ಉಳಿದ ನಾಗರೀಕರಿಗೆ ಸುಗಮ ಸಂಚಾರ ಕಲ್ಪಿಸಲು ಸಾಧ್ಯವಾಗಿದೆ.

You might also like
Leave A Reply

Your email address will not be published.